ಸ್ನೇಹಕ್ಕೆ ಸಾವಿಲ್ಲ ಅಂತಾರೆ….ಈ ಮಾತಿಗೆ ಜೀವಂತ ಸಾಕ್ಷಿ ದಿವಗಂತ ನಟ ಚಿರಂಜೀವಿ ಸರ್ಜಾ ಸ್ನೇಹಿತರು. ಚಿರು ಸಾವಿನ ಜೊತೆಗೆ ಸ್ನೇಹ ಕೊನೆಯಾಗಲ್ಲ ಅಂತ ಸಾಬೀತುಪಡಿಸಿರೋ ಪ್ರೆಂಡ್ಸ್ ಪತಿಯ ಅಗಲಿಕೆಯ ನೋವಿನಲ್ಲಿರೋ ಮೇಘನಾ ರಾಜ್ ಸರ್ಜಾಗೆ ಖಾಸಗಿ ಹೊಟೇಲ್ ನಲ್ಲಿ ಗ್ರ್ಯಾಂಡ್ ಬೇಬಿ ಶೋವರ್ ಮಾಡೋ ಮೂಲಕ ತಮ್ಮ ಸ್ನೇಹ ಅಜರಾಮರ ಎಂದಿದ್ದಾರೆ.

ನಟ ಪ್ರಜ್ವಲ್ ದೇವರಾಜ್, ಅವರ ಪತ್ನಿ, ಪನ್ನಗ ಭರಣ ಹೀಗೆ ಚಿರು ಆಪ್ತ ಸ್ನೇಹಿತರ ಬಳಗವೆಲ್ಲ ಸೇರಿ ಅದ್ದೂರಿಯಾಗಿ ಮೇಘನಾ ಬೇಬಿ ಶೋವರ್ ನೆರವೇರಿಸಿದ್ದು, ಹುಟ್ಟುವ ಮಗುವಿಗೆ ಶುಭ ಹಾರೈಸಿದ್ದಾರೆ.

ಮೇಘನಾ ತವರು ಮನೆಯಲ್ಲಿ ನಡೆದ ಸೀಮಂತದಂತೆ ಇಲ್ಲೂ ಕೂಡ ಚಿರು ಕಟೌಟ್ ಜೊತೆಯಲ್ಲೇ ಬೇಬಿ ಶೋವರ್ ನಡೆದಿದ್ದು, ಅಚ್ಚನೀಲಿ ಸೂಟ್ ನಲ್ಲಿ ಚಿರು ಕಟೌಟ್ ನಿಲ್ಲಿಸಲಾಗಿದ್ದು, ಈಗ ಚಿರು ಎದ್ದು ಬರುತ್ತಾರೆ ಎಂಬಂತಿತ್ತು. ಇನ್ನು ಮೇಘನಾ ಕೂಡ ತೆಳುನೀಲಿ ಗೌನ್ ನಲ್ಲಿ ಖುಷಿ ಖುಷಿಯಾಗಿ ತಮ್ಮ ನೋವನ್ನು ಮರೆಯೋ ಪ್ರಯತ್ನ ಮಾಡಿದ್ದಾರೆ.

ಸ್ನೇಹಿತರ ಸಪ್ರೈಸ್ ಕೊಡುಗೆಗೆ ಮೇಘನಾ ಥ್ಯಾಂಕ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದರೇ, ಪನ್ನಗಾಭರಣ ನಿಮ್ಮ ನಗು ಮೊಗ ಎಂದಿಗೂ ಹೀಗೆ ಇರಲಿ ಎಂಬ ಬರಹದೊಂದಿಗೆ ಪಾರ್ಟಿಯ ಪೋಟೋ ಹಂಚಿಕೊಂಡಿದ್ದಾರೆ. ಕೇಕ್ ಕತ್ತರಿಸಿದ ಮೇಘನಾ ತಮ್ಮ ಬೇಬಿ ಶೋವರ್ ಗೆ ಚಿರು ಪೋಟೋಕಟೌಟ್ ಸಿದ್ಧಪಡಿಸಿದ್ದಕ್ಕೆ ಸ್ನೇಹಿತರಿಗೆ ವಿಶೇಷ ಧನ್ಯವಾದ ಹೇಳಿದ್ದಾರೆ ಎನ್ನಲಾಗಿದೆ.

ಚಿರು ನಿಧನದ ಬಳಿಕವೂ ಅವರ ಈ ಸ್ನೇಹಿತರ ಗ್ಯಾಂಗ್ ಆಗಾಗ ಮೇಘನಾ ಭೇಟಿ ಮಾಡುತ್ತಿದ್ದು, ಅವರ ದುಃಖವನ್ನು ಹಂಚಿಕೊಳ್ಳುವ ಹಾಗೂ ಮೇಘನಾ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡೋ ಮೂಲಕ ಸ್ನೇಹದ ಮಹತ್ವದ ಸಂದೇಶ ಸಾರುವ ಪ್ರಯತ್ನ ನಡೆಸಿದೆ.