ಪೂರ್ಣಿಮಾ ಹೆಗಡೆ
ಚಿರು ಸರ್ಜಾ ಅಗಲಿಕೆಯಿಂದ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಕುಟುಂಬ ಅಪಾರವಾದ ನೋವು ಅನುಭವಿಸುತ್ತಿದೆ. ಇದರೊಂದಿಗೆ ಮಗಳ ಸಂಸಾರದ ಸ್ಥಿತಿ ಕಂಡು ಕಂಗಾಲಾಗಿದ್ದ ಸುಂದರ ರಾಜ್ ದೇವರ ಮೊರೆ ಹೋಗಿ ಹರಕೆ ಹೊತ್ತಿದ್ದರಂತೆ, ಈಗ ಹರಕೆ ತೀರಿಸಿದ್ದಾರೆ.


ಚಿರು ಸರ್ಜಾ ನಿಧನರಾದಾಗ ಅವರ ಪತ್ನಿ ಮೇಘನಾ ರಾಜ್ ನಾಲ್ಕೈದು ತಿಂಗಳ ಗರ್ಭಿಣಿ. ಮಗಳ ಸ್ಥಿತಿ ಕಂಡು ಕಂಗಾಲಾಗಿ ಹೋಗಿದ್ದ ಸುಂದರ ರಾಜ್, ಮಗಳು ಸುರಕ್ಷಿತವಾಗಿ ಇದ್ದು, ಮಗುವಿಗೆ ಜನ್ಮನೀಡೋ ಹಾಗೇ ಮಾಡಪ್ಪ ಅಂತ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದರಂತೆ.


ತಾಯಿ- ಮಗುವಿನ ಸುರಕ್ಷತೆಗಾಗಿ ಹರಕೆ ಹೊತ್ತಿದ್ದ ಸುಂದರರಾಜ್, ಕಳೆದ ನಾಲ್ಕೈದು ತಿಂಗಳಿನಿಂದ ಹೇರ್ ಕಟ್ ಕೂಡ ಮಾಡಿಸದೇ ಕೂತಿದ್ದರಂತೆ.

ಅಕ್ಟೋಬರ್ 22 ರಂದು ಮೇಘನಾ ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಸುರಕ್ಷಿತವಾಗಿದ್ದು, ವಿಜಯ ದಶಮಿಯ ಶುಭ ದಿನದಂದು ಮೇಘನಾ ರಾಜ್ ತಮ್ಮ ಕಂದಮ್ಮನ ಜೊತೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಹೀಗಾಗಿ ಮಗಳ ಸುರಕ್ಷಿತ ಹೆರಿಗೆಗಾಗಿ ಹರಕೆ ಹೊತ್ತಿದ್ದ ಸುಂದರ ರಾಜ್ ಕೂಡ ತಿರುಪತಿಗೆ ತೆರಳಿ ಮುಡಿ ಒಪ್ಪಿಸಿ ಹರಕೆ ತೀರಿಸಿ ಮೊಮ್ಮಗನ ಹೆಸರಿನಲ್ಲಿ ಪೂಜೆ ಮಾಡಿಸಿಕೊಂಡು ಹಿಂತಿರುಗಿದ್ದಾರೆ.
ಕೆಲದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಂದರ ರಾಜ್, ಯಾರು ತಪ್ಪು ತಿಳಿಯಬೇಡಿ.
ಮಗಳ ಸುರಕ್ಷಿತ ಡೆಲಿವರಿಗೆ ಮುಡಿಕೊಡುವುದಾಗಿ ಹರಕೆ ಹೊತ್ತಿದ್ದೇನೆ ಅದಕ್ಕೆ ಗಡ್ಡ ಬಿಟ್ಟಿದ್ದೇನ ಎಂದಿದ್ದರು. ಈಗ ಹರಕೆ ಸಮರ್ಪಿಸಿ ನಿರಾಳವಾದ ಭಾವದಲ್ಲಿದ್ದಾರೆ.