ಬಾಲಿವುಡ್ ಖ್ಯಾತ ನಟ ಜಾನ್ಅಬ್ರಹಾಂ (John Abraham`s) ಮಲಯಾಲಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ “ಮೈಕ್” (John Abraham Mike)ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿರುವ ಜಾನ್ ಅಬ್ರಾಹಂ ಸಿನಿಮಾದ ಕೆಲವು ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೈಕ್ ಸಿನಿಮಾಆಗಸ್ಟ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖುದ್ದು ಜಾನ್ ಅಬ್ರಾಹಂ ತಿಳಿಸಿದ್ದಾರೆ. ವಿಷ್ಣು ಶಿವಪ್ರಸಾದ್ ನಿರ್ದೇಶನದ ಮೈಕ್’ ಚೊಚ್ಚಲ ನಟ ರಂಜಿತ್ ಸಜೀವ್ `ತಣ್ಣೀರ್ ಮಥನ್ ದಿನಂಗಳು’ (Thanneer Mathan Dinangal) ಖ್ಯಾತಿಯ ಅನಸ್ವರ ರಾಜನ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಜಾನ್ ಅಬ್ರಾಹಂ ತಮ್ಮ ನಿರ್ಮಾಣದ ಸಿನಿಮಾದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, “ಚಿತ್ರಕ್ಕಾಗಿ ಕಾಯಲು ಸಾಧ್ಯವಿಲ್ಲ,” ಎಂದು ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಮೊದಲ ಮಲಯಾಳಂ ನಿರ್ಮಾಣಕ್ಕೆ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಹೊಸ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ನಟರು ಬೈಕ್‌ನಲ್ಲಿ ಕುಳಿತಿರುವ ಪೋಸ್ಟರ್ ಸಕ್ಕತ್ ಸುದ್ದಿ ಮಾಡುತ್ತಿದೆ ಹಾಗೂ ಆಶಿಕ್ ಅಕ್ಬರ್ ಅಲಿ ಚಿತ್ರಕಥೆ ಬರೆದಿದ್ದಾರೆ.
ಇದರ ಮಧ್ಯ ಜಾನ್ ತಮ್ಮ ಬಾಲಿವುಡ್ ಚಿತ್ರ ಏಕ್ ವಿಲನ್ ರಿಟರ್ನ್ಸ್ ಪ್ರಚಾರದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅರ್ಜುನ್ ಕಪೂರ್, ತಾರಾ ಸುತಾರಿಯಾ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಉತ್ಸುಕರಾದ ಜಾನ್, “ನಾನು ಏಕ್ ವಿಲನ್ ರಿಟರ್ನ್ಸ್ ಚಿತ್ರದ ಸ್ಕ್ರಿಪ್ಟ್ ಅನ್ನು ಓದಿದಾಗ, ನಾನು ಮಾಡಬಲ್ಲೆ ಎಂದು ಎನಿಸಿತು .ಏಕೆಂದರೆ ಅದು ನನಗೆ ಹೋಮ್‌ಕಮಿಂಗ್‌ನಂತಿದೆ. ನನ್ನ ಬಾಲಿವುಡ್ ಚೊಚ್ಚಲ ಜಿಸ್ಮ್ ಮೋಹಿತ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಚಲನಚಿತ್ರ . ಕೆಲಸ ಮಾಡಿದ್ದೇನೆ, ಇನ್ನು ಅವರ ಜೊತೆ ಕೆಲಸ ಮಾಡಲು ತುಂಬಾ ಉತ್ಸುಕನಾಗಿದ್ದೇನೆ.
ಮೋಹಿತ್ ಸೂರಿ ಅವರ ನಿರ್ದೇಶನದ 2014 ರ ಹಿಟ್ ಚಿತ್ರ ಏಕ್ ವಿಲನ್‌ನ ಮುಂದುವರಿದ ಭಾಗವಾಗಿದೆ, ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶ್ರದ್ಧಾ ಕಪೂರ್ ಮತ್ತು ರಿತೇಶ್ ದೇಶಮುಖ್ ನಟಿಸಿದ್ದಾರೆ. ಹೊಸ ಆವೃತ್ತಿಯು ಜುಲೈ 29 ರಂದು ಚಿತ್ರಮಂದಿರಗಳಿಗೆ ಬರಲಿದೆ.
ಇದನ್ನೂ ಓದಿ :OTT Release Movies: ಜುಲೈನಲ್ಲಿ ರಿಲೀಸ್ ಆಗಲಿರುವ ಒಟಿಟಿ ಚಿತ್ರಗಳು ಯಾವುವು ಗೊತ್ತಾ !
John Abraham Mike : John Abraham’s debut Malayalam production to hit theatres on August 19