ಸೋಮವಾರ, ಏಪ್ರಿಲ್ 28, 2025
HomeCinemaMP Sumalatha Birthday : ಹೆಬ್ಬುಲಿ-ಯಜಮಾನ ಸ್ನೇಹಮಿಲನ: ಸುಮಲತಾ ಬರ್ತಡೇ ಪಾರ್ಟಿಯಲ್ಲಿ ನಡೆಯಲಿದೆ ಸಂಧಾನ

MP Sumalatha Birthday : ಹೆಬ್ಬುಲಿ-ಯಜಮಾನ ಸ್ನೇಹಮಿಲನ: ಸುಮಲತಾ ಬರ್ತಡೇ ಪಾರ್ಟಿಯಲ್ಲಿ ನಡೆಯಲಿದೆ ಸಂಧಾನ

- Advertisement -

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ‌ ನಡುವೇ ಸ್ನೇಹವಿದ್ದಷ್ಟೇ ,ಮುನಿಸು ಕೂಡ ಇದೆ. ಅಂತಹುದೇ ಮುನಿಸಿನಲ್ಲಿ ಒಂದು ಕಾಲದ‌ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್ ದೂರವಾಗಿದ್ದರು. ಸುದೀರ್ಘ ಆರು ವರ್ಷಗಳಿಂದ ಈ ವೈರತ್ವ ನಡೆಯುತ್ತಲೇ‌ ಇತ್ತು. ಆದರೆ ಈಗ ದರ್ಶನ್ ಮತ್ತು ಸುದೀಪ್ (MP Sumalatha Birthday) ಮತ್ತೆ ಒಂದಾಗೋ‌ ಮುನ್ಸೂಚನೆ ಸಿಕ್ಕಿದೆ.

ಹೌದು ನಟ ದರ್ಶನ್ ಹಾಗೂ ಸುದೀಪ್ ಹೋರಾಟದಿಂದಲೇ ಸ್ಯಾಂಡಲ್ ವುಡ್ ನಲ್ಲಿ ನೆಲೆ‌ ನಿಂತವರು. ಹೀಗಾಗಿಯೇ ಇವರ ನಡುವೆ ಒಂದೊಳ್ಳೆ ಸ್ನೇಹವಿತ್ತು. ಪರಸ್ಪರ ಪ್ರೀತಿ ಹಾಗೂ ಗೌರವವಿತ್ತು. ಪಾರ್ಟಿ, ಕ್ರಿಕೆಟ್ ಮ್ಯಾಚ್ ಹೀಗೆ ಎಲ್ಲಾ ಸಂದರ್ಭದಲ್ಲೂ ದರ್ಶನ್ ಹಾಗೂ ಸುದೀಪ್ ಪ್ರೀತಿಯಿಂದ ಜೊತೆ ಸೇರುತ್ತಿದ್ದರು. ಸಿನಿಮಾ ರಿಲೀಸ್ ಹೀಗೆ ಎಲ್ಲಾ ಹೊತ್ತಿನಲ್ಲೂ ಜೊತೆ ಜೊತೆಯಾಗಿ ಕಾಣಿಸಿಕೊಳ್ತಿದ್ದ ಈ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಯಾವುದೋ ಒಂದು ಕ್ಷಣದಲ್ಲಿ ಹುಟ್ಟಿದ ಮುನಿಸು ಈ ಇಬ್ಬರೂ ಕನ್ನಡದ ಸ್ಟಾರ್ ನಟರ ಮಧ್ಯದಲ್ಲಿ ಅಂತರ ಸೃಷ್ಟಿಸಿತ್ತು.

ಒಬ್ಬರ ಮುಖ ಒಬ್ಬರು ನೋಡದಂತೆ, ಪರಸ್ಪರ ಕಾರ್ಯಕ್ರಮಗಳಲ್ಲಿ ಒಂದಾಗಿ‌ಕಾಣಿಸದಂತೆ ಅಂತರ ಕಾಯ್ದುಕೊಂಡಿದ್ದರು. ಅಷ್ಟೇ ಅಲ್ಲ ಆಗಾಗ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಸೋಷಿಯಲ್ ಮೀಡಿಯಾದಲ್ಲೂ ವಾರ್ ಜೋರಾಗಿ ನಡೆಯುತ್ತಲೇ ಇತ್ತು. ಅದ್ಯಾಕೋ‌ ಗೊತ್ತಿಲ್ಲ ಹಲವು ವರ್ಷದಿಂದ ದರ್ಶನ್ ಕೇವಲ ಸುದೀಪ್‌ ಮಾತ್ರವಲ್ಲ ಮೀಡಿಯಾದ ಜೊತೆಗೂ ತಮ್ಮ ಬಾಂಧವ್ಯ ಮುರಿದುಕೊಂಡಿದ್ದರು.

ಎಲ್ಲರಿಂದ ದೂರವಾಗಿ ಒಂದು ರೀತಿ ಸ್ಯಾಂಡಲ್ ವುಡ್ ನಲ್ಲೊಂದು ದ್ವೀಪದಂತಾಗಿ ಹೋಗಿದ್ದರು. ಇತ್ತೀಚಿಗಷ್ಟೇ ನಟ ದರ್ಶನ್ ತಮ್ಮ ದೊಡ್ಡ ತಪ್ಪೊಂದನ್ನು ಸರಿಪಡಿಸಿಕೊಂಡು ಮಾಧ್ಯಮಗಳ ಜೊತೆ ರಾಜಿ ಪಂಚಾಯತಿ ಮಾಡಿಕೊಂಡು ಮತ್ತೆ‌ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಇದರ ಬೆನ್ನಲ್ಲೇ ಈಗ ಕನ್ನಡದ ಸಿನಿ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು ಸುದೀಪ್ ಹಾಗೂ ದರ್ಶನ್ ಮತ್ತೊಮ್ಮೆ ರಿಯಲ್ ಲೈಫ್ ನಲ್ಲಿ ಒಂದಾಗಲಿದ್ದಾರೆ ಅನ್ನೋದು.

ಉನ್ನತ ಮೂಲಗಳ ಮಾಹಿತಿ ಪ್ರಕಾರ, ಅಗಸ್ಟ್ 27 ರಂದು ಸುಮಲತಾ ಹುಟ್ಟುಹಬ್ಬವಿದೆ. ಆ ಪ್ರಯುಕ್ತ ನಟಿ ಹಾಗೂ ಸಂಸದೆ ಸುಮಲತಾ ನಗರದ ಸ್ಟಾರ್ ಹೊಟೇಲ್ ವೊಂದರಲ್ಲಿ ಹುಟ್ಟುಹಬ್ಬದ ಪಾರ್ಟಿ ಆರೇಂಜ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ನಟ ದರ್ಶನ್ ಹಾಗೂ ನಟ ಸುದೀಪ್ ಪಾಲ್ಗೊಳ್ಳಲಿದ್ದು, ಇದೇ ಪಾರ್ಟಿಯಲ್ಲಿ ನಟಿ ಹಾಗೂ ಸಂಸದೆ ಸುಮಲತಾ ಸಮ್ಮುಖದಲ್ಲೇ ಸುದೀಪ್ ಹಾಗೂ ದರ್ಶನ್ ನಡುವೆ ಸಂಧಾನ ನಡೆಯಲಿದೆ ಎನ್ನಲಾಗ್ತಿದೆ. ಇಬ್ಬರೂ ನಟರು ಸುಮಲತಾ‌ಮಾತಿಗೆ ಬೆಲೆ ಕೊಟ್ಟು ತಮ್ಮ ಎಲ್ಲ ವೈಮನಸ್ಸು ಮರೆತು ಮತ್ತೆ‌ ಸ್ನೇಹಿತರಾಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ : Vijaya Raghavendra – Spandana : ಅಗಲಿಕೆಯ ನಡುವಲ್ಲೇ‌ ಬಂತು ಆನ್ಯಿವರ್ಸರಿ : ಸ್ಪಂದನಾಗೆ ವಿಜಯ್ ರಾಘವೇಂದ್ರ ಭಾವುಕ ವಿದಾಯ

ಸುಮಲತಾ ಕುಟುಂಬದೊಂದಿಗೆ ಸುದೀಪ್ ಹಾಗೂ ದರ್ಶನ್ ಇಬ್ಬರೂ ಅತ್ಯಂತ ಆತ್ಮೀಯ ಬಾಂಧವ್ಯ ಹೊಂದಿದ್ದು ಅಂಬಿ ನಿಧನ, ಸುಮಲತಾ ಎಲೆಕ್ಷನ್ ಹಾಗೂ ಅಭಿಷೇಕ್ ಮದುವೆ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಇಬ್ಬರೂ ನಟರು ಸುಮಲತಾ ಕುಟುಂಬದ ಜೊತೆ ನಿಂತಿದ್ದರು. ಈಗ ಇಬ್ಬರೂ ನಟರ ನಡುವೆ ಮತ್ತೊಮ್ಮೆ ಸಾಮರಸ್ಯದ ನಂಟು ಬೆಸೆಯಲು ಕೂಡ ಸುಮಲತಾ ಕುಟುಂಬವೇ ಕಾರಣವಾಗ್ತಿರೋದು ಕನ್ನಡಿಗರ ಪಾಲಿಗೆ ಖುಷಿ ಹಾಗೂ ಸಂಭ್ರಮದ ವಿಷಯವಾಗಿದೆ.

MP Sumalatha Birthday: Hebbuli-Yajamana Reunion: Sumalata’s birthday party will be a meeting

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular