ನಟಿ ಮೇಘನಾ ಸರ್ಜಾ (Meghana Raj Sarja) ಸದ್ಯ ನಟನೆ, ರಿಯಾಲಿಟಿ ಶೋ ಜೊತೆಗೆ ತಮ್ಮದೇ ಆದ ಸೋಷಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ನಲ್ಲೂ ಬ್ಯುಸಿಯಾಗಿದ್ದಾರೆ. ಯೂಟ್ಯೂಬ್ ಚಾನೆಲ್ ಆರಂಭಿಸಿದ ಮೇಘನಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಸದ್ಯ ಮೇಕಪ್, ಫುಡ್ ಬಗ್ಗೆ ಮಾತನಾಡಿದ್ದ ಮೇಘನಾ ಈಗ ಪ್ರೆಂಡ್ ಜೊತೆ ಸಂಡೇ ಬ್ರಂಚ್ ವಿಡಿಯೋ ಶೇರ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.
ನಡಿ ಮೇಘನಾ ರಾಜ್ ಬದುಕಿನಲ್ಲಿ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದಿದ್ದಾರೆ. ಎಲ್ಲ ನೋವುಗಳನ್ನು ಮರೆತು ಮಗನ ಜೊತೆ ಫುಲ್ ಆಕ್ಟೀವ್ ಲೈಫ್ ಆರಂಭಿಸಿದ್ದಾರೆ. ರಿಯಾಲಿಟಿ ಶೋ, ಜಾಹೀರಾತು ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಮೇಘನಾ ಕೆಲವೇ ತಿಂಗಳ ಹಿಂದೆ ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಚಾನೆಲ್ ಆರಂಭದಲ್ಲೇ ಮೇಘನಾ (Meghana Raj Sarja) ಅತ್ಯುತ್ತಮವಾದ ರೆಸ್ಪಾನ್ಸ್ ಕೂಡ ಸಿಕ್ಕಿದೆ.
ತಮ್ಮ ಬದುಕಿನ ಹಲವು ಸಂಗತಿಗಳನ್ನು ಮೇಘನಾ ತಮ್ಮ ಯೂ ಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಈಗ ಸದ್ಯ ತತ್ಸಮ ತದ್ಬವ ಸಿನಿಮಾದಲ್ಲಿ ಬ್ಯುಸಿಯಾಗಿರೋ ಮೇಘನಾ ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೇ ತಮ್ಮ ಡೈಪರ್ ಪ್ರೆಂಡ್ ಜೊತೆ ಸಂಡೇ ಬ್ರಂಚ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.
ಬಿಂದು ಮೇಘನಾ ಅವರ ಬಾಲ್ಯದ ಗೆಳತಿ. ಮೇಘನಾ ಅವರೇ ಹೇಳುವಂತೆ ಬಿಂದು ಅವರ ಡೈಪರ್ ಗೆಳತಿಯಂತೆ. ಅಂದ್ರೇ ಮೇಘನಾಗೆ ಎರಡು ವರ್ಷ ಹಾಗೂ ಬಿಂದುಗೆ ಒಂದು ವರ್ಷದವರಿದ್ದಾಗ ಇಬ್ಬರ ಸ್ನೇಹ ಆರಂಭವಾಗಿತ್ತಂತೆ. ಅಂದಿನಿಂದ ಮೇಘನಾ ಹಾಗೂ ಬಿಂದು ಸ್ನೇಹಿತರಾಗಿದ್ದು, ಈಗ ಬಿಂದುಗೆ ಶ್ರೇಷ್ಠಾ ಎಂಬ ಮಗಳಿದ್ದು, ರಾಯನ್ ಹಾಗೂ ಶ್ರೇಷ್ಠಾ ನಡುವೆ ಈ ಪ್ರೆಂಡ್ ಶಿಪ್ ಮುಂದುವರೆದಿದೆಯಂತೆ.
ಬಿಂದು ಜೊತೆ ಜೆಪಿನಗರ ರೆಸ್ಟೋರೆಂಟ್ ಒಂದಕ್ಕೆ ಬ್ರಂಚ್ ಗೆ ಹೋಗಿರೋ ಬಿಂದು ಮೇಘನಾ ವೆಜ್ ಹಾಗೂ ನಾನ್ ವೆಜ್ ಫುಡ್ ಸವಿದು ಎಂಜಾಯ್ ಮಾಡಿದ್ದಾರೆ. ಮಾತ್ರವಲ್ಲ ಇಬ್ಬರೂ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದಿರೋದರಿಂದ ಇದು ನಮ್ಮ ಮೀ ಟೈಂ ಎಂದು ಮೇಘನಾ ಬಿಂದು ಹೇಳಿಕೊಂಡಿದ್ದಾರೆ.ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಈ ಬ್ಲಾಗ್ ಗೆ ಸಖತ್ ಗುಡ್ ರೆಸ್ಪಾನ್ಸ್ ಸಿಕ್ಕಿದ್ದು ಅಭಿಮಾನಿಗಳು ಮೇಘನಾ ವಿಡಿಯೋಗೆ ಲೈಕ್ಸ್ ಒತ್ತಿ ಕಮೆಂಟ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ : “ಕಬ್ಜ” ಸಿನಿಮಾ ಟ್ರೈಲರ್ : ಡಬ್ಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ ರಿಯಲ್ ಸ್ಟಾರ್
ಇದನ್ನೂ ಓದಿ : ನಟ ರಿಷಬ್ ಶೆಟ್ಟಿ ಮಗಳು ರಾದ್ಯಾಗೆ ಮೊದಲ ವರ್ಷದ ಹುಟ್ಟುಹಬ್ಬ ಸಂಭ್ರಮ
English News Click here