ಸೋಮವಾರ, ಏಪ್ರಿಲ್ 28, 2025
HomeCinemaMusic Director Sam C.S : ಶಿವಣ್ಣನ ಹೊಸ ಸಿನಿಮಾಗೆ ಟ್ಯೂನ್ ಹಾಕಲಿದ್ದಾರೆ ವಿಕ್ರಂ...

Music Director Sam C.S : ಶಿವಣ್ಣನ ಹೊಸ ಸಿನಿಮಾಗೆ ಟ್ಯೂನ್ ಹಾಕಲಿದ್ದಾರೆ ವಿಕ್ರಂ ವೇದ ಮ್ಯೂಸಿಕ್ ಡೈರೆಕ್ಟರ್ ಸ್ಯಾಮ್ ಸಿ.ಎಸ್

- Advertisement -

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು (Music Director Sam C.S) ಘೋಷಣೆಯಾಗಿವೆ. ಏಕಕಾಲಕ್ಕೆ ಹತ್ತಕ್ಕೂ ಹೆಚ್ಚು ಸಿನಿಮಾಗಳು ಘೋಷಣೆ ಮಾಡಲಾಗಿವೆ. ಈ ಪೈಕಿ ಶಿವಣ್ಣ SCFC01 ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ‌. ಈ ಸಿನಿಮಾದ ಮೂಲಕ ಖ್ಯಾತ ಸಂಗೀತ ನಿರ್ದೇಶಕರಾದ ಸ್ಯಾಮ್ ಸಿ.ಎಸ್ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಕ್ರಂ ವೇದ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕಿರುವ ಸ್ಯಾಮ್ ಕರುನಾಡ ಚಕ್ರವರ್ತಿ ಶಿವಣ್ಣ ಬಣ್ಣ ಹಚ್ಚಲಿರುವ ಅಪ್ ಕಮ್ಮಿಂಗ್ ಪ್ರಾಜೆಕ್ಟ್ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯುವ ನಟರು ನಾಚುವಂತೆ ಸದಾ ಸಕ್ರೀಯವಾಗಿರುವ ನಟ ಶಿವ ರಾಜ್‌ಕುಮಾರ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ ಶಿವಣ್ಣ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ಕೂಡ ಆಕ್ಟೀವ್‌ ಆಗಿದ್ದಾರೆ. ಸದಾ ಆಕ್ಟೀವ್‌ ಆಗಿರುವ ಶಿವಣ್ಣನನ್ನು ತೆರೆ ಮೇಲೆ ನೋಡುವುದು ಅಭಿಮಾನಿಗಳಿಗೆ ಹಬ್ಬವಿದ್ದಂತೆ ಆಗಿದೆ.

ಸುಧೀರ್ ಚಂದ್ರ ಪದ್ರಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ಕಾರ್ತಿಕ್ ಅದ್ವೈತ್ ನಿರ್ದೇಶನದಲ್ಲಿ ಮಾಡಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಪ್ರಾಜೆಕ್ಟ್ ಮೂಲಕ ಸ್ಯಾಮ್ ಸಿ ಎಸ್ ಪ್ಯಾನ್ ಇಂಡಿಯಾ ಮ್ಯೂಸಿಕಲ್ ಐಕಾನ್ ಆಗಲಿದ್ದಾರೆ.

ಇದನ್ನೂ ಓದಿ : Tatsama-Tadbhava’s teaser : ಪ್ರಜ್ವಲ್‌ ದೇವರಾಜ್‌, ಮೇಘನಾ ಸರ್ಜಾ ಅಭಿನಯದ ತತ್ಸಮ ತದ್ಭವ ಟೀಸರ್‌ ಔಟ್‌

ಇದನ್ನೂ ಓದಿ : Kendada Seragu Movie : ನಟಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ರಿಲೀಸ್

Music Director Sam C.S : Vikram Veda music director Sam C.S will compose tune for Shivanna’s new movie.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular