Naga Chaitanya and Samantha : ಬಾಲಿವುಡ್ ನ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಯಶೋದಾ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳು ಕೇಳಿಬರುತ್ತಿವೆ. ಯಶೋದಾ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಉತ್ತಮವಾದ ಯಶಸ್ಸನ್ನು ಕಾಣಲಿದೆ. ಇದೀಗ ಸಮಂತಾ ಹಾಗೂ ಅವರ ಮಾಜಿ ಪತಿ ಅವರೊಂದಿಗಿನ ಒಂದು ದೊಡ್ಡ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ಕೇಳಿಬರುತ್ತಿದ್ದು, ಇಬ್ಬರು ಒಟ್ಟಿಗೆ ಕೆಲಸ ಮಾಡಲಿದ್ದಾರಾ ಎನ್ನುವ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡುತ್ತಿವೆ.
ಸಮಂತಾ ಅವರು ಸಾಲು ಸಾಲು ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದು, ಇದೀಗ ಅವರ ಯಶೋದಾ ಚಿತ್ರವು ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಸಕಾರಾರ್ತ್ಮಕ ವಿಮರ್ಶೆಗಳು ಬಂದ ನಂತರ ಯಶೋದಾ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಯಶಸ್ಸನ್ನು ಕಾಣುತ್ತಿದೆ. ಇದರ ಮಧ್ಯೆ ಮಾಜಿ ಪತಿ ನಾಗ ಚೈತನ್ಯ ಅವರೊಂದಿಗಿನ ಸಮಂತಾ ಅವರ ದೊಡ್ಡ ಪ್ರಾಜೆಕ್ಟ್ ಬಗ್ಗೆ ವರದಿಯಾಗುತ್ತಿದ್ದು, ಬಾಲಿವುಡ್ ಲೈಫ್ ಪ್ರಕಾರ, ವೃತ್ತಿಪರರಾದ ಸಮಂತಾ ಹಾಗೂ ನಾಗ ಚೈತನ್ಯ(Naga Chaitanya and Samantha) ಅವರು ಒಟ್ಟಿಗೆ ಒಂದೇ ಯೋಜನೆಯಲ್ಲಿ ಕೆಲಸ ಮಾಡಬಹುದು ಎಂದು ಮೂಲವೊಂದು ತಿಳಿಸಿದೆ.
ಮೂಲ ವರದಿಗಳ ಪ್ರಕಾರ, ನಾಗಚೈತನ್ಯ ಅವರು ಸಮಂತಾ ಅವರ ಮೇಲೆ ಸ್ನೇಹಿತನಾಗಿ ಕಾಳಜಿ ತೋರಿಸಿದ್ದು , ಅವರು ಸಮಂತಾ ಅವರನ್ನು ಸ್ನೇಹಿತೆ ಎಂದು ಪರಿಗಣಿಸಿರುವುದಾಗಿ ಸಾಬೀತುಪಡಿಸಿದ್ದಾರೆ. ಇದೀಗ ಅವರು ಬೈಗುಳಗಳನ್ನು ಬಿಟ್ಟು ಒಂದೇ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ವೃತ್ತಿಪರವಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಮೂಲಗಳು ಬಹಿರಂಗ ಪಡಿಸಿವೆ.
ಇದನ್ನೂ ಓದಿ : Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್
ಇದನ್ನೂ ಓದಿ : Tamil Actor Vishal : ತಮಿಳು ಖ್ಯಾತ ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ
ಇದನ್ನೂ ಓದಿ : Vedha teaser: ಕೈಯಲ್ಲಿ ಮಚ್ಚು, ರಗಡ್ ಲುಕ್; ಹೀಗಿದೆ ನೋಡಿ ಶಿವಣ್ಣನ 125ನೇ ಸಿನಿಮಾ ‘ವೇದ’ ಟೀಸರ್
ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಮೈಯೋಸಿಟಿಸ್ ಎಂಬ ಸ್ವಯಂ ನಿರೋಧಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮದ ಪೋಸ್ಟ್‌ವೊಂದರಲ್ಲಿ, ಅನಾರೋಗ್ಯವನ್ನು ಗುಣಪಡಿಸಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಟಿ ಹಂಚಿಕೊಂಡಿದ್ದಾರೆ. ಮಾಜಿ ಪತಿ ನಾಗ ಚೈತನ್ಯ ಮತ್ತು ಅವರ ತಂದೆ ನಾಗಾರ್ಜುನ್ ಅವರು ಸಮಂತಾ ಅವರ ಆರೋಗ್ಯದ ಬಗ್ಗೆ ಕೇಳಿದ ನಂತರ ಅವರನ್ನು ಭೇಟಿ ಮಾಡಲು ಯೋಜಿಸಿದ್ದರು ಎಂದು ವರದಿಯಾಗಿದೆ
Naga Chaitanya and Samantha: Famous Bollywood actress Samantha Ruth Prabhu’s film Yashoda has released and is receiving positive reviews from fans and critics. Yashoda movie will be a great success at the box office. Now there are rumors on social media about a big project with Samantha and her ex-husband and fans are wondering if the two will work together.