ಸೋಮವಾರ, ಏಪ್ರಿಲ್ 28, 2025
HomeCinemaNamratha Gowda : ಬಿಕಿನಿ ತೊಟ್ಟು ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡ ನಟಿ ನಮ್ರತಾ ಗೌಡ

Namratha Gowda : ಬಿಕಿನಿ ತೊಟ್ಟು ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡ ನಟಿ ನಮ್ರತಾ ಗೌಡ

- Advertisement -

ನಟಿ ನಮ್ರತಾ ಗೌಡ (Namratha Gowda) ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಕಾಣಿಸಿಕೊಂಡು, ಜನರ ಮನಸ್ಸನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಧಾರಾವಾಹಿ ಮೂಲಕ ಇನ್ನಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಟಿ ನಮ್ರತಾ ಗೌಡ ಅದ್ಭುತ ನಟನೆಯ ಮೂಲಕ ಕರುನಾಡ ಜನರ ಮನೆ ಮಗಳಾಗಿದ್ದಾರೆ. ಸದ್ಯ ನಟಿ ನಮ್ರತಾ ಗೌಡ ನಿತ್ಯ ಬಾಲಿಯಲ್ಲಿ ಬಿಕಿನಿ ತೊಟ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದು ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ನಮ್ರತ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ, “ನನ್ನ ಜೀವನಮ ಗಾಸಿಪ್‌ ಕಡೆ ನೋಡುವವರು, ನೋಡುವುದನ್ನು ಬಿಡಬೇಡಿ, ಸೀಸನ್‌ 2 ಬರಲಿದೆ” ಎಂದು ಹಾಟ್‌ ಫೋಟೋಗಳೊಂದಿಗೆ ಈ ಸಾಲುಗಳನ್ನು ಬರೆದು ಹಂಚಿಕೊಂಡಿದ್ದಾರೆ. ಸದ್ಯ ಅಭಿಮಾನಿಗಳಿಗೆ ಫೋಟೋ ಕೆಳಗೆ ಈ ರೀತಿ ಸಾಲುಗಳನ್ನು ಯಾಕೆ ಹಂಚಿಕೊಂಡಿದ್ದಾರೆ ಎಂದು ಕೂತುಹಲ ಮೂಡಿದೆ.

ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನ ಗೆದಿದ್ದಾರೆ ನಟಿ ನಮ್ರತಾ ಗೌಡ 1993 ಏಪ್ರಿಲ್‌ 15 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. 2011ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಆಕಾಶ ದೀಪ ಸೀರಿಯಲ್‌ಲ್ಲೂ ಅಭಿನಯಿಸಿದ್ದಾರೆ. ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು.

ಇದನ್ನೂ ಓದಿ : Hostel hudugaru bekagiddare Trailer : ಇದೇ 21ಕ್ಕೆ ತೆರೆಗೆ ಬರಲಿದೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ : ಟ್ರೈಲರ್‌ ಔಟ್‌

ಇದನ್ನೂ ಓದಿ : Superstar Rajinikanth : ಆಗಸ್ಟ್ 10ಕ್ಕೆ ಮೂರು ಭಾಷೆಯಲ್ಲಿ ತೆರೆ ಅಪ್ಪಳಿಸಲಿದೆ ‘ಜೈಲರ್’ ಸಿನಿಮಾ

ನಂತರ ದಿನಗಳಲ್ಲಿ ತಕಮಿಧಿತ ಡ್ಯಾನ್ಸ್ ನಲ್ಲಿ ಭಾಗವಹಿಸಿ ಟಾಪ್ 5 ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾಣಿ ಪಾತ್ರದ ಮೂಲಕ ಗಮನ ಸೆಳೆದರು.ಸದ್ಯ ನಾಗಿಣಿ 2 ಸೀರಿಯಲ್‌ ನಂತರ ಯಾವ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿರುವುದಿಲ್ಲ. ತಮ್ಮದೇ ಯೂಟ್ಯೂಬ್‌ ಚಾನೆಲ್‌ ಆರಂಭ ಮಾಡಿ ಅದರಲ್ಲಿ ಸಕ್ರಿಯರಾಗಿದ್ದಾರೆ.

Namratha Gowda: Actress Namratha Gowda appeared bold in a bikini top.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular