ಮಂಗಳವಾರ, ಏಪ್ರಿಲ್ 29, 2025
HomeCinemaNannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2...

Nannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ

- Advertisement -

ಕಿರುತೆರೆಯಲ್ಲಿ ಸಾವಿರಾರು ಜನರನ್ನು ನಕ್ಕು‌ನಗಿಸುವ ಆ ಹೆಣ್ಣು ‌ಮಗಳ ಜೀವನದಲ್ಲಿ ಮಾತ್ರ ದೇವರು ಬರಿ ಕತ್ತಲೆಯನ್ನೇ ತುಂಬಿದಂತಿದೆ. ಒಂದು ಬಾರಿ ಹೆತ್ತ ಕಂದನನ್ನು ಕಳೆದುಕೊಂಡ ಆಕೆ ( Amrutha Naidu ) ಎರಡನೇ ಮಗುವನ್ನು ಕಣ್ಣರೆಪ್ಪೆಯಂತೇ ಜೋಪಾನ‌ ಮಾಡಿದ್ದಳು. ಆದರೆ ವಿಧಿ ಮಾತ್ರ ಆಕೆಯ ಕಣ್ಣೇದುರಿನಲ್ಲೇ ಆಕೆಯ ಮಗುವನ್ನು ಬಲಿ (Nannamma Super Star samanvi ಪಡೆದಿದ್ದು ಬರಿ ನೋವನ್ನೇ ಉಳಿಸಿದೆ.

ಖ್ಯಾತ ಹರಿಕಥಾ ಕಲಾವಿದ ಗುರುರಾಜುಲು ನಾಯ್ಡು ಮೊಮ್ಮಗಳು ಅಮೃತಾ ನಾಯ್ಡು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ಎಲ್ಲರಿಗೂ ಚಿರಪರಿಚಿತರು. ಈಟಿವಿಯ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಕಾರ್ಯಕ್ರಮದ ಮೂಲಕ ಕೆರಿಯರ್ ಆರಂಭಿಸಿದ ಅಮೃತಾ ಕನ್ನಡದ ಹಲವು ಸೀರಿಯಲ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಮಗಳು ಸಮನ್ವಿ‌ ಜೊತೆ ಅಮೃತಾ ನಾಯ್ಡು ಭಾಗವಹಿಸಿದ್ದ ಅಮೃತಾ ಗಮನಸೆಳೆದಿದ್ದರು.

ಅರಳುಹುರಿದಂತೆ ಮಾತನಾಡುತ್ತಿದ್ದ ಅಮೃತಾ ಪುತ್ರಿ ಸಮನ್ವಿ ಶೋದಲ್ಲಿ ಭರವಸೆ ಮೂಡಿಸಿದ್ದರು. ಆದರೆ ರಸ್ತೆ ಅಪಘಾತ ಸಮನ್ವಿ ಎಂಬ ಭರವಸೆಯ ಬೆಳಕನ್ನು ಅರ್ಧ ಆಯಷ್ಯದಲ್ಲೇ ಆರುವಂತೆ ಮಾಡಿದೆ. ಅಮೃತಾ ನಾಯ್ಡು ಈಗಾಗಲೇ ಒಂದು ಮಗುವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ಮೊದಲ ಮಗು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿತ್ತು. ಅದನ್ನು ಆಸ್ಪತ್ರೆಗೆ ಚಿಕಿತ್ಸೆಗೆ‌ ದಾಖಲಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲವಂತೆ.

ಮೊದಲ ಮಗುವನ್ನು ಬದುಕಿಸಿಕೊಳ್ಳಲಾಗದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದ ಅಮೃತಾ ಸತ್ತ ಮಗುವನ್ನು ಆಸ್ಪತ್ರೆ‌ ಸಿಬ್ಬಂದಿ ಪೇಪರ್ ನಲ್ಲಿ ಸುತ್ತಿಕೊಟ್ಟಿದ್ದನ್ನು ಹೇಳಿಕೊಂಡಿದ್ದರು. ಆದರೆ ಎರಡನೇ‌ ಮಗು ಸಮನ್ವಿ ತಮ್ಮ ಬದುಕಿನಲ್ಲಿ ಬಂದ ಮೇಲೆ ಎಲ್ಲವೂ ಒಳ್ಳೆಯದಾಗಿದ್ದು ಹಾಗೂ ತಮ್ಮ ಬದುಕಿಗೆ‌ ಸಮನ್ವಿ ಸಂಭ್ರಮ ತುಂಬಿದ್ದನ್ನು ಎಲ್ಲೆಡೆ ಹೇಳಿಕೊಳ್ಳುತ್ತ ಬಂದಿದ್ದರು.

ಇಂದು ಕೂಡ ಅಮೃತಾ ತಮ್ಮ ಪುಟ್ಟ ಮಗಳು ಸಮನ್ವಿ ಜೊತೆಗೆ ಹಬ್ಬದ ಶಾಪಿಂಗ್ ಗೆ ತೆರಳಿದ್ದರು. ಶಾಪಿಂಗ್ ಮುಗಿಸಿ ಕನಕಪುರ ರಸ್ತೆಯಲ್ಲಿರುವ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಅಮೃತಾ ಚಲಾಯಿಸುತ್ತಿದ್ದ ಸ್ಕೂಟಿಗೆ ಟಿಪ್ಪರ್ ಡಿಕ್ಕಿಯಾಗಿದ್ದು ಅಮೃತಾ ಎಡಕ್ಕೆ ವಾಲಿ ಬಿದ್ದಿದ್ದರೇ ಮಗು‌ಸಮನ್ವಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸಮನ್ವಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆ ಗೆ ಸಾಗಿಸುವ ದಾರಿ‌ ಮಧ್ಯೆ ಸಮನ್ವಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಅಮೃತಾ ನಾಯ್ಡು ಸದ್ಯ ಮೂರನೇ ಮಗುವಿನ ನೀರಿಕ್ಷೆಯಲ್ಲಿದ್ದು ನಾಲ್ಕೂವರೆ ತಿಂಗಳ ಗರ್ಭಿಣಿ ಎನ್ನಲಾಗುತ್ತಿದೆ. ಈಗಾಗಲೇ ಒಂದು ಮಗುವನ್ನು ಕಳೆದುಕೊಂಡ ನೋವಿನಲ್ಲಿದ್ದ ಅಮೃತಾ ನಾಯ್ಡು ಗೆ ದೇವರು ಇದ್ದ ಮತ್ತೊಂದು‌ಮಗುವನ್ನು ಕಿತ್ತುಕೊಂಡಿದ್ದು ವಿಧಿಯಾಟಕ್ಕೆ ತಾಯಿ ಮಡಿಲು ಬರಿದಾಗಿದೆ. ಅಮೃತಾ ಚಲಾಯಿಸುತ್ತಿದ್ದ ಸ್ಕೂಟಿಗೆ ಟಿಪ್ಪರ್ ಢಿಕ್ಕಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯ ನೋಡುಗರ ಎದೆ ಝಲ್ಲೆನಿಸುವಂತಿದೆ.

ಇದನ್ನೂ ಓದಿ : ನನ್ನಮ್ಮ ಸೂಪರ್​ಸ್ಟಾರ್​​ ಖ್ಯಾತಿಯ ಮಗು ಸಮನ್ವಿ ರಸ್ತೆ ಅಪಘಾತದಲ್ಲಿ ಸಾವು

ಇದನ್ನೂ ಓದಿ :  ಕರ್ನಾಟಕದಲ್ಲಿ 10 ದಿನಗಳ ಕಾಲ ಲಾಕ್‌ಡೌನ್‌ ಫಿಕ್ಸ್‌

(Nannamma Super Star reality show kid samanvi Gururajulu Naidu Grand daughter actress Amrutha Naidu daughter death)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular