ದಕ್ಷಿಣ ಭಾರತ ಸ್ಟಾರ್ ನಟಿ ನಯನತಾರಾ ಸದ್ಯ ಸಾಲು ಸಾಲು ಚಿತ್ರಗಳಿಂದ ಬ್ಯೂಸಿಯಾಗಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರೋ ನಯನತಾರಾ ಹೇಳಿರೋ ಹೇಳಿಕೆಯೊಂದು ಸಖತ್ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳ ಜೊತೆಗೆ ಖ್ಯಾತನಾಮರ ಬಿಗ್ ಬಜೆಟ್ ಚಿತ್ರಗಳಲ್ಲಿಯೂ ನಯನಾತಾರ ನಟಿಸುತ್ತಿದ್ದಾರೆ.

ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಂ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ತನ್ನ ಬೋಲ್ಡ್ ನಟನೆಯಿಂದಲೇ ಪಡ್ಡೆ ಹೈಕಳ ನಿದ್ದೆಗೆಡಿಸಿರೋ ನಯನಾತಾರ ಮಹಿಳೆಯರ ಬಗ್ಗೆ ಹೇಳಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ನಯನತಾರ ಕಳೆದ ಮೂರು ವರ್ಷಗಳ ಹಿಂದೆ ವೇಲಕಾರನ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು.

ಸಿನಿಮಾದಲ್ಲಿ ಮಹಿಳೆಯರು ಯಾರ ಜೊತೆ ಇರಬೇಕು? ಯಾರ ಜೊತೆ ಸಂಬಂಧ ಹೊಂದಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು ಎಂದು ಹೇಳಿದ್ದರು.

ಆದ್ರೀಗ ನಯನಾತಾರ ಹೇಳಿಕೆ ಇದೀಗ ಸಖತ್ ವೈರಲ್ ಆಗಿದೆ. ಈ ಹಳೆಯ ವಿಡಿಯೋವನ್ನು ಪಡ್ಡೆ ಹೈಕಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡ್ತಿದ್ದಾರೆ.
