ವಿಜಯಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಬರೋಬ್ಬರಿ ಮೂರು ತಿಂಗಳಾಯ್ತು. ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ ಯಾವಾಗ ಜೈಲಿನಿಂದ ಹೊರಗೆ ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನೇಕ ಸ್ಯಾಂಡಲ್ ವುಡ್ ತಾರೆಯರು, ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಇಂದು ದರ್ಶನ್ ಕುರಿತಾಗಿ ಮಾಧ್ಯಮವರು ಕೇಳಿದ ಪ್ರಶ್ನೆಗೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ವಿಜಯಪುರದಲ್ಲಿ ಈ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಯಾರು ಎಷ್ಟೇ ಬಲಿಷ್ಠರು, ಪ್ರಭಾವಿಗಳು ಆಗಿದ್ದರೂ ಕೂಡ ಅವರು ಈ ನೆಲದ ಕಾನೂನಿಗೆ ತಲೆಬಾಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಅಂತಿಮವಾಗಿ ಕಾನೂನು, ಕೋರ್ಟ್ ಇದೆ ಸೂಕ್ತ ಕ್ರಮ ಕೈಗೊಳ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲೇ ಐಟಿ ವಿಚಾರಣೆ ಎದುರಿಸಿದ ಕೊಲೆ ಆರೋಪಿ ದರ್ಶನ್
ಇನ್ನು ಇದೇ ವೇಳೆ ಜಮೀರ್ ಅಹಮ್ಮದ್ ಖಾನ್ ಬಳ್ಳಾರಿ ಉಸ್ತುವಾರಿ ಸಚಿವರು ಹಾಗಾಗಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಆಯ್ತು ಬಿಡಿ ಅಂತಾ ಅಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಇನ್ನು ಇದೇ ವೇಳೆ ಮುನಿರತ್ನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು ಕಾನೂನುನಿಗಿಂತ ದೊಡ್ಡವರು ಯಾರು ಇಲ್ಲ.ಕಾನೂನಿದೆ ಎಂದಿದ್ದಾರೆ.

ಇದೇ ವೇಳೆ ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ನಿಖಿಲ್ ಪಾಪ ಕಾಂಗ್ರೆಸ್ ನವರು ಅವರ ಕಾಲದಲ್ಲಿ ಏನಾಯಿತು, ಇವರ ಕಾಲದಲ್ಲಿ ಏನಾಯಿತು ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡುವದರಲ್ಲೇ ಸಮಯ ಕಳೆದು ಬಿಡುತ್ತಿದ್ದಾರೆ.ಇವತ್ತು ಸರ್ಕಾರ 136 ಜನ ಶಾಸಕರನ್ನು ಗೆಲ್ಲಿಸಿ ಅವರಿಗೆ ಜನ ಶಕ್ತಿ ತುಂಬಿದ್ದಾರೆ. ಹೀಗಾಗಿ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
ಹಿಂದೇಂದು ಈ ರಾಜ್ಯದ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ಪಾದಯಾತ್ರೆಯ ಯಶಸ್ಸು ಎರಡು ಪಕ್ಷಕ್ಕೆ ಸಿಗುತ್ತೆ ಎಂಬ ಹಿನ್ನಲೆಯಲ್ಲಿ ಅದ್ಯಾವುದೋ ಹೆಸರಲ್ಲಿ ಇವರು ಕಾರ್ಯಕ್ರಮ ಮಾಡಿದರು. ತಮ್ಮ ತಪ್ಪನ್ನು ನುಣುಚಿಕೊಳ್ಳಲು ವಿರೋಧ ಪಕ್ಷಕ್ಕೆ ಪ್ರಶ್ನೆ ಕೇಳುವ ಸನ್ನಿವೇಶ ಪ್ರಾರಂಭ ಮಾಡಿದ್ದಾರೆ ಎಂದು ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
Nikhil Kumaraswamy Reaction About Darsh Renukaswamy Murder case