ಸೋಮವಾರ, ಏಪ್ರಿಲ್ 28, 2025
HomeCinemaNitesh Pandey passes away : ಕಿರುತೆರೆ ನಟ ಹೃದಯಾಘಾತದಿಂದ ಸಾವು

Nitesh Pandey passes away : ಕಿರುತೆರೆ ನಟ ಹೃದಯಾಘಾತದಿಂದ ಸಾವು

- Advertisement -

ಕಿರುತೆರೆಯಿಂದಲೇ ಸಖತ್‌ ಫೇಮಸ್‌ ಆಗಿರುವ ನಟ ನಿತೇಶ್‌ ಪಾಂಡೆ (Nitesh Pandey passes away) ತಮ್ಮ 51ನೇ ವರ್ಷ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಇನ್ನು ನಟ ನಿತೇಶ್‌ ಪಾಂಡೆ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಟ ನಿತೇಶ್‌ ಪಾಂಡೆ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಸ್ಟಾರ್‌ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಕಿರುತೆರೆ ನಟ-ನಟಿಯರ ಸಾವುಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ರಸ್ತೆ ಅಪಘಾತದಿಂದ ಸೇರಿದಂತೆ ಇತರ ಬೇರೆ ಕಾರಣಗಳಿಂದ ಕಿರುತೆರೆ ನಟ-ನಟಿಯರು ಚಿಕ್ಕ ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಇದೀಗ ನಟ ನಿತೇಶ್‌ ಪಾಂಡೆ ನಿಧನದ ಸುದ್ದಿ ಕೂಡ ಬಹಳ ಆಘಾತಕಾರಿ ಎನಿಸಿದೆ. ನಟ ನಿತೇಶ್‌ ಪಾಂಡೆ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೆ ಇವರ ಸಾವಿನ ಸುದ್ದಿ ದುಃಖ ತರಲಿಸಿದೆ.

ನಟ ನಿತೇಶ್‌ ಪಾಂಡೆ 1995ರಿಂದ ಬಣ್ಣದಲೋಕದಲ್ಲಿ ಸಕ್ರಿಯರಾಗಿದ್ದಾರೆ. ಇವರು ಸೀರಿಯಲ್‌ಗಳ ಜೊತೆ ಸಿನಿಮಾಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ನಟ ನಿತೇಶ್‌ ಪಾಂಡೆ ಅಭಿನಯದ ಅನುಪಮಾ ಸೀರಿಯಲ್‌ ಸ್ಟಾರ್‌ ಪ್ಲಸ್‌ ಹಿಂದಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್‌ನಲ್ಲಿ ನಟ ನಿತೇಶ್‌ ಧೀರಜ್‌ ಕಪೂರ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಂತರ ದಿನಗಳಲ್ಲಿ ಪ್ಯಾರ್‌ ಕ ದರ್ದ್‌ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರ ಸೀರಿಯಲ್‌ನಲ್ಲಿ ನಟಿಸುವ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಸದ್ಯ ನಟ ನಿತೇಶ್‌ ಸದ್ದಿಲ್ಲದೇ ಬಾರದ ಲೋಕಕ್ಕೆ ತೆರಳಿದ್ದು ಅನೇಕರಿಗೆ ಆಘಾತವಾಗಿದೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ವಿಧಿವಶ : ಇಂದು ಅಂತ್ಯಕ್ರಿಯೆ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ಶಿವ ರಾಜ್‌ಕುಮಾರ್‌ ಅವರನ್ನು ಭೇಟಿಯಾದ ರಣದೀಪಗ ಸಿಂಗ್‌ ಸುರ್ಜೇವಾಲಾ

ನಟ ನಿತೇಶ್‌ ಅವರ ಭಾವ, ನಿರ್ಮಾಪಕ ಸಿದ್ದಾರ್ಥ್‌ ನಗರ್‌ ಈ ಬಗೆ ಮಾತನಾಡಿ, ” ನಿತೇಶ್‌ ಅವರು ಮೃತಪಟ್ಟಿದ್ದಾರೆ. ಅವರ ಪತ್ನಿ ಅರ್ಪಿತಾ ಪಾಂಡೆ ಶಾಕ್‌ನಲ್ಲಿದ್ದಾರೆ. ಅವರ ತಂದೆ ಮೃತದೇಹ ತರಲು ತೆರಳಿದ್ದಾರೆ. ನನ್ನ ಸಹೋದರಿ ಅರ್ಪಿತಾ ಜೊತೆ ನನಗೆ ಮಾತನಾಡಲೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

Nitesh Pandey passes away : Television actor dies of heart attack

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular