Darshan thoogudeepa;ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಪಾಲಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲಿಗೆ ಬಂದಾಗಿನಿಂದ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಜೆಯ ಸಮಸ್ಯೆ ಸೃಷ್ಟಿಯಾಗಿದೆ.
ಕಳೆದ ಒಂದು ತಿಂಗಳಿನಿಂದ ಒಂದೇ ಒಂದು ದಿನವೂ ರಜೆ ಇಲ್ಲದೇ ಜೈಲು ಸಿಬ್ಬಂದಿ ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದ್ದು,ಅಧಿಕಾರಿಗಳಿಗಂತೂ ಒಂದು ದಿನವೂ ಕೂಡಾ ರಜೆಯ ಮೇಲೆ ತೆರಳುವಂತಿಲ್ಲ ಅಂತಾ ಹಿರಿಯ ಅಧಿಕಾರಿಗಳಿಂದ ಆದೇಶವಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ದರ್ಶನ್ ಇರುವ ಹೈ ಸೆಕ್ಯೂರಿಟಿ ಸೆಲ್ ವಿಭಾಗದಲ್ಲಿ ಎರಡು ಪಾಳಿಯಲ್ಲಿ ಕೆಲಸ ಮಾಡುವ ಎಂಟು ಸಿಬ್ಬಂದಿಗಳಿಗೂ ರಜೆ ಇಲ್ಲದಂತಾಗಿದ್ದು, ಜೈಲು ಗೇಟ್ ಹಾಗೂ ಇಡೀ ಜೈಲಿನ ಭದ್ರತಾ ಹೊಣೆ ಹೊತ್ತಿರುವ ಕೆಐಎಸ್ಎಫ್ ಸಿಬ್ಬಂದಿಗೂ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವವರೆಗೂ ರಜೆ ಮಂಜೂರು ಇಲ್ಲ ಎನ್ನಲಾಗಿದೆ.ಈ ಮಧ್ಯೆ ಬೆನ್ನು ನೋವು ಮತ್ತು ಕೈ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆರೋಪಿ ದರ್ಶನ್ ಕುರ್ಚಿ, ಬೆಡ್ ಮತ್ತು ದಿಂಬಿಗಾಗಿ ಬೇಡಿಕೆ ಇಟ್ಟಿದ್ದಾರೆ.
ಕಳೆದ ಇಪ್ಪತ್ತೈದು ದಿನಗಳಿಂದಲೂ ಜೈಲಿನಲ್ಲಿ ದರ್ಶನ್ ಈ ಬೇಡಿಕೆ ಇಟ್ಟಿದ್ದರೂ ಜೈಲಾಧಿಕಾರಿಗಳು ಈ ವರೆಗೆ ಪೂರೈಸಿಲ್ಲ. ಹಾಗಾಗಿ ದರ್ಶನ್ ಪರ ವಕೀಲರು ಕುರ್ಚಿ, ಬೆಡ್ ಮತ್ತು ದಿಂಬಿಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಲ್ಕೈದು ದಿನಗಳ ಹಿಂದೆ ಜೈಲಿಗೆ ಭೇಟಿ ನೀಡಿದ್ದ ದರ್ಶನ್ ಪರ ವಕೀಲರು ಯುಟಿಪಿ ಕೈದಿಗಳಿಗೆ ನೀಡಬೇಕಿರುವ ಕನಿಷ್ಠ ಸೌಕರ್ಯಗಳನ್ನಾದರೂ ಕೊಡುವಂತೆ ಜೈಲಿನ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದರು ಎಂದು ಹೇಳಲಾಗಿದೆ. ಆಗ ಮನವಿ ಪರಿಶೀಲಿಸಿ ನೋಡುವ ಭರವಸೆ ನೀಡಿರುವ ಜೈಲಿನ ಅಧಿಕಾರಿಗಳು ಈ ವರೆಗೆ ಬೇಡಿಕೆಯನ್ನು ಈಡೇರಿಸಿಲ್ಲ.

ಇದೆಲ್ಲದರ ಮಧ್ಯೆ ಡಿ ಬಾಸ್ ಎಂದು ಕೂಗದಂತೆ ಹೇಳಿದ್ದಕ್ಕೆ ದರ್ಶನ್ ಅಭಿಮಾನಿಗಳಿಬ್ಬರು ವ್ಯಕ್ತಿಯೋರ್ವನ ಕುತ್ತಿಗೆ ಕೊಯ್ದಿರುವ ಘಟನೆ ರಾಮನಗರ ಜಿಲ್ಲೆಯ ಕುಂಬಳಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಎಷ್ಟೇ ಪ್ರಭಾವಿ ಆಗಿದ್ರೂ ಕಾನೂನಿಗೆ ತಲೆಬಾಗಬೇಕು : ನಿಖಿಲ್ ಕುಮಾರಸ್ವಾಮಿ
ಸೂಲಿಕೆರೆಪಾಳ್ಯದಲ್ಲಿ ಸೆಪ್ಟೆಂಬರ್ 26 ರಂದು ಈ ಘಟನೆ ನಡೆದಿದ್ದು ಐಜೂರಿನ ಕಿರಣ್ ಮತ್ತು ಮಹದೇವ ಎಂಬ ಇಬ್ಬರು ಜೋರಾಗಿ ಡಿ ಬಾಸ್ ಎಂದು ಕೂಗುತ್ತಿದ್ದಾಗ ವೆಂಕಟಸ್ವಾಮಿ ಎಂಬಾತ ಆಕ್ಷೇಪಿಸಿದ್ದಾರೆ.ಈ ವೇಳೆ ಆರೋಪಿಗಳಿಬ್ಬರು ಚಾಕುವಿನಿಂದ ಮಹದೇವಸ್ವಾಮಿ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
No holiday for Bellary Jail staff due to darshan thoogudeepa fans protest against D Bass announcement