Sushmita Sen : ಬಾಲಿವುಡ್ ನಟಿ ಸುಶ್ಮಿತಾ ಸೇನ್ರ ಜೊತೆಗಿನ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಐಪಿಎಲ್ ಸ್ಥಾಪಕ ಲಲಿತ್ ಮೋದಿ ನಾವು ಡೇಟಿಂಗ್ ಮಾಡುತ್ತಿದ್ದೇವೆ ಎಂಧು ಘೋಷಣೆ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಷ್ಟು ವೇಗವಾಗಿ ಹರಡಿತ್ತು. ಲಲಿತ್ ಮೋದಿ ಟ್ವಿಟರ್, ಇನ್ಸ್ಟಾಗ್ರಾಂಗಳಲ್ಲಿ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಮಾಡುವ ಮೂಲಕ ತಾವು ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದೇವೆ ಎಂಬ ವಿಚಾರವನ್ನು ಬಯಲು ಮಾಡಿದ್ದರು. ಇಲ್ಲಿಯವರೆಗೆ ಈ ವಿಚಾರವಾಗಿ ಮೌನವಾಗಿಯೇ ಇದ್ದ ನಟಿ ಸುಶ್ಮಿತಾ ಸೇನ್ ಇದೀಗ ತನ್ನ ಹಾಗೂ ಲಲಿತ್ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.
ತನ್ನ ಹೆಣ್ಣು ಮಕ್ಕಳ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ನಟಿ ಸುಶ್ಮಿತಾ ಸೇನ್ ತಮ್ಮ ಕಡೆಯಿಂದ ಈ ಸಂಬಂಧದ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ನಾನು ಸಂತೋಷದ ಸ್ಥಳದಲ್ಲಿದ್ದೇನೆ . ನಾನು ಮದುವೆಯಾಗಿಲ್ಲ, ಯಾವುದೇ ಉಂಗುರವೂ ಇಲ್ಲ, ನಾನು ಪ್ರೀತಿಯಿಂದ ಸುತ್ತುವರಿದಿದ್ದೇನೆ. ನನ್ನ ಜೀವನ ಹಾಗೂ ಕೆಲಸಕ್ಕೆ ಈಗಾಗಲೇ ಸಾಕಷ್ಟು ಸ್ಪಷ್ಟೀಕರಣವನ್ನು ನೀಡಿದ್ದೇನೆ. ನನ್ನ ಸಂತೋಷವನ್ನು ಹಂಚಿಕೊಂಡಿದವರಿಗೆ ಧನ್ಯವಾದಗಳು, ಹಾಗೂ ಹಂಚಿಕೊಳ್ಳದೇ ಇರುವವರಿಗೂ ಧನ್ಯವಾದಗಳು. ಸ್ನೇಹಿತರೇ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು, ಮಾಲ್ಡೀವ್ಸ್, ಸಾರ್ಡಿನಿಯಾ ಪ್ರವಾಸಗಳ ಬಳಿಕ ಲಂಡನ್ಗೆ ಹಿಂತಿರುಗಿದ್ದೇನೆ. ನನ್ನ ಬೆಟರ್ ಹಾಫ್ ಸುಶ್ಮಿತಾ ಸೇನ್ ಬಗ್ಗೆ ಇಲ್ಲಿನ ಉಲ್ಲೇಖಿಸಬಾರದು. ನನ್ನ ಜೀವನದ ಹೊಸ ಆರಂಭ ಎಂದು ಬರೆದುಕೊಂಡಿದ್ದರು.
ಇದಾದ ಬಳಿಕ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಮದುವೆಯಾಗಿದ್ದಾರೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿ ಮತ್ತೊಂದು ಟ್ವೀಟ್ ಮಾಡಿದ ಲಲಿತ್ ಮೋದಿ ನಾವು ಡೇಟಿಂಗ್ನಲ್ಲಿದ್ದೇವೆ. ಮದುವೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ಶೀಘ್ರದಲ್ಲಿಯೇ ಮದುವೆಯಾಗುವ ಸೂಚನೆಯನ್ನೂ ನೀಡಿದ್ದರು.
ಇದನ್ನು ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್
ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
‘Not Married, No Rings’: Sushmita Sen On Her Relationship With Lalit Modi