ಭಾನುವಾರ, ಜೂನ್ 15, 2025
HomeCinemaNTR Rashmika Mandanna : ಜ್ಯೂನಿಯರ್ ಎನ್ ಟಿ ಆರ್ ಗೆ ಜೊತೆಯಾದ ಪುಷ್ಪ:...

NTR Rashmika Mandanna : ಜ್ಯೂನಿಯರ್ ಎನ್ ಟಿ ಆರ್ ಗೆ ಜೊತೆಯಾದ ಪುಷ್ಪ: ಮತ್ತೆ ಮೋಡಿ ಮಾಡಲು ಟಾಲಿವುಡ್ ಗೆ ಬಂದ ರಶ್ಮಿಕಾ

- Advertisement -

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಕೇಳಿ ಬರ್ತಿರೋ ಒಂದೇ ಒಂದು ಹೆಸರು ರಶ್ಮಿಕಾ ಮಂದಣ್ಣ (Rashmika Mandanna). ಸದ್ಯ ಬಾಲಿವುಡ್ ಸಿನಿಮಾಗಳ ರಿಲೀಸ್ ಗೆ ಕಾಯ್ತಿರೋ ಕೊಡಗಿನ ಕುವರಿ ರಶ್ಮಿಕಾ ಈಗ ಟಾಲಿವುಡ್ ಗೆ ಮತ್ತೊಮ್ಮೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ಸಿದ್ಧವಾಗಿದ್ದಾರೆ. ತೆಲುಗಿನ ಹಿಟ್ ನಟ ಜ್ಯೂನಿಯರ್ ಎನ್‌ಟಿಆರ್ (NTR) ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಯಾಗಿ ಮಿಂಚಲಿದ್ದು, ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಲಾರಂಭಿಸಿದೆ. ಇತ್ತೀಚಿಗಷ್ಟೇ ಜ್ಯೂನಿಯರ್ ಎನ್ ಟಿಆರ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿ ಸದ್ದು ಮಾಡಿದ್ದರು. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಈಗ ಮತ್ತೆ ಜ್ಯೂನಿಯರ್ ಎನ್ ಟಿ ಆರ್, ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರಕ್ಕೆ ಸೈ ಎಂದಿದ್ದಾರಂತೆ.

ಈ ಚಿತ್ರಕ್ಕೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ನಾಯಕಿಯಾಗಿ ಮಿಂಚಬೇಕಿತ್ತು. ಆದರೆ ಇತ್ತೀಚಿಗಷ್ಟೇ ವಿವಾಹವಾಗಿ ಹೊಸಬದುಕಿಗೆ ಕಾಲಿಟ್ಟಿರೋ ಆಲಿಯಾ ಭಟ್ ಸಿನಿಮಾಗಳ ಶೂಟಿಂಗ್ ಡೇಟ್ಸ್ ಸಮಸ್ಯೆ ಕಾರಣ ಮುಂದಿಟ್ಟುಕೊಂಡು ಈ ಸಿನಿಮಾದಿಂದ ದೂರ ಉಳಿದಿದ್ದಾರಂತೆ. ಹೀಗಾಗಿ ಈಗ ಆಲಿಯಾ ಭಟ್ ಜಾಗಕ್ಕೆ ರಶ್ಮಿಕಾ ಬರಲಿದ್ದು ಮತ್ತೊಮ್ಮೆ ಟಾಲಿವುಡ್ ಅಂಗಳದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ಟಾಲಿವುಡ್ ನಲ್ಲಿ ಇತ್ತೀಚಿಗಷ್ಟೇ ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ಅದ್ಭುತ ಯಶಸ್ಸು ಪಡೆದಿದ್ದು, ಟಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದೆ.

ಇದರ ಬೆನ್ನಲ್ಲೇ ಮತ್ತೆ ರಶ್ಮಿಕಾ ಬೇಡಿಕೆ ಹೆಚ್ಚಿಸಿಕೊಂಡಿದ್ದು, ಸಂಭಾವನೆ ಕೂಡ ಡಬ್ಬಲ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾಗಳಾದ ಮಿಶನ್ ಮಜ್ನು ಹಾಗೂ ಗುಡ್ ಬೈ ರಿಲೀಸ್ ಆಗ್ತಿದ್ದು ಇದರ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾಗೂ ರಶ್ಮಿಕಾ ಸಿದ್ಧವಾಗಿದ್ದಾರೆ.

ಕೇವಲ ಸಿನಿಮಾ ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡುತ್ತಾ ತಮಗೆ ಸ್ವಿಮ್ಮಿಂಗ್ ಇಷ್ಟ ಅನ್ನೋದನ್ನು ಲೀಡ್ ಕೊಡೋ ಮೂಲಕ ಯೂಟ್ಯೂಬ್ ನೋಡುವಂತೆ ರಶ್ಮಿಕಾ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಇದನ್ನೂ ಓದಿ : ಹಿಂದೂಗಳನ್ನು ಕೆರಳಿಸಿದ ಕರಿನಾ ಕಪೂರ್ : ವಿವಾದ ಹುಟ್ಟಿಸಿದ ಮಲಬಾರ್‌ ಗೋಲ್ಡ್‌ ಜಾಹೀರಾತು

ಇದನ್ನೂ ಓದಿ : ಕೆಜಿಎಫ್-2 ಸಿನಿಮಾದ ಶೂಟಿಂಗ್ ನಡೆದ ಜಾಗ ಇದೀಗ, ಟೂರಿಸ್ಟ್‌ ಹಾಟ್‌ ಸ್ಪಾಟ್‌

NTR Rashmika Mandanna to romance in Tollywood

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular