ಬುಧವಾರ, ಜೂನ್ 18, 2025
HomeCinemaಎಲ್ಲಾ ವಿವಾದಗಳ ಮಧ್ಯೆ ಗಂಡು ಮಗುವಿನ ತಾಯಿಯಾದ ನಟಿ ಸಂಸದೆ ನುಸ್ರತ್ ಜಹಾನ್‌

ಎಲ್ಲಾ ವಿವಾದಗಳ ಮಧ್ಯೆ ಗಂಡು ಮಗುವಿನ ತಾಯಿಯಾದ ನಟಿ ಸಂಸದೆ ನುಸ್ರತ್ ಜಹಾನ್‌

- Advertisement -

ಪಶ್ಚಿಮಬಂಗಾಳದ ಸಂಸದೆ ಹಾಗೂ ವಿವಾದಿತ ನಟಿ ನುಸ್ರುತ್ ಜಹಾನ್ ಕೋಲ್ಕತ್ತಾದ ಹಾಸ್ಪಿಟಲ್ ನಲ್ಲಿ ಗುರುವಾರ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ‌,ಮಗು ಆರೋಗ್ಯ ವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ಪಶ್ಚಿಮ ಬಂಗಾಳದ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ನಿನ್ನೆ ತಡರಾತ್ರಿ ತಮ್ಮ ಸ್ನೇಹಿತ ಹಾಗೂ ನಟ ಯಶ್ ದಾಸ್ ಗುಪ್ತಾ ಜೊತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮುನ್ನ ನುಸ್ರತ್ ಜಹಾನ್ ಹಲವು ಭಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು.

Nusrat Jahan 2

2019 ರಲ್ಲಿ‌ಟರ್ಕಿಯಲ್ಲಿ ನಟಿ ನುಸ್ರುತ್ ಜಹಾನ್ ತಮ್ಮ ಧರ್ಮ ತೊರೆದು ಉದ್ಯಮಿ ವಿವೇಕ್ ಜೈನ್ ಜೊತೆ ವಿವಾಹವಾಗಿದ್ದರು. ಬಳಿಕ ನುಸ್ರತ್ ಹಾಗೂ ವಿವೇಕ್ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಪರಸ್ಪರ ದೂರವಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ನಮ್ಮ ವಿವಾಹ ಕಾನೂನು ಸಮ್ಮತವಲ್ಲ. ಹೀಗಾಗಿ ನಾವು ದೂರವಾಗಿದ್ದೇವೆ ಎಂದಿದ್ದರು. ಅಲ್ಲದೇ ಪತಿ ವಿರುದ್ಧ ಹಲವು ಆರೋಪ ಮಾಡಿದ್ದರು.

Nusrat Jahan 5

ವಿವೇಕ್ ಜೈನ್ ನುಸ್ರತ್ ಯುವನಟ ಯಶ್ ದಾಸ್ ಗುಪ್ತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಮಗು ನನ್ನದಲ್ಲ ಎಂದು ವಿವೇಕ್ ಜೈನ್ ಆರೋಪಿಸಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ನುಸ್ರತ್ ಜಹಾನ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು ಸಂಸದೆ ನುಸ್ರತ್ ತಮ್ಮ ಮಗುವಿನ ತಂದೆ ಯಾರೆಂಬುದನ್ನು ಬಹಿರಂಗಪಡಿಸಬೇಕು ಎಂದಿದ್ದರು.

Nusrat Jahan 3

ಆದರೆ ಇದ್ಯಾವುದಕ್ಕೂ ಸಂಸದೆ ನುಸ್ರತ್ ಪ್ರತಿಕ್ರಿಯಿಸಿರಲಿಲ್ಲ. ಆದರೆ ಡೆಲಿವರಿ ವೇಳೆ ನುಸ್ರುತ್ ಜಹಾನ್ ತಮ್ಮ ಸ್ನೇಹಿತ ಯಶ್ ದಾಸ್ ಗುಪ್ತಾರನ್ನು ಜೊತೆಗೆ ಇಟ್ಟುಕೊಳ್ಳುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಹೆರಿಗೆ ಬಳಿಕ ನುಸ್ರುತ್ ಜಹಾನ್ ಟ್ವೀಟ್ ಮಾಡಿದ್ದು, ಭಯದ ನಡುವೆಯ ಹೊಸ ಭರವಸೆ ಎಂಬರ್ಥದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಬೀದಿಗೆ ಬಿತ್ತು ಸಂಸದೆ ಸಂಸಾರದ ಕತೆ….! ಮದುವೆನೇ ಆಗಿಲ್ಲ ನಾವು ಎಂದ ನಟಿಮಣಿ…!!

ಇದನ್ನೂ ಓದಿ : ಸಂಕಷ್ಟಕ್ಕೆ ಸಿಲುಕಿದ ದರ್ಶನ್ ನಾಯಕಿ….! ದಂಡದ ಜೊತೆ ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ನಟಿ…!!

(TMC MP and Actress Nusrat Jahan Blessed With baby boy)

RELATED ARTICLES

Most Popular