ನಾಲ್ಕು ಭಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದ ತೆಲುಗು ಹಾಗೂ ತಮಿಳಿನ ಜನಪ್ರಿಯ ನಟಿ ಸಮಂತಾ ಅಂದ್ರೇ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸದ್ಯ ಪುಷ್ಪ ಸಿನಿಮಾದ ಊ ಅಂಟಾವಾ ಮಾಮಾ ಉಹೂಂ ಅಂಟಾವಾ ಮಾವಾ ಅಂತ ರಸಿಕರ ಹೃದಯಕ್ಕೆ ಲಗ್ಗೆ ಹಾಕಿರುವ ಸಮಂತಾ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಮುಗಿಯದ ಕುತೂಹಲ. ಸಮಂತಾ ವಿಚ್ಛೇಧನ ಪಡೆದು ತಿಂಗಳು (Samantha divorce) ಕಳೆದಿದ್ದರೂ ಆಕೆಯ ಮದುವೆಯ ಬದುಕು ಮುಗಿದಿದ್ದು ಯಾಕೆ ಎಂಬ ಫ್ಯಾನ್ಸ್ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಅದಕ್ಕೆ ಆ ಒಂದು ದೃಶ್ಯ ಕಾರಣ ಎಂಬ ಸಂಗತಿ ಈಗ ಬಲಪಡೆದುಕೊಳ್ಳುತ್ತಿದೆ.
ಸಮಂತಾ ರುತ್ ಪ್ರಭು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನ ಪ್ರತಿಭೆಯಿಂದ ಅವಾರ್ಡ್ ಗಳ ಸರಮಾಲೆಯನ್ನೇ ಗೆದ್ದಹೆಣ್ಣುಮಗಳು. ಆದರೆ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಬಹುಕಾಲ ಬಾಳುವ ಯೋಗವಿಲ್ಲದೇ ವಿಚ್ಛೇಧನ ಪಡೆದ ಮೇಲೆ ಸಮಂತಾ ಬದುಕು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. 7-8 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇಧನಕ್ಕೆ ಕಾರಣವೇನು ಎಂದರೇ ಹೊರಬರೋ ಸಂಗತಿ ಸಮಂತಾ ನಟನೆ.
ಹೌದು ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ನಟನೆಯೇ ಇಷ್ಟವಿರಲಿಲ್ಲ.ಈ ಮಧ್ಯೆ ಸಮಂತಾ The Family Man -2 ಸೀರಿಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಸೆಕ್ಸ್ ಸೀನ್ ನಲ್ಲಿ ಸಮಂತಾ ಅಭಿನಯ ನಾಗಚೈತನ್ಯಗೆ ಶಾಕ್ ತಂದಿತ್ತಂತೆ. ಇದೇ ಕಾರಣಕ್ಕೆ ಸಮಂತಾ ಹಾಗೂ ನಾಗಚೈತನ್ಯ ನಡುವೆ ವಿರಸ ಹುಟ್ಟಿಕೊಂಡಿತ್ತು.
ಕೊನೆಗೂ ಫ್ಯಾಮಿಲಿ ಮ್ಯಾನ್ ಸೀರಿಸ್ ನ ಸಮಂತಾ ಬೋಲ್ಡ್ ನಟನೆಯನ್ನೇ ಕಾರಣವಾಗಿಟ್ಟುಕೊಂಡು ಸಮಂತಾರಿಂದ ದೂರವಾಗೋ ನಿರ್ಧಾರ ಮಾಡಿದ್ರಂತೆ ನಾಗಚೈತನ್ಯ. ಸ್ವತಃ ನಾಗಚೈತನ್ಯ ಸಮಂತಾ ಬೋಲ್ಡ್ ನಟನೆಯಿಂದ ಶಾಕ್ ಗೆ ಒಳಗಾಗಿರೋ ಸಂಗತಿಯನ್ನು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರಂತೆ. ಇದೇ ಕಾರಣಕ್ಕೆ ಈ ಮದುವೆಯ ಬಂಧ ಅಧಿಕೃತವಾಗಿ ಅಂತ್ಯಗೊಂಡಿದೆ.
ಆದರೆ ಇದೇ ಕಾರಣಕ್ಕೆ ವಿಚ್ಛೇದನವಾಗಿದ್ದರೂ ಸಮಂತಾ ತಮ್ಮ ಸಿನಿ ಕೆರಿಯರ್ ವಿಚಾರದಲ್ಲಿ ಮಾತ್ರ ಯಾವುದೇ ರಾಜಿಮಾಡಿಕೊಂಡಿಲ್ಲ. ಡಿವೋರ್ಸ್ ಬಳಿಕವೂ ಸಮಂತಾ ತಮ್ಮ ಬೋಲ್ಡ್ ನಟನೆ ಮುಂದುವರೆಸಿದ್ದು ಪುಷ್ಪ ಸಿನಿಮಾದಲ್ಲಿ ಐಕಾನ್ ಸ್ಟಾರ್ ಜೊತೆ ತುಂಡು ಲಂಗದಲ್ಲಿ ಕುಣಿದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ.
ಇದನ್ನೂ ಓದಿ : Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
ಇದನ್ನೂ ಓದಿ : ಸಿನಿಮಾ ರಂಗ ಬಿಡ್ತಾರಂತೆ ರಶ್ಮಿಕಾ : ನಿರ್ಧಾರಕ್ಕೆ ಕಾರಣವೇನು ಗೊತ್ತಾ?!
(one single photo hints at reason for Samantha divorce )