Oo Antava Pushpa Songs : ಐಕಾನ್ ಸ್ಟಾರ್ ಜೊತೆ ಸಮಂತಾ ರೋಮಾನ್ಸ್ : ದಾಖಲೆ ಬರೆದ ಐಟಂ ಸಾಂಗ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ರಿಲೀಸ್ ಗೂ ಮುನ್ನವೇ ಸಖತ್ ಸದ್ದುಮಾಡ್ತಿದೆ. ಡಿಸೆಂಬರ್ 17 ರಂದು ತೆರೆಗೆ ಬರ್ತಿರೋ ಸಿನಿಮಾಕ್ಕಾಗಿ ಅಲ್ಲೂ ಅರ್ಜುನ್, ರಶ್ಮಿಕಾ ಫ್ಯಾನ್ಸ್ ಜೊತೆ ಸಮಂತಾ ( Samantha Romance ) ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಸಮಂತಾ ಸೊಂಟ ಬಳುಕಿಸಿದ ಐಟಂ ಸಾಂಗ್ ( Oo Antava Pushpa Songs ) ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು ರಿಲೀಸ್ ಆಗಿರೋ ಸಾಂಗ್ ಚಿಕ್ಕ ತುಣುಕಿಗೇ ಜನ ಮುಗಿಬಿದ್ದು ಲೈಕ್ಸ್ ಒತ್ತುತ್ತಿದ್ದಾರೆ.

ವೈಯಕ್ತಿಕ ಬದುಕಿನ ಏರಿಳಿತಗಳ ಬಳಿಕ ನಟಿ ಸಮಂತಾ ಡಬ್ಬಲ್ ಜೋಶ್ ಜೊತೆ ವೃತ್ತಿಬದುಕಿಗೆ ಕಾಲಿಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿರೋ ಸಮಂತಾ ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಊ ಅಂತಿಯಾ ಮಾವಾ ಉಹೂಂ ಅಂತಿಯಾ ಮಾವಾ ಅನ್ನೋ ಈ ಮಾದಕ ಹಾಡಿಗೆ ತುಂಡು ಲಂಗ ತೊಟ್ಟು ಹೆಜ್ಜೆ ಹಾಕೋ ಮೂಲಕ ಸಮಂತಾ ಐಟಂ ಸಾಂಗ್ ನಲ್ಲೂ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ.

ಪುಷ್ಪ ಚಿತ್ರತಂಡ ಕೆಲ ದಿನಗಳ ಹಿಂದೆಯಷ್ಟೇ ಸಮಂತಾ ಐಟಂ ಸಾಂಗ್ ನ ಲುಕ್ ಹಾಗೂ ಹಾಡಿನ ಲಿರಿಕಲ್ ಆಡಿಯೋ ರಿಲೀಸ್ ಮಾಡಿತ್ತು. ಕ್ಯಾಚಿ ಲೈನ್ಸ್ ಜೊತೆ ಮಂಗ್ಲಿಯ ನಶೀಲಿ ಧ್ವನಿ ಈ ಹಾಡನ್ನು ಯುವಜನತೆಯ ಎದೆಬಡಿತ ಹೆಚ್ಚಿಸುವಂತೆ ಮಾಡಿತ್ತು. ಪುಷ್ಪ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಇರುವಂತೆ ಪುಷ್ಪ ಚಿತ್ರತಂಡ ಸಿನಿಮಾದ ಫ್ರೀರಿಲೀಸ್ ಇವೆಂಟ್ ನಲ್ಲಿ ಅಲ್ಲು ಅರ್ಜುನ್ ಹಾಗೂ ಸಮಂತಾ ಕುಣಿದಿರೋ ಈ ಐಟಂ ಸಾಂಗ್ ನ 19 ಸೆಕೆಂಡ್ ವಿಡಿಯೋ ಶೇರ್ ಮಾಡಿದೆ.

ಲಿರಿಕಲ್ ಆಡಿಯೋಗೆ ಮುಗಿಬಿದ್ದಿದ್ದ ಜನರು ವಿಡಿಯೋ ಸಾಂಗ್ ಗೆ ಮರುಳಾಗಿದ್ದು ವಿಡಿಯೋ ರಿಲೀಸ್ ಆದ 24 ಗಂಟೆಗಳಲ್ಲೇ ಬರೋಬ್ಬರಿ 12.39 ಮಿಲಿಯನ್ ವಿವ್ಸ್ ಪಡೆದು ಕೊಂಡಿದೆ‌. ಆ ಮೂಲಕ ಈ ವಿಡಿಯೋ ದಕ್ಷಿಣ ಭಾರತದಲ್ಲಿ ರಿಲೀಸ್ ಆದ 24 ಗಂಟೆಗಳಲ್ಲಿ 12.39 ಮಿಲಿಯನ್ ವೀವ್ಸ್ ಪಡೆದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಡಿಮ್ ಲೈಟ್ ನಲ್ಲಿ ಸಖತ್ ರಗಡ್ ಲುಕ್ ನಲ್ಲಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ತುಂಡು ಲಂಗದಲ್ಲಿ ನಟಿ ಸಮಂತಾ ಸಖತ್ ಸ್ಟೆಪ್ಸ್ ಜೊತೆ ಕುಣಿದಿದ್ದು ಹಾಡು ನಟಿಯ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ : Pushpa :The Rise : ಪುಷ್ಪಾ ಸಿನಿಮಾಗೆ ಹೊಸ ಸಂಕಷ್ಟ: ಸಮಂತಾ ಹೆಜ್ಜೆ ಹಾಕಿದ್ದ ನೃತ್ಯದ ವಿರುದ್ಧ ದಾಖಲಾಯ್ತು ಕೇಸ್​

ಇದನ್ನೂ ಓದಿ : Kareena Kapoor Corona Positive : ಬಾಲಿವುಡ್ ನಟಿಯರ ಹುಚ್ಚಾಟ: ಕೊರೋನಾ ಪಾಸಿಟಿವ್ ಬಂದ್ರೂ ಪಾರ್ಟಿ ಮಾಡಿದ ನಟಿ ಕರೀನಾ

ಇದನ್ನೂ ಓದಿ : Laka Laka Lamborghini : ಲ್ಯಾಂಬೋರ್ಗಿನಿಯಲ್ಲಿ ಗುಳಿಕೆನ್ನೆ ಬೆಡಗಿ: ರ್ಯಾಪರ್ ಗೆ ಜೊತೆಯಾದ ರಚಿತಾರಾಮ್

(Oo Antava Pushpa Songs, Samantha Romance with Icon Star)

Comments are closed.