ನವವಿವಾಹಿತರು ತಮ್ಮ ಬಾಳ ಸಂಗಾತಿಗಾಗಿ ವಿಶೇಷ ಉಡುಗೊರೆಗಳನ್ನು ನೀಡುವುದು ಸರ್ವೆ ಸಾಮಾನ್ಯ. ಉಡುಗೊರೆಯಾಗಿ ಆಭರಣ, ವಜ್ರದ ಉಂಗುರ, ಐಷಾರಮಿ ಕಾರು, ಬಂಗಲೆ ನೀಡುತ್ತಾರೆ. ಆದರೆ ಪಾಕಿಸ್ತಾನದ ವರನಾಗಿರುವ ಯೂಟ್ಯೂಬರ್ (Pakistani YouTuber)ತನ್ನ ವಧುವಿಗೆ ಕತ್ತೆ ಮರಿಯನ್ನು ಉಡುಗೊರೆಯಾಗಿ ನೀಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದೆ.
ಯೂಟ್ಯೂಬರ್ ಆಗಿರುವ ಪಾಕಿಸ್ತಾನ ಅಜ್ಲಾನ್ ಷಾ ತನ್ನ ಬಾಳ ಸಂಗಾತಿ ವಾರಿಶಾ ಅವರನ್ನು ಮದುವೆಯಾಗಿದ್ದರು. ಮದುವೆಯ ವೇಳೆಯಲ್ಲಿ ತನ್ನ ಸಂಗಾತಿಗೆ ಕತ್ತೆ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ. ಕತ್ತೆ ಮರಿ ಉಡುಗೊರೆ ನೀಡಿದ ಮಾತ್ರಕ್ಕೆ ದಂಪತಿ ಸುಮ್ಮನಾಗಿಲ್ಲ, ಮರಿಗೆ ಹಾಲು ನೀಡುವ ಸಲುವಾಗಿ ತಾಯಿ ಕತ್ತೆಯನ್ನೂ ಸಹ ಮನೆಗೆ ತಂದಿದ್ದಾರೆ. ಸಾಕಷ್ಟು ಮಂದಿ ಯೂಟ್ಯೂಬರ್ ಅಜ್ಲಾನ್ ಷಾ ಕಾರ್ಯಕ್ಕೆ ಹಲವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
पाकिस्तानी यूट्यूबर ने शादी में पत्नी को गिफ्ट किया गधे का बच्चा
— Priya singh (@priyarajputlive) December 10, 2022
Video हुआ वायरल। pic.twitter.com/fuI7L4tzNF
ಇದನ್ನೂ ಓದಿ : Abhishek- Aviva Engagement: ನಾಳೆ ಅಭಿಷೇಕ್ ಅಂಬರೀಶ್ – ಅವೀವಾ ಬಿದ್ದಪ್ಪ ಎಂಗೇಜ್ ಮೆಂಟ್; ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿ ಕಾರ್ಯಕ್ರಮ
ಇದನ್ನೂ ಓದಿ : Sulochana Chavan Passes Away:ಲಾವಣಿಗಳ ಖ್ಯಾತಿ ಪಡೆದ ಗಾಯಕಿ ಸುಲೋಚನಾ ಚವಾಣ್ ನೆನಪು ಮಾತ್ರ
ಇದನ್ನೂ ಓದಿ : Shivrajkumar: ಇಂದು ಮಂಗಳೂರಿನಲ್ಲಿ ‘ವೇದ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್; ಕೊರಗಜ್ಜನ ಸನ್ನಿಧಾನಕ್ಕೆ ನಟ ಶಿವಣ್ಣ ದಂಪತಿ ಭೇಟಿ
ಇದನ್ನೂ ಓದಿ : Kantara 2 Movie : “ಕಾಂತಾರ 2” ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ಒಪ್ಪಿಗೆ : ರಿಷಬ್ ಶೆಟ್ಟಿಗೆ ದೈವ ವಿಧಿಸಿದ ಷರತ್ತುಗಳೇನು ಗೊತ್ತಾ ?
ಅಜ್ಲಾನ್ ಷಾ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್. ತಾವು ಮಾಡಿರುವ ಕಾರ್ಯದ ಬಗ್ಗೆ, ಕತ್ತೆಯನ್ನು ಏಕೆ ತಂದಿದ್ದೇನೆ ಎನ್ನುವ ಬಗ್ಗೆ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಅವರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಜ್ಲಾನ್ ಷಾ ಇತ್ತೀಚಿಗಷ್ಟೆ ವಾರಿಶಾ ಜಾವೇದ್ ಅವರನ್ನು ವಿವಾಹವಾಗಿದ್ದರು. ನಿಕಾಹ್ (ಮುಸ್ಲಿಂ ವಿವಾಹ) ನಂತರ ದಾವತ್-ಎ-ವಲಿಮಾ (ಆರತಕ್ಷತೆ) ನಡೆಯಿತು. ಆರತಕ್ಷತೆಯ ಸಮಯದಲ್ಲಿ, ಅಜ್ಲಾನ್ ತನ್ನ ನವ ವಧು ವಾರಿಶಾಳಿಗೆ ಕತ್ತೆಮರಿಯನ್ನು ಕರೆತರುವ ಮೂಲಕ ಆಶ್ಚರ್ಯಗೊಳಿಸಿದ್ದಾನೆ. ಆದರೆ ತನ್ನ ಪತಿ ನೀಡಿರುವ ಗಿಫ್ಟ್ ನೋಡಿ ವಾರಿಶಾ ಸಖತ್ ಥ್ರಿಲ್ ಆಗಿದ್ದಾರೆ.
Pakistani YouTuber who gifted a “donkey” to his partner