ಸೋಮವಾರ, ಏಪ್ರಿಲ್ 28, 2025
HomeCinemaಪವಿತ್ರಾ ಲೋಕೇಶ್ -ನರೇಶ್ ಮದುವೆ ವಿವಾದ : ಮತ್ತೆ ಮದುವೆ ಟೀಸರ್ ರಿಲೀಸ್

ಪವಿತ್ರಾ ಲೋಕೇಶ್ -ನರೇಶ್ ಮದುವೆ ವಿವಾದ : ಮತ್ತೆ ಮದುವೆ ಟೀಸರ್ ರಿಲೀಸ್

- Advertisement -

ಕಳೆದ ವರ್ಷದಿಂದ ಪವಿತ್ರಾ ಲೋಕೇಶ್‌ ಹಾಗೂ ನರೇಶ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. ಅದನ್ನು ನಟ ನರೇಶ್‌ ಅವರ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಬಗ್ಗೆ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಅದರ ನಡುವೆ ಒಂದಿಷ್ಟು ದಿನ ಕಳೆದ ಮೇಲೆ ನಟ ನರೇಶ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ರಿಲೀಸ್ (matte maduve teaser release) ಮಾಡಿದ್ದರು. ಇನ್ನು ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್‌ರನ್ನು ಚುಂಬಿಸುವ ದೃಶ್ಯವಿದ್ದು. ಅದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಆಗಿದೆ.

ಅದು ಸಾಲದು ಎನ್ನುವಂತೆ ಮತ್ತೆ ಕೆಲವು ತಿಂಗಳ ಹಿಂದೆ ನರೇಶ್ ಹಾಗೂ ಪವಿತ್ರಾ ಇಬ್ಬರೂ ಮದುವೆ ಆಗುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಎರಡೂವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ನಡುವಲ್ಲೇ ನಾಳೆ (ಏಪ್ರಿಲ್ 21) ಶುಕ್ರವಾರದಂದು ಹೊಸ ಸಿನಿಮಾ ಮತ್ತೆ ಮದುವೆ ಟೀಸರ್‌ ರಿಲೀಸ್‌ಗೆ ಸಿದ್ದವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಇವರು ಹಂಚಿಕೊಂಡ ಎರಡು ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಹೊಸ ಸಿನಿಮಾದ ತುಣುಕುಗಳು ಎನ್ನುವ ಮಾಹಿತಿ ನೀಡಿದ್ದಾರೆ. ಅದು ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ನಟಿಸುತ್ತಿರುವ ‘ಮಳ್ಳಿಪೆಳ್ಳಿ’ ಸಿನಿಮಾದ ತುಣುಕು ಆಗಿತ್ತು. ಹೀಗಾಗಿ ಜೋಡಿಗಳು ನಾಳೆ (ಏಪ್ರಿಲ್ 21) ತಮ್ಮ ಮದುವೆಗೆ ಆಹ್ವಾನ ನೀಡಿದ್ದಾರೆ. ಹಿರಿಯ ನಟ ನರೇಶ್‌ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟು 50 ವರ್ಷಗಳಾಗಿವೆ. ಈ ಬೆನ್ನಲ್ಲೇ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ ‘ಮಳ್ಳಿ ಪೆಳ್ಳಿ’ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ನಟ ನರೇಶ್ ಹೀರೊ ಆಗಿ ನಟಿಸಿದ್ದರೆ, ಪವಿತ್ರಾ ಲೋಕೇಶ್ ನಾಯಕಿ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ : ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5 : ಈ ವಾರದ ಅತಿಥಿಗಳು ಯಾರಾರು ಗೊತ್ತೆ ?

ಇದನ್ನೂ ಓದಿ : ಟಾಲಿವುಡ್ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

ಇನ್ನು ಈ ಸಿನಿಮಾಕ್ಕೆ ತೆಲುಗಿನಲ್ಲಿ ‘ಮಳ್ಳಿ ಪೆಳ್ಳಿ’ ಅನ್ನೋ ಟೈಟಲ್ ಇಟ್ಟಿದ್ದು, ಕನ್ನಡದಲ್ಲಿ ‘ಮತ್ತೆ ಮದುವೆ’ ಟೈಟಲ್ ಮೂಲಕ ತೆರೆ ಕಾಣಲಿದೆ. ಇದೇ ಸಿನಿಮಾದ ಟೀಸರ್ ಎರಡೂ ಭಾಷೆಯಲ್ಲೂ ನಾಳೆ( ಏಪ್ರಿಲ್ 21) ಬೆಳಗ್ಗೆ 11.11ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟೀಸರ್ ಏಪ್ರಿಲ್ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಟೀಸರ್ ರಿಲೀಸ್ ಆಗಿರಲಿಲ್ಲ. ನಾಳೆ(ಏಪ್ರಿಲ್ 21) ಈ ಸಿನಿಮಾದ ಟೀಸರ್ ರಿಲೀಸ್ ಮಾಡುವುದಾಗಿ ಸಿನಿತಂಡ ರಿಲೀಸ್ ಮಾಡಿದೆ.

Pavitra Lokesh-Naresh Marriage Controversy: Matte Maduve Teaser Released

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular