ಸೋಮವಾರ, ಏಪ್ರಿಲ್ 28, 2025
HomeBreakingಪೊಗರು ಸ್ವ್ಯಾಗ್ ಚಾಲೆಂಜ್…..! ಗೆದ್ದೋರಿಗೆ ಧ್ರುವ್ ಸರ್ಜಾ ಜೊತೆ ಸಿನಿಮಾ ನೋಡೋ ಅವಕಾಶ…!!

ಪೊಗರು ಸ್ವ್ಯಾಗ್ ಚಾಲೆಂಜ್…..! ಗೆದ್ದೋರಿಗೆ ಧ್ರುವ್ ಸರ್ಜಾ ಜೊತೆ ಸಿನಿಮಾ ನೋಡೋ ಅವಕಾಶ…!!

- Advertisement -

ಸ್ಯಾಂಡಲ್ ವುಡ್ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಬಹುನೀರಿಕ್ಷಿತ ಚಿತ್ರ ಪೊಗರು ಫೆ.19 ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ಧ್ರುವ್ ಸರ್ಜಾ ಜೊತೆಗೆ ನೋಡೋ ಅವಕಾಶವನ್ನು ಚಿತ್ರತಂಡ ನಿಮಗೆ ನೀಡ್ತಿದೆ.

ಹೌದು, ಪೊಗರು ತಂಡ ಡ್ಯಾನ್ಸ್ ಸ್ವ್ಯಾಗ್ ಚಾಲೆಂಜ್ ಒಂದನ್ನು ಸಾರ್ವಜನಿಕರಿಗೆ ನೀಡಿದೆ. ಈ ಚಾಲೆಂಜ್ ನಲ್ಲಿ ಗೆದ್ದೋರಿಗೆ ಧ್ರುವ್ ಸರ್ಜಾ ಹಾಗೂ ತಂಡದ ಜೊತೆ ಫರ್ಸ್ಟ್ ಡೇ ಫರ್ಸ್ಟ್ ಶೋ ಸಿನಿಮಾ ನೋಡೋ ಅವಕಾಶ ಸಿಗಲಿದೆ.

ಈ ವಿಚಾರವನ್ನು ಸ್ವತಃ ಧ್ರುವ್ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ವಿಡಿಯೋದಲ್ಲಿ ಮಾಡಿರೋ ಡ್ಯಾನ್ಸ್ ಸ್ಟೆಪ್ ಸ್ವ್ಯಾಗ್ ಮಾಡಿ ಮತ್ತು ನಮ್ಮ ಸಿನಿಮಾ ತಂಡದ ಜೊತೆ ಸಿನಿಮಾ ನೋಡೋ ಅವಕಾಶ ಪಡೆಯಿರಿ ಎಂದಿದ್ದಾರೆ.

ಧ್ರುವ್ ಸರ್ಜಾ ಈ ಆಫರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದ ಅಭಿಮಾನಿಗಳು ಸ್ವ್ಯಾಗ್ ಟ್ರೈ ಮಾಡೋಕೆ ಆರಂಭಿಸಿದ್ದಾರೆ. ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಕನ್ನಡ ತಮಿಳು ಸೇರಿ ಮೂರು ಭಾಷೆಯಲ್ಲಿ ರಿಲೀಸ್ ಆಗಲಿದ್ದು ಫೆ.19 ರಂದು ತೆರೆಗೆ ಬರಲಿದೆ.

ಈ ಚಿತ್ರಕ್ಕಾಗಿ ಧ್ರುವ್ ಸರ್ಜಾ ಸಖತ್ ವರ್ಕೌಟ್ ಮಾಡಿದ್ದು ಒಮ್ಮೆ ವೇಟ್ ಹೆಚ್ಚಿಸಿಕೊಂಡ್ರೇ ಇನ್ನೊಮ್ಮೆ ಮೂರು ತಿಂಗಳು ಡಯಟ್ ಮಾಡಿ ವೇಟ್ ಇಳಿಸಿಕೊಂಡಿದ್ದಾರೆ.

ಪೊಗರು ಚಿತ್ರ ಸಾಕಷ್ಟು ಹವಾ ಸೃಷ್ಟಿಸಿದ್ದು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಸದ್ದು ಮಾಡಿದೆ. ಇತ್ತೀಚಗಷ್ಟೇ ಧ್ರುವ್ ಸರ್ಜಾ ಪೊಗರು ಇಮೋಜಿ ಬಳಸಿ ಲೈವ್ ಮಾಡಿ ಇಮೋಜಿ ಬಳಸಿ ಎಂದಿದ್ದರು.

RELATED ARTICLES

Most Popular