Pooja Hegde : ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲಿ ತಮ್ಮ ಭದ್ರವಾಗಿ ನೆಲೆಯೂರಲು ಕಾಯುತ್ತಿರುವ ನಟಿ ಪೂಜಾ ಹೆಗ್ಡೆಗೆ ಬೀಚ್ಗಳು ಅಂದರೆ ತುಂಬಾನೇ ಇಷ್ಟ ಎಂಬುದು ರಹಸ್ಯವಾಗಿ ಉಳಿದಿಲ್ಲ. ಪೂಜಾ ಹೆಗ್ಡೆಯ ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ನೀವು ನೋಡಿದರೆ ನಿಮಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಕೂಡ ಸಿಗುತ್ತದೆ. ಬೀಚ್ನಲ್ಲಿ ನೆಟ್ ಟಾಪ್ ಇರುವ ಬಿಕಿನಿ ತೊಟ್ಟು ಪೂಜಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಪೂಜಾ ಹೆಗ್ಡೆಯನ್ನು ಈ ರೀತಿಯನ್ನು ಹಾಟ್ ಲುಕ್ನಲ್ಲಿ ನೋಡಿದ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಹೃದಯ ಹಾಗೂ ಬೆಂಕಿ ಎಮೋಜಿಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಪೂಜಾ ಹೆಗ್ಡೆ ಪ್ರಸ್ತುತ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಕ್ಲಿಕ್ ಮಾಡಲಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಾನು ಬ್ಯಾಂಕಾಕ್ ಪ್ರಯಾಣಿಸುತ್ತಿರುವ ಬಗ್ಗೆ ಅಭಿಮಾನಿಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನಟಿ ಪೂಜಾ ಹೆಗ್ಡೆ ಒಂದು ತಿಂಗಳು, ಮೂರು ಖಂಡಗಳು, ನಾಲ್ಕು ನಗರಗಳು ,ಹೊರಡೋಣ ಎಂದು ಶೀರ್ಷಿಕೆ ನೀಡಿದ್ದಾರೆ.
ಪೂಜಾ ಹೆಗ್ಡೆ 2022ರ Cannesನಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಆಫ್ ಶೋಲ್ಡರ್ ಗೌನ್ನಲ್ಲಿ ಪೂಜಾ ಹೆಗ್ಡೆ ಫೇರಿ ಟೇಲ್ನಂತೆ ಕಾಣುತ್ತಿದ್ದರು.
ಇನ್ನು ಪೂಜಾ ಹೆಗ್ಡೆ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಸಧ್ಯಕ್ಕೆ ಪೂಜಾ ಹೆಗ್ಡೆ ನಟನೆಯ ಯಾವುದೇ ಸಿನಿಮಾಗಳು ಅವರಿಗೆ ಬ್ರೇಕ್ ನೀಡಿಲ್ಲ . ಮುಂದಿನ ಬಾರಿ ಅವರು ರಣವೀರ್ ಸಿಂಗ್ ಜೊತೆಯಲ್ಲಿ ಸರ್ಕಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೇ ವರ್ಷದ ಕ್ರಿಸ್ಮಸ್ ದಿನದಂದು ಬಿಡುಗಡೆ ಕಾಣಲಿದೆ. ಜಾಕ್ವೆಲಿನ್ ಫರ್ನಾಂಡಿಸ್, ವರುಣ್ ಶರ್ಮಾ, ಜಾನಿ ಲಿವರ್, ಸಂಜಯ್ ಮಿಶ್ರಾ, ಸಿದ್ಧಾರ್ಥ ಜಾಧವ್, ಮುಖೇಶ್ ತಿವಾರಿ, ಅನಿಲ್ ಚರಂಜಿತ್, ಅಶ್ವಿನಿ ಕಲ್ಸೇಕರ್ ಮತ್ತು ಮುರಳಿ ಶರ್ಮಾ ಸೇರಿದಂತೆ ಬೃಹತ್ ತಾರಾಗಣ ಈ ಸಿನಿಮಾದಲ್ಲಿದೆ. ಈ ಸಿನಿಮಾವು ಷೇಕ್ಸ್ಪಿಯರ್ರ ದಿ ಕಾಮಿಡಿ ಆಫ್ ಎರರ್ಸ್ ಎಂಬ ನಾಟಕವನ್ನು ಆಧರಿಸಿದೆ.
ಇದನ್ನು ಓದಿ : Farmers Crop Survey App: ಬೆಳೆ ಸಮೀಕ್ಷೆಗೆ ಬಂದಿದೆ ರೈತ ಸ್ನೇಹಿ ಆ್ಯಪ್
ಇದನ್ನೂ ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !
Pooja Hegde Blows Off Steam In New Vacation Pictures. “Time To Escape,” She Writes