Actress Chitra : ಖ್ಯಾತ ಬಹುಭಾಷಾ ಹಿರಿಯ ನಟಿ ಚಿತ್ರಾ ವಿಧಿವಶ

ಚೆನ್ನೈ : ಖ್ಯಾತ ಬಹುಭಾಷಾ ನಟಿ ಚಿತ್ರಾ ವಿಧಿವಶರಾಗಿದ್ದಾರೆ. ಅವರಿಗೆ 56 ನೇ ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ನಲ್ಲಣ್ಣೈ ಚಿತ್ರಾ ಎಂದೇ ಖ್ಯಾತರಾಗಿರುವ ಚಿತ್ರಾ ಚೆನ್ನೈನ ಸಾಲಿಗ್ರಾಂ ನಿವಾಸಲದದಲ್ಲಿ ವಾಸವಾಗಿದ್ದರು. ಈ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಹಿರಿಯ ನಿರ್ದೇಶಕ ಬಾಲಚಂದರ್ ಅವರ ಅಪೂರ್ವ ರಾಗಂಗಳ ಚಿತ್ರದ ಮೂಲಕ ಬಾಲಾ ಕಲಾವಿದೆಯಾಗಿ ಚಿತ್ರಾ ವೃತ್ತಿ ಆರಂಭಿಸಿದರು. ಆದ್ರೆ 1983ರಲ್ಲಿ ಮಲಯಾಳಂನ ಆಟಕಲಾಸಂ ನಲ್ಲಿ ಮೋಹನ್ ಲಾಲ್ ಮತ್ತು ಪ್ರೇಮ್ ನಜೀರ್‌ ಜೊತೆಯಲ್ಲಿ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.

100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ಮಲಯಾಲಂ ಚಿತ್ರರಂಗದಲ್ಲಿ ಪ್ರಸಿದ್ದ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರಾ ಅವರು ಪತಿ ವಿಜಯರಾಘವನ್ ಮತ್ತು ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ. ಹಿರಿಯ ನಟಿ ಚಿತ್ರಾ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಇದನ್ನೂ ಓದಿ : ದೇಶದ ಒಳಗೂ ಶತ್ರುಗಳಿದ್ದಾರೆ: ನಟಿ ಪ್ರಣೀತಾ ಬೋಲ್ಡ್ ಟ್ವೀಟ್!

ಇದನ್ನೂ ಓದಿ : Sudeep: ವಿಕ್ರಾಂತ್ ರೋಣ ಅಡ್ಡಾದಿಂದ ಸ್ಪೆಶಲ್ ಅಪ್ಡೇಟ್: ಸುದೀಪ್ ಹೇಳಿದ್ದೇನು ಗೊತ್ತಾ!

Comments are closed.