ಸ್ಯಾಂಡಲ್‌ವುಡ್ ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್ ನಿರ್ದೇಶನದ “ಕೆಡಿ” ಸಿನಿಮಾ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಆರಂಭಿಕ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ಇನು ಈ ಸಿನಿಮಾದಲ್ಲಿ ರವಿಚಂದ್ರನ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿಯಂತಹ ಘಟಾನುಘಟಿಗಳು ಒಳಗೊಂಡ ತಾರಾಂಗಣವಿದೆ. ಈ ಸಿನಿಮಾದ ಹೆಚ್ಚಿನ ಪಾತ್ರ ಪರಿಚಯವಾಗಿದ್ದು, ಸದ್ಯ ಸಿನಿಮಾ ನಾಯಕಿ ಪಾತ್ರ ಬಾಕಿ ಉಳಿದಿದೆ. ಇದೇ ಬರುವ ಶುಕ್ರವಾರ (ಏಪ್ರಿಲ್ 28) ಸಿನಿಮಾದ ನಾಯಕಿ ಮಚ್ಚ್‌ಲಕ್ಷ್ಮಿ ಯಾರು ಎನ್ನುವುದನ್ನು (KD movie heroine look release) ಸಿನಿತಂಡ ತಿಳಿಸಲಿದೆ.
ಕೆವಿನ್ ಪ್ರೋಡಕ್ಷನ್ ಸಾಮಾಜಿಕ ಜಾಲತಾಣದಲ್ಲಿ, “ರಾಜನು ಯುದ್ಧದಲ್ಲಿ ಗಾಯಗೊಂಡಾಗ, ರಾಣಿ ಅವನ ನೋವನ್ನು ಶಕ್ತಿಯಾಗಿ ಪರಿವರ್ತಿಸುತ್ತಾಳೆ. ಏಪ್ರಿಲ್ 28 ರಂದು ಬೆಳಿಗ್ಗೆ 10.05 ಕ್ಕೆ KD ಯ ರಾಣಿ -ಮಚ್‌ಲಕ್ಷ್ಮಿಯನ್ನು ಪರಿಚಯಿಸಲಾಗುತ್ತಿದೆ.” ಎಂದು ಸ್ಪೆಷಲ್ ಪೋಸ್ಟರ್ ಮೂಲಕ ತಿಳಿಸಿದ್ದಾರೆ. ನಿರ್ದೇಶಕ ಪ್ರೇಮ್ ಹೆಚ್ಚಾಗಿ ಪರಭಾಷೆಯನ್ನು ನಟಿಯರನ್ನು ಕರೆತರಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು “ಕೆಡಿ” ಫ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ತೆರೆ ಕಾಣಲಿದೆ.
When the king is hurt in a battle, the queen converts his pain into power. Introducing #KD's queen – #MachhLakshmi on the 28th of April at 10:05 AM.#KDTheDevil@KvnProductions @directorprems @DhruvaSarja @SUPRITH_87 @ArjunJanyaMusic @duttsanjay @TheShilpaShetty #VRaviChandran pic.twitter.com/iwPO4gbrmU
— KVN Productions (@KvnProductions) April 25, 2023
ಈ ಸಿನಿಮಾದಲ್ಲಿ ಧ್ರುವ ಸರ್ಜಾ ರಗಡ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಸಿನಿಮಾದ ನಾಯಕಿ ಬಗ್ಗೆ ಗುಸು ಗುಸು ನಡೆಯುತ್ತಿದೆ. ಸದ್ಯ ‘ಏಕ್‌ಲವ್ ಯಾ’ ಸಿನಿಮಾದ ನಟಿ ರೀಷ್ಮಾ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಂತೆ ಸಿನಿತಂಡ ಅಧಿಕೃತವಾಗಿ ತಿಳಿಸಬೇಕಿದೆ.
ಇದನ್ನೂ ಓದಿ : ಡಾ. ರಾಜಕುಮಾರ್ ಹುಟ್ಟುಹಬ್ಬ : ಅಪ್ಪಾಜಿ ಬರ್ತಡೆಗೆ ವಿಶೇಷ ಪತ್ರ ಬರೆದ ಮಗ ಶಿವ ರಾಜ್‌ಕುಮಾರ್
ಇದನ್ನೂ ಓದಿ : ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಗೆ 94ನೇ ಹುಟ್ಟು ಹಬ್ಬ : ಎಲ್ಲೆಲ್ಲೂ ಸಂಭ್ರಮಾಚರಣೆ
1968 ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಹಣೆಯಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಸಿನಿಮಾಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸುತ್ತಿದ್ಧಾರೆ. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗುತ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ ‘ಕೆಡಿ’ ಕರಾಮತ್ತು ಶುರುವಾಗಲಿದೆ. ಸದ್ಯ ಎಲ್ಲದಕ್ಕೂ ಮೊದಲು ಮುನ್ನ ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಅಭಿಮಾನಿಗಳಿಗೆ ಟ್ರೀಟ್ ಕಾದಿರುತ್ತದೆ.
Prem directed KD movie heroine look release date fixed