ಭಾನುವಾರ, ಏಪ್ರಿಲ್ 27, 2025
HomeCinemaPretha Movie : ಕಲಾಕರ್‌ ಹರೀಶ್ ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಪ್ರೇತ' ಫಸ್ಟ್‌...

Pretha Movie : ಕಲಾಕರ್‌ ಹರೀಶ್ ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಪ್ರೇತ’ ಫಸ್ಟ್‌ ಲುಕ್ ರಿಲೀಸ್

- Advertisement -

ನಟ ಹರೀಶ್‌ ರಾಜ್‌ ಬಣ್ಣದಲೋಕಕ್ಕೆ ಕಾಲಿಟ್ಟು 25 ಸಂವತ್ಸರ ಕಳೆದಿದೆ. ನಟ ಹರೀಶ್‌ ರಾಜ್‌ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾಪ್ರೇಮಿಗಳನ್ನು ರಂಜಿಸುವ ಮೂಲಕ ಕಲಾಕರ್ ಎನ್ನುವ ಹೆಗ್ಗಳಿಕೆಯ ಬಿರುದನ್ನು ಪಡೆದುಕೊಂಡಿದ್ದಾರೆ. ಬಣ್ಣದಲೋಕಕ್ಕೆ ಕಾಲಿಟ್ಟು ಬೆಳ್ಳಿ ಸಂಭ್ರಮದ ಖುಷಿಯಲ್ಲಿರುವ ಹರೀಶ್‌ ರಾಜ್‌ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ನಟ ಹರೀಶ್‌ ರಾಜ್‌ ಮತ್ತೆ ನಿರ್ದೇಶನದತ್ತ ಗಮನ ಹರಿಸಿದ್ದು, ಇವರ ಹೊಸ ಸಿನಿಮಾ ಪ್ರೇತ (Pretha Movie) ಫಸ್ಟ್‌ ಲುಕ್ ರಿಲೀಸ್ ಆಗಿದೆ.

ಕಲಾಕರ್‌ ಹರೀಶ್‌ ರಾಜ್‌ ನಟನೆಯ ಜೊತೆ ಜೊತೆಯಲಿ ನಿರ್ದೇಶನದಲ್ಲಿಯೂ ಹೆಸರು ಗಳಿಸಿದ್ದಾರೆ. ಇದೀಗ ತಮ್ಮದೇ ಹರೀಶ್ ರಾಜ್ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಪ್ರೇತ ಎಂಬ ಸಿನಿಮಾವನ್ನು ನಿರ್ದೇಶನದ ಜೊತಗೆ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಸದ್ಯ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಗಮನಸೆಳೆಯುತ್ತಿದೆ. ಮೊಬೈಲ್ ಟರ್ಚ್ ಬೆಳಕಿನಲ್ಲಿ ಕತ್ತಲೇ ಕಾಡಿನಲ್ಲಿ ಭಯಭೀತರಾಗಿ ನಿಂತಿರುವ ಹರೀಶ್ ರಾಜ್, ಅವರ ಹಿಂದೆ ಭೂತದ ರೀತಿಯ ಆಕೃತಿ ಲುಕ್ ಸಿನಿಪ್ರೇಕ್ಷಕರ ಕುತೂಹಲ ದ್ವಿಗುಣಗೊಳಿಸಿದೆ.

ಸಿನಿಮಾ ಟೈಟಲ್ ಹೇಳುವಂತೆ ಇದೊಂದು ಹಾರರ್ ಕಥಾಹಂದರವನ್ನು ಒಳಗೊಂಡಿದೆ. ಈ ಸಿನಿಮಾಕ್ಕೆ ಹರೀಶ್ ಕಥೆ, ಸಿನಿಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಬಿ ಎಂ ವೆಂಕಟೇಶ್, ಅಮಿತ್ ತಾರಾಬಳಗದಲ್ಲಿದ್ದಾರೆ. ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಸಿನಿಮಾಕ್ಕಿದೆ. ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ.

ಇದನ್ನೂ ಓದಿ : Raktaksh movie : ರಕ್ತಾಕ್ಷ ಮಾಸ್ ಟೀಸರ್ ರಿಲೀಸ್, ಪ್ರಮೋದ್-ರೋಹಿತ್ ಭರ್ಜರಿ ಆಕ್ಷನ್ : ಭರವಸೆ ಮೂಡಿಸಿದ ಯುವ ಪ್ರತಿಭೆಗಳ ಚೊಚ್ಚಲ ಪ್ರಯತ್ನ

ಇದನ್ನೂ ಓದಿ : Rashmika Mandanna : ತಮಿಳು ಖ್ಯಾತ ನಟ ಧನುಷ್‌ ಗೆ ಜೋಡಿ ಆಗ್ತಾರಾ ನಟಿ ರಶ್ಮಿಕಾ ಮಂದಣ್ಣ

ಪ್ರೇತ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದ್ದು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬರುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿ‌ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಪ್ರೇತ ಸಿನಿಮಾವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ತೆರೆಗೆ ತರಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇನ್ನು, ವಿರಾಜಪೇಟೆ, ಮಡಿಕೇರಿ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಕಲಾಕರ್, ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್ ಸೇರಿದಂತೆ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಹರೀಶ್ ರಾಜ್ ಮೂರು ವರ್ಷದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಸಹಜವಾಗಿ ನಿರೀಕ್ಷೆ ದುಪ್ಪಟ್ಟು ಮಾಡಿದೆ.

Pretha Movie : Pan India movie ‘Pretha’ directed by Kalakar Harish Raj first look release

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular