ಮಂಗಳವಾರ, ಏಪ್ರಿಲ್ 29, 2025
HomeCinemaPriyanka Thimmesh : ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಪ್ರಿಯಾಂಕಾ ತಿಮ್ಮೇಶ್‌

Priyanka Thimmesh : ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಪ್ರಿಯಾಂಕಾ ತಿಮ್ಮೇಶ್‌

- Advertisement -

ಕನ್ನಡ ಬಿಗ್‌ಬಾಸ್‌ ಸೀಸನ್‌ 8 ಖ್ಯಾತಿಯ ನಟಿ ಪ್ರಿಯಾಂಕಾ ತಿಮ್ಮೇಶ್‌ (Priyanka Thimmesh) ಕನ್ನಡದ ಗಣಪ ಸಿನಿಮಾ ಮೂಲಕ ಸಿನಿಲೋಕಕ್ಕೆ ಪಾದರ್ಪಾಣೆ ಮಾಡಿದ್ದಾರೆ. ನಟಿ ಪ್ರಿಯಾಂಕಾ ಕನ್ನಡ ಸಿನಿಮಾ ಮಾತ್ರವಲ್ಲದೇ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸದಾ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ನಟಿ ಪ್ರಿಯಾಂಕ್‌ ಆಗ ಫೋಟೋ ಹಾಗೂ ರೀಲ್ಸ್‌ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಸ್‌ ಗಳಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸುತ್ತಿದ್ದಾರೆ.

ನಟಿ ಪ್ರಿಯಾಂಕಾ ತಿಮ್ಮೇಶ್‌ ಇನ್‌ಸ್ಟಾಗ್ರಾಮ್‌ ಫೇಜ್‌ನಲ್ಲಿ ಹಂಚಿಕೊಂಡ ಫೋಟೋಸ್‌ಗಳಲ್ಲಿ ಶಾರ್ಟ್ಸ್‌ ಹಾಗೂ ಟೀ ಶರ್ಟ್‌ ಹಾಕಿಕೊಂಡು ಕುರ್ಚಿ ಮೇಲೆ ಕುಳಿತುಕೊಂಡು ವಿವಿಧ ಭಂಗಿಯಲ್ಲಿ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದಾರೆ. ನಟಿ ಪ್ರಿಯಾಂಕ ಮೂಲತಃ ಭದ್ರಾವತಿಯವರಾಗಿದ್ದು, ತಂದೆ ತಿಮ್ಮೇಶ್‌ ಹಾಗೂ ತಾಯಿ ಗಿರಿಜಾ ಅವರ ಮುದ್ದಿನ ಮಗಳು. ನಟಿ ಪ್ರಿಯಾಂಕಾ ಅವರಿಗೆ ಒಬ್ಬ ಅಣ್ಣ ಕೂಡ ಇದ್ದಾರೆ. ನಟಿ ಪ್ರಿಯಾಂಕಾ ಅವರು ಭದ್ರಾವತಿಯ ಸೇಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು ಮತ್ತು ಶಿವಮೊಗ್ಗದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದರು.

#image_title
#image_title

ನಟಿ ಪ್ರಿಯಾಂಕಾ ಸಿನಿಲೋಕಕ್ಕೆ ಬರುವ ಮುನ್ನ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೀತಿಯಿಂದ ಸೀರಿಯಲ್‌ನಲ್ಲಿ ಕಾಶ್ಮೀರಿ ಹುಡುಗಿ ಗುಲಾಬಿಯಾಗಿ ಕರ್ನಾಟಕದ ಮನೆ ಮಗಳಾಗಿ ಚಿರಪರಿಚಿತರು. 2015 ರ ಪ್ರಭು ಶ್ರೀನಿವಾಸ್‌ ಅವರ ಗಣಪ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ದಿನಗಳಲ್ಲಿ ಅಕಿರಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ.

#image_title

ನಂತರ ನಟಿ ಪ್ರಿಯಾಂಕಾ ಪಟಾಕಿ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್ ತಂಗಿ ಪಾತ್ರದಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ನಂತರದ ದಿನಗಳಲ್ಲಿ ಪರ ಭಾಷೆ ಸಿನಿಮಾಗಳಲ್ಲಿ ಅಂದರೆ ಕಾರ್ತಿಕ್ ಸರಗೂರ್ ನಿರ್ದೇಶನದ ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಮುಂಬರುವ ಸಿನಿಮಾ ಭೀಮ ಸೇನಾ ನಳ ಮಹಾರಾಜನಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : Appu Cup Season-2 : ಅಪ್ಪು ಕಪ್ ಸೀಸನ್-2 ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ : ಲೋಗೋ ಅನಾವರಣಗೊಳಿಸಿದ ಪ್ರಕಾಶ್ ಪಡುಕೋಣೆ

ಇದನ್ನೂ ಓದಿ : Radhika Kumarswamy : ಅಂತರಾಷ್ಟ್ರೀಯ ಯೋಗ ದಿನ : ಯೋಗ ಭಂಗಿಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ

ರೋಶನ್ ಆಂಡ್ರ್ಯೂಸ್ ನಿರ್ದೇಶನದ ನಿವಿನ್ ಪೌಲಿಯ ಮಲಯಾಳಂ ಸಿನಿಮಾ ಕಾಯಂಕುಲಂ ಕೊಚುನ್ನಿನಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ ೮ ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಸದ್ಯ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುವ ನಟಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

Priyanka Thimmesh: Actress Priyanka Thimmesh shared new photos on Instagram

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular