ಹೊಸ ಪ್ರತಿಭೆಗಳಿಗೆ ಮಣೆಹಾಕಬೇಕು. ಹೊಸ, ಹೊಸ ತಂತ್ರಜ್ಞರನ್ನು ಒಂದೆಡೆ ಸೇರಿಸಬೇಕು. ಒಟ್ಟಾರೆ, ಚಿತ್ರಕಥೆ, ನಿರ್ದೇಶನಗಳಲ್ಲಿ ಹೊಸದಿಕ್ಕನ್ನು ಹುಡುಕಬೇಕು ಅನ್ನೋದು ಪುನೀತ್(PRK production) ಅವರ ಕನಸು. ಚಿತ್ರ ಮಾಡುವ ಕನಸು ಕಾಣುವವರಿಗೆ, ಅದಕ್ಕಾಗಿ ಹೊಸ ಆಲೋಚನೆಗಳನ್ನು ಮಾಡುವವರಿಗೆ ವೇದಿಕೆ ನಿರ್ಮಿಸಬೇಕು ಅನ್ನೋದು ಅವರ ಉದ್ದೇಶವಾಗಿತ್ತು. ಹೀಗಾಗಿ ಪಿಆರ್ ಕೆ ಪ್ರೊಡಕ್ಷನ್ (PRK production) ಶುರುಮಾಡಿದರು. ಒಂದಷ್ಟು ಕನಸುಗಳನ್ನು ಕಟ್ಟಿಕೊಂಡು ತಿರುಗಾಡಿದರು. ಪುನೀತ್ ನಂತರ ಅವರ ಯಾವ ಕನಸುಗಳೂ ಮಣ್ಣಾಗಲಿಲ್ಲ. ಬದಲಿಗೆ, ಪುನೀತ್ ಆಸೆಗಳನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈಡೇರಿಸಿಕೊಂಡು ಬರುತ್ತಿದ್ದಾರೆ.

ಈಗಾಗಲೇ ಪುನೀತ್ ಅನುಪಸ್ಥಿತಿಯಲ್ಲಿ ಒಂದು ಸಿನಿಮಾ, ಒಂದು ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಮುಂದುವರಿದ ಭಾಗವಾಗಿ ಮೂರನೇ ಚಿತ್ರವೂ ಘೋಷಣೆಯಾಗಿದೆ. ಚಿತ್ರದ ಹೆಸರೇ ಕುತೂಹಲಕಾರಿಯಾಗಿದೆ. ಅದುವೇ, ಆಚಾರ್ ಅಂಡ್ ಕೋ. ಈ ಚಿತ್ರದ ವಿಶೇಷವನ್ನು ಹೇಳಲೇಬೇಕು. ಪುನೀತ್ ಅವರಿಗಿದ್ದ ಗುರಿಗೆ ತಕ್ಕಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಪ್ರಯೋಗವೊಂದನ್ನು ಮಾಡಲು ಮುಂದಾಗಿದ್ದಾರೆ. ಅದೇನೆಂದರೆ, ಆಚಾರ್ ಅಂಡ್ ಕೋ ಚಿತ್ರದ ಪ್ರಮುಖ ವಿಭಾಗಗಳನ್ನು ಮುನ್ನಡೆಸುತ್ತಿರುವವರು ಮಹಿಳೆಯರು. ನಿರ್ಮಾಪಕಿ, ನಿರ್ದೇಶಕಿ, ಸಂಗೀತ ನಿರ್ದೇಶನ ಹೀಗೆ ಒಂದಷ್ಟು ಆಯಾಕಟ್ಟಿನ ಸಿನಿಮಾ ಕೆಲಸಗಳನ್ನು ಮಹಿಳೆಯರ ತಂಡವೇ ಮಾಡಲು ನಿಂತಿದೆ.

ಇದನ್ನೂ ಓದಿ: Alia Ranbir Wedding : ಮುಂದಿನವಾರವೇ ಫಿಕ್ಸ್ ಆಯ್ತಾ? ರಣಬೀರ್-ಅಲಿಯಾ ಭಟ್ ಮದುವೆ!
ಸಿಂಧು ಶ್ರೀನಿವಾಸ ಮೂರ್ತಿ ಅವರಿಗೆ ಇದು ಚೊಚ್ಚಲ ನಿರ್ದೇಶನ. ಹಾಗೆಯೇ ಸಂಗೀತ ನಿರ್ದೇಶನ ಮಾಡುತ್ತಿರುವವರು ಬಿಂದುಮಾಲಿನಿ. ಈ ಮಾಹಿತಿಯನ್ನು ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘-ಆಚಾರ್ ಅಂಡ್ ಕೋ ಪಿಆರ್ ಕೆ ಪ್ರೊಡಕ್ಷನ್ ನ 10ನೇ ಸಿನಿಮಾ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರುವ ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವು ಮಹಿಳೆಯರು ಒಳಗೊಂಡಿದ್ದಾರೆ’.
@ashwinipuneet @gurudath_talwar #SindhuSreenivasaMurthy @BindhumaliniN @PRKAudio @DoCreativeLabs @danniecorreya #PowerInU
— PRK Productions (@PRK_Productions) April 6, 2022
(3/3) pic.twitter.com/cUy4gU6EPJ

ಒಟ್ಟಾರೆ, ಪುನೀತ್ ರಾಜ್ ಕುಮಾರ್ ಅವರ ಕನಸಗಳನ್ನು ಒಂದೊಂದಾಗಿ ಬಿಡಿಸಿಕೊಂಡು, ಅಶ್ವಿನಿ ಅವರು ಜಾರಿ ಮಾಡುತ್ತಿದ್ದಾರೆ. ಪುನೀತ್ ನಿಧನದ ನಂತರ ಪಿಆರ್ ಕೆ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿತ್ತು. ಆದರೆ, ಈಗ ಆ ರೀತಿಯ ಯಾವ ಆತಂಕವೂ ಕಾಡದಂತೆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಸ್ಕ್ರಿಪ್ಟ್ ಪೂಜೆ ಮತ್ತು ಶೂಟಿಂಗ್ ಶುಭಾರಂಭದ ಕ್ಷಣಗಳು ✨
— PRK Productions (@PRK_Productions) April 6, 2022
(1/3) pic.twitter.com/WYqO21KLZJ
ಇದನ್ನೂ ಓದಿ: KGF Chapter 2 Vs Beast : ಕೆಜಿಎಫ್ ಚಾಪ್ಟರ್ -2 Vs ಬೀಸ್ಟ್ : ಇದರಲ್ಲಿ ಗೆಲ್ಲೋರು ಯಾರು?
Glimpse of the script Pooja and Day 1 of shoot✨
— PRK Productions (@PRK_Productions) April 6, 2022
(2/3) pic.twitter.com/Nm0ZGyRfhU
(PRK production Puneeth Rajkumar s PRK production announced a new film)