ಹಲವು ವಿಶೇಷತೆಗಳಿಂದ ರಿಲೀಸ್ ಗೂ ಮುನ್ನವೇ ಸದ್ದು ಮಾಡ್ತಿರೋ ಸಿನಿಮಾ ಯುವ. ಸದ್ಯ ಶೂಟಿಂಗ್ ಹಂತದಲ್ಲಿರೋ ಸಿನಿಮಾ ಸೆಟ್ ನಲ್ಲಿ ವಿಶೇಷ ಅತಿಥಿಯೊಬ್ಬರು ಕಾಣಿಸಿ ಕೊಂಡಿದ್ದಾರೆ. ಅವರು ಮತ್ಯಾರೂ ಅಲ್ಲ ನಾಡಿನ ಪ್ರೀತಿಯ ಮಗ ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ರಿ ವಂದಿತಾ ಪುನೀತ್ ರಾಜ್ ಕುಮಾರ್ (vanditha puneeth rajkumar )
ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಯುವ ರಾಘವೇಂದ್ರ ರಾಜ್ ಕುಮಾರ್ (Yuva Raghavendra Rajkumar) ಸ್ಯಾಂಡಲ್ ವುಡ್ (Sandalwood) ಗೆ ಕಾಲಿರಿಸಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮುಹೂರ್ತ ನಡೆದಿದ್ದು ಸದ್ಯ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾಗೆ ಹಿರೋಯಿನ್ ಆಗಿ, ಕಾಂತಾರದ ಚೆಲುವೆ ಸಪ್ತಮಿ ಗೌಡ (Kantara Actress Sapthami Gowda) ಆಯ್ಕೆಯಾಗಿದ್ದಾರೆ. ಈ ಮಧ್ಯೆ ಸಿನಿಮಾದ ಶೂಟಿಂಗ್ ಸೆಟ್‌ನಿಂದ ಅಪರೂಪದ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಯುವ ಶೂಟಿಂಗ್ ಸೆಟ್ ನಲ್ಲಿ ಸಹೋದರನ ಜೊತೆ ಪುನೀತ್ ರಾಜ್ ಕುಮಾರ್ ಎರಡನೇ ಪುತ್ರಿ ವಂದಿತಾ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಲೇಹ್ ಪ್ರದೇಶದಲ್ಲಿ ಶೂಟಿಂಗ್ ನಲ್ಲಿದೆ. ಈ ಸಿನಿಮಾ ಸೆಟ್ ಜೊತೆ ವಂದಿತಾ ಕೂಡಾ ಲೇಹ್ ಪ್ರದೇಶಕ್ಕೆ ತೆರಳಿದ್ದಾರೆ. ಅಣ್ಣನ ಸಿನಿಮಾ ಶೂಟಿಂಗ್ ನಲ್ಲಿ ವಂದಿತಾ ಖುಷಿಯಿಂದ ಭಾಗಿಯಾಗಿದ್ದಾರೆ. ವಂದಿತಾ ಸಹೋದರ ಯುವ ರಾಜ್ ಕುಮಾರ್ ಜೊತೆ ಇರೋ ಪೋಟೋವನ್ನು ನಟಿ ಸಪ್ತಮಿ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : New Pet Alert : ದರ್ಶನ್ ತೂಗುದೀಪ್ ಪತ್ನಿ ವಿಜಯಲಕ್ಷ್ಮೀ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ ?
ಸೋಷಿಯಲ್ ಮೀಡಿಯಾದಲ್ಲಿ ಶೂಟಿಂಗ್ ಜೊತೆ ಫ್ರೀ ಟೈಂ ನಲ್ಲಿ ಚಿತ್ರತಂಡ ಮಸ್ತಿ ಮಾಡ್ತಿರೋ ವಿಡಿಯೋವನ್ನು ಸಪ್ತಮಿ ಗೌಡ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಪೋಟೋದಲ್ಲಿ ಸಪ್ತಮಿ ಗೌಡ ಲೇಹ್ ನ ಸಿಟಿಯಲ್ಲಿ ಚಳಿ ಚಳಿ ಗಾಳಿಯಲ್ಲಿ ನಡುಗುತ್ತಾ ಪೋಸ್ ಕೊಡ್ತಿದ್ದರೇ ಇನ್ನೊಂದರಲ್ಲಿ ನಟಿ ಸಪ್ತಮಿ ಗೌಡ, ವಂದಿತಾ ಹಾಗೂ ಯುವ ರಾಜ್ ಕುಮಾರ್ ಇತರರು ಫ್ರೀ ಟೈಂನಲ್ಲಿ ಹರಟೆ ಹೊಡಿತಿರೋ ಪೋಟೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ನೆನಪಿನ ಆಳದಲ್ಲಿ ಎರಡು ವರ್ಷ : ಬಾವುಕವಾಗಿ ಅಪ್ಪು ನೆನೆದ ಅಶ್ವಿನಿ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಗೆ ಇಬ್ಬರು ಪುತ್ರಿಯರು. ತಂದೆ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದರೂ ಪುನೀತ್ ಮಕ್ಕಳಿಗೆ ಸ್ವಲ್ಪ ನಾಚಿಕೆ ಸ್ವಭಾವ. ಹೀಗಾಗಿ ಯಾವುದೇ ಸಮಾರಂಭ, ಅವಾರ್ಡ್ ಫಂಕ್ಷನ್ ಏನೇ ಇದ್ದರೂ ಪುನೀತ್ ಪುತ್ರಿಯರು ವೇದಿಕೆಗೆ ಬಂದವರೇ ಅಲ್ಲ. ತಂದೆಯ ನಿಧನದ ಬಳಿಕವಂತೂ ಯಾವುದೇ ಸಂದರ್ಭದಲ್ಲೂ ವಂದಿತಾ ಅಥವಾ ಧೃತಿ ಕ್ಯಾಮರಾ ಎದುರು ಕಾಣಿಸಿರಲಿಲ್ಲ.

ತಂದೆಯ ಒಂದನೇ ವರ್ಷದ ಸ್ಮರಣೆ ಸೇರಿದಂತೆ ಎಲ್ಲ ಕಾರ್ಯಕ್ರಮದಲ್ಲೂ ವಂದಿತಾ ಹಾಗೂ ದೃತಿ ಕೇವಲ ವೇದಿಕೆಯ ಮುಂಭಾಗದಲ್ಲಷ್ಟೇ ಕಾಣಸಿಗುತ್ತಿದ್ದರು. ಇದೀಗ ಮೊದಲನೇ ಭಾರಿ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆಯ ನಿಧನದ ನಂತರ ಪುನೀತ್ ಪುತ್ರಿಯರ ಜೊತೆ ಅವರ ಸಹೋದರರಾದ ಯುವ ಹಾಗೂ ಗುರು ರಾಘವೇಂದ್ರ ರಾಜ್ ಕುಮಾರ್ ಸದಾ ನಿಂತಿದ್ದು, ವಂದಿತಾ ಹಾಗೂ ಧೃತಿ ಎಲ್ಲೇ ಹೋಗೋದಾದರೂ ಜೊತೆಗಿದ್ದು ಪ್ರೋತ್ಸಾಹ ನೀಡುತ್ತಾರೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ
ಈಗ ಸಿನಿಮಾ ಸೆಟ್ ನಲ್ಲಿ ಯುವ ಜೊತೆ ವಂದಿತಾ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದರೆ ರಾಜ್ ಕುಮಾರ್ ಕುಟುಂಬದ ಮೂರನೇ ತಲೆಮಾರು ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಶಿವರಾಜ್ ಕುಮಾರ್ ಎರಡನೇ ಮಗಳು ನಿವೇದಿತಾ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ರಾಘವೇಂದ್ರ್ ರಾಜ್ ಕುಮಾರ್ ಮಕ್ಕಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಪುನೀತ್ ಪುತ್ರಿಯೂ ಆಸಕ್ತಿಯಿಂದ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡಿದ್ದು ಮುಂದಿನ ದಿನದಲ್ಲಿ ಅವರು ಕೂಡ ಪುನೀತ್ ಹಾಗೂ ಅಶ್ವಿನಿಯವರ ಪಿಆರ್ ಕೆ ಸ್ಟುಡಿಯೋಸ್ ಮುಂದುವರೆಸಿದರೇ ಅಚ್ಚರಿ ಏನಿಲ್ಲ.
Puneeth Raj kumar daughter vanditha puneeth rajkumar on the yuva Rajkumar and Sapthami Gowda New Movie shooting set