ಬೆಂಗಳೂರು : ಸ್ಯಾಂಡಲ್‌ವುಡ್ ಪವರ್ ಸ್ಟಾರ್, ದೊಡ್ಮನೆ ಮಗ ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ದೊಡ್ಮನೆ ಕುಟುಂಬ ಅಭಿಮಾನಿಗಳು ಹಾಗೂ ಗಣ್ಯರಿಗಾಗಿ ಅನ್ನಸಂತರ್ಪಣೆಯನ್ನು ಆಯೋಜಿಸದೆ. ಖುದ್ದು ಧರ್ಮಪತ್ನಿ ಅಶ್ವಿನಿ ಪುನೀತ್ ಹಾಗೂ ಶಿವರಾಜ್ ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ಅಭಿಮಾನಿಗಳಿಗೆ ಖುದ್ದು ಊಟ ಬಡಿಸಿದ್ದಾರೆ.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ತಾವು ಅನ್ನಸಂತರ್ಪಣೆಗೆ ಬಂದಿಲ್ಲ, ಬದಲಾಗಿ ದೇವರ ಪ್ರಸಾದ ಸ್ವೀಕರಿಸುತ್ತಿದ್ದೇವೆ ಎಂದಿದ್ದಾರೆ. ಅಭಿಮಾನಿಗಳ ಅಭಿಮಾನವನ್ನು ಕಂಡು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ಭಾವಚಿತ್ರದ ಮುಂದೆ ನಿಂತು ಭಾವುಕರಾದ್ರು. ನಂತರ ಇಡೀ ಕುಟುಂಬಸ್ಥರು ಅಭಿಮಾನಿಗಳಿಗೆ ಖುದ್ದು ಊಟ ಬಡಿಸುವ ಮೂಲಕ ಅಭಿಮಾನಿಗಳೇ ನಮ್ಮ ದೇವರು ಎಂದಿದ್ದಾರೆ.

ಪುನೀತ್ ನಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಆತ ಬಲಗೈ ಮಾಡಿದ್ದು ಎಡಗೈಗೆ ಗೊತ್ತೇ ಆಗದಂತೆ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾನೆ. ಪುನೀತ್ ಇಷ್ಟೆಲ್ಲಾ ಕೆಲಸ ಮಾಡಿದ್ದಾನೆಂದು ನಮಗೆ ಗೊತ್ತೇ ಇರಲಿಲ್ಲ. ನಾವು ಏನೇ ಮಾಡಿದ್ರೂ ಅದಕ್ಕೆ ಅಭಿಮಾನಿಗಳೇ ಕಾರಣ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಕಳೆದ 12 ದಿನಗಳಿಂದಲೂ ನೋವನ್ನು ಹಂಚಿಕೊಂಡು ನಮ್ಮೊಂದಿಗೆ ಬರುತ್ತಿದ್ದೀರಿ. ಅಪ್ಪು ಆಸೆಯಂತೆ ಅಭಿಮಾನಿಗಳನ್ನು ಕರೆಯಿಸಿ ಊಟ ಹಾಕಿದ್ದೇವೆ. ಎಲ್ಲರೂ ನಿಧಾನವಾಗಿ ಊಟವನ್ನು ಮಾಡಿ, ಸೇಫ್ ಆಗಿ ಮನೆಗೆ ಸೇರಿ. ಅವರು ಒಳ್ಳೆಯ ಕೆಲಸವನ್ನು ಬಿಟ್ಟು ಹೋಗಿದ್ದಾರೆ. ಆ ಕಾರ್ಯವನ್ನು ನಾವು ಮುಂದುವರಿಸುತ್ತೇವೆ. ಅವರು ಪ್ರೀತಿಯಿಂದ ಬಂದಿದ್ದಾರೆ, ಅವರಿಗೆ ಪ್ರೀತಿಯಿಂದ ಬಡಿಸುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ.

ಅಪ್ಪು ಆಸೆಯಂತೆ ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆಯನ್ನು ಆಯೋಜಿಸಿದೆ. ನಾನ್‌ವೆಜ್ ಹಾಗೂ ವೆಜ್ ಊಟದ ವ್ಯಸ್ಥೆಯನ್ನು ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ಬಹುವಾಗಿ ಇಷ್ಟ ಪಡುವ ಊಟವನ್ನೇ ಅಭಿಮಾನಿಗಳಿಗೆ ಬಡಿಸಲಾಗಿದೆ. ಎಲ್ಲರೂ ಗೊಂದಲ ಇಲ್ಲದೇ ಖುಷಿಯಿಂದ ಊಟ ಮಾಡಿ ಎಂದು ದೊಡ್ಮನೆ ಕುಟುಂಬ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ
ಇದನ್ನೂ ಓದಿ : ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?
(Puneeth Raj Kumar Punya Smarane Anna Santharpane At Palace Ground)