ಸೋಮವಾರ, ಏಪ್ರಿಲ್ 28, 2025
HomeCinemaPuneeth Rajkumar - Dheeren Ramkumar : ನಟ ಪುನೀತ್‌ ರಾಜ್‌ಕುಮಾರ್‌ ಹಾಡಿದ ಹಿಂದಿ ಟ್ರ್ಯಾಕ್‌ನ್ನು...

Puneeth Rajkumar – Dheeren Ramkumar : ನಟ ಪುನೀತ್‌ ರಾಜ್‌ಕುಮಾರ್‌ ಹಾಡಿದ ಹಿಂದಿ ಟ್ರ್ಯಾಕ್‌ನ್ನು ಹಂಚಿಕೊಂಡ ನಟ ಧೀರೇನ್ ರಾಮ್‌ಕುಮಾರ್‌

- Advertisement -

ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar – Dheeren Ramkumar) ಅವರು ಕನ್ನಡ ಸಿನಿರಂಗ ಕಂಡ ಅನಘ್ಯ ರತ್ನ ಎಂದರೆ ತಪ್ಪಾಗಲ್ಲ. ನಟ ಪುನೀತ್‌ ನಮ್ಮನ್ನೆಲ್ಲಾ ಅಗಲಿ ವರ್ಷ ಉರುಳಿದರೂ ಅವರ ನೆನಪು ಯಾರಲ್ಲೂ ಮಾಸಿಲ್ಲ. ಅದರಲ್ಲೂ ದೊಡ್ಮನೆ ಕುಟುಂಬಕ್ಕೆ ನಮ್ಮ ಮನೆಯ ಕುಡಿ ಇನ್ನಿಲ್ಲ ಎನ್ನುವುದು ಸಹಿಸಲಾರದ ನೋವು ಆಗಿದೆ. ಹೀಗಿರುವಾಗ ನಟ ಪುನೀತ್‌ ಅವರನ್ನು ನೆನಪಿಸಿಕೊಂಡು ಅವರ ಕುಟುಂಬಸ್ಥರು ಆಗಾಗ ಅವರೊಂದಿಗೆ ಕಳೆದ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ನಟ ಪುನೀತ್‌ ರಾಜ್‌ಕುಮಾರ್‌ ಸೋದರಳಿಯ ನಟ ಧೀರೇನ್ ರಾಮ್‌ಕುಮಾರ್‌ (Dheeren Ramkumar) ಅಪ್ಪು ಮಾವ ಹಾಡಿರುವ ಹಿಂದಿ ಟ್ರ್ಯಾಕ್‌ನ್ನು ಹಂಚಿಕೊಂಡಿದ್ದಾರೆ.

ನಟ ಧೀರೇನ್‌ ಇನ್‌ಸ್ಟಾಗ್ರಾಮ್‌ನಲ್ಲಿ, “ಕಭಿ ಅಲ್ವಿದಾ ನಾ ಕೆಹನಾ ಅಪ್ಪು ಮಾಮಾ ಹಾಡಿದ್ದಾರೆ ನನ್ನಿಂದ ಉಳಿಸಿಕೊಳ್ಳಲಾಗಿದೆ” ಎಂದು ನಟ ಪುನೀತ್‌ ರಾಜ್‌ಕುಮಾರ್‌ ಸ್ಟುಡಿಯೋದಲ್ಲಿ ಹಾಡಿದ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು ಸೋದರ ಮಾವ ಎಂದರೆ ಎಲ್ಲಾ ಮಕ್ಕಳಿಗೂ ಸಣ್ಣ ವಯಸ್ಸಿನಿಂದ ವಿಶೇಷವಾದ ನೆನಪುಗಳು ಇರುತ್ತದೆ. ಹಾಗೆಯೇ ನಟ ಧೀರೇನ್ ಅವರಿಗೂ ತಮ್ಮ ಮಾವ ಜೊತೆಗಿನ ಒಡನಾಟ ಅಂತಹದೇ ಆಗಿರುತ್ತದೆ.

ನಟ ಪುನೀತ್‌ ರಾಜ್‌ ಕುಮಾರ್‌ ಅವರನ್ನು ಕರುನಾಡೇ ಮೆಚ್ಚಿಕೊಂಡಿರುವಾಗ, ಇನ್ನು ಅವರ ಕುಟುಂಬಸ್ಥರು ಎಷ್ಟು ಅಕ್ಕರೆಯಿಂದ ಇರಬೇಕು. ಹೀಗಾಗಿ ನಟ ಪುನೀತ್‌ ಅಗಲಿಕೆ ನೋವು ನಿಜಕ್ಕೂ ಅವರ ಕುಟುಂಬಕ್ಕೆ ಭರಿಸಲಾದು ಎನ್ನಬಹುದು. ಯಾರೇ ಆಗಲಿ ಕಳೆದುಕೊಂಡವರನ್ನು ಆಗಾಗ ನೆನಪಿಸಿಕೊಳ್ಳುವುದು ಸಹಜ, ಅವರು ನಮ್ಮೊಂದಿಗೆ ಇಲ್ಲ ಎನ್ನುವುದಕ್ಕಿಂತ ಅವರೊಂದಿಗೆ ಕಳೆದ ಸವಿನೆನಪುಗಳ್ನು ಮೆಲಕು ಹಾಕುತ್ತಾ ಅವರು ನಮ್ಮೊಂದಿಗೆ ಇದ್ದಾರೆ ಎಂದು ಕಳೆಯುವುದೇ ಉತ್ತಮ. ಅದರಂತೆ ದೊಡ್ಮನೆ ಕುಟುಂಬ ವಾಸ್ತವದಲ್ಲಿ ಅಪ್ಪು ಅವರು ಇಲ್ಲವಾದರೂ, ಮಾನಸಿಕವಾಗಿ ಇದ್ದರೆಂದು ಜೀವಿಸುತ್ತಿದ್ದಾರೆ.

ಇದನ್ನೂ ಓದಿ : Rishab shetty : ಮಗಳು ರಾಧ್ಯಾಳ ಕಿವಿ ಚುಚ್ಚುವ ವೀಡಿಯೋ ಹಂಚಿಕೊಂಡ ಕಾಂತಾರ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : Nikhil Siddharth – Aishwarya Menon : ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ನಿಖಿಲ್ ಸಿದ್ಧಾರ್ಥ್ – ಐಶ್ವರ್ಯ ಮೆನನ್

ನಟ ಧೀರೇನ್‌ ನಟ ರಾಮ್‌ಕುಮಾರ್‌ ಹಾಗೂ ಡಾ. ರಾಜ್‌ಕುಮಾರ್‌ ಅವರ ಮುದ್ದಿನ ಮಗಳು ಪೂರ್ಣಿಮಾರವರ ಮಗ ಧೀರೇನ್‌ ಕನ್ನಡ ಸಿನಿರಂಗದ ಯುವ ಪ್ರತಿಭೆ. ತಾತನ ಪ್ರಸಿದ್ಧ ಸಿನಿಮಾ ದಾರಿ ತಪ್ಪಿದ ಮಗ ಸಿನಿಮಾದ ಟೈಟಲ್‌ನಿಂದ ಬಣ್ಣದಲೋಕಕ್ಕೆ ಪ್ರವೇಶಿಸಿದ್ದಾರೆ. ನಟ ಧೀರೇನ್ ರಾಮ್‌ಕುಮಾರ್ ಚೊಚ್ಚಲ ಸಿನಿಮಾ ಶಿವ 143 ಆಗಿದೆ. ಇನ್ನು ನಟ ಧೀರೇನ್ ರಾಮ್ ಕುಮಾರ್ ಅವರು ಡಾ. ರಾಜ್ ಕುಮಾರ್ ಕುಟುಂಬದಿಂದ ಬಂಡ ಮತ್ತೊಬ್ಬ ನಟರಾಗಿದ್ದು, ಅವರ ಚೊಚ್ಚಲ ಸಿನಿಮಾ ಸಾಹಸದಿಂದ ಕೂಡಿದೆ. ಸದ್ಯ ಆಕ್ಷನ್ ರೋಮ್ಯಾಂಟಿಕ್ ಸಿನಿಮಾವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

Puneeth Rajkumar – Dheeren Ramkumar : Actor Dheeren Ramkumar shared a Hindi track sung by actor Puneeth Rajkumar.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular