ಸೋಮವಾರ, ಏಪ್ರಿಲ್ 28, 2025
HomeCinemaPuneeth Rajkumar ಗೆ ರಾಜ್ಯದ ಹಲವು ಗಣ್ಯರಿಂದ ಹುಟ್ಟುಹಬ್ಬದ ಶುಭಾಯಗಳ ಮಹಾಪೂರ!

Puneeth Rajkumar ಗೆ ರಾಜ್ಯದ ಹಲವು ಗಣ್ಯರಿಂದ ಹುಟ್ಟುಹಬ್ಬದ ಶುಭಾಯಗಳ ಮಹಾಪೂರ!

- Advertisement -

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar’s Happy Birthday) ಅವರ ಹುಟ್ಟುಹಬ್ಬಕ್ಕೆ ಹಲವು ಗಣ್ಯರು ಶುಭಕೋರಿದ್ದಾರೆ. ಅವರಲ್ಲಿದ್ದ ಶಿಕ್ಷಣ ಪ್ರೇಮ, ಸಾಮಾಜಿಕ ಕಳಕಳಿ, ಚಿಂತನೆಗಳನ್ನು ಬರೆದುಕೊಂಡು ಶುಭಹಾರೈಸಿ, ಅವರ ನೆನಪನ್ನು ಸದಾ ಹಸಿರಾಗಿಸಿದ್ದಾರೆ.

ನಾಡಿನ ಖ್ಯಾತ ನಟ, ಪವರ್ ಸ್ಟಾರ್ ದಿ. ಶ್ರೀ ಪುನೀತ್ ರಾಜ್‌ಕುಮಾರ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಅವರ ಸರಳ ವ್ಯಕ್ತಿತ್ವ, ಬದುಕು, ಸಾಧನೆಗಳು ಒಂದು ಸ್ಪೂರ್ತಿಯ ಸೆಲೆ. ನಮ್ಮ ನಾಡು ನುಡಿಗೆ ಅವರ ಕೊಡುಗೆಗಳನ್ನು ಎಂದೂ ಮರೆಯಲಾಗದು.


ಬೆಟ್ಟದ ಹೂವಾಗಿ ಅರಳಿದೆ
ಎರಡು ನಕ್ಷತ್ರಗಳಾಗಿ ಮಿಂಚಿದೆ
ಅರಸುವಾಗಿ ಚಂದನವನದ ಯುವರತ್ನನಾದೆ
ವೀರ ಕನ್ನಡಿಗನಾಗಿ ಪೃಥ್ವಿಯ ಮೈತ್ರಿ ತೊರೆದು ಪರಮಾತ್ಮನ ಮಿಲನವಾದೆ

ಅಪ್ಪು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಪ್ಪು ನೆನಪು ಎಂದಿಗೂ ಅಮರ, ಅಪ್ಪು ಎಂದೆಂದಿಗೂ ಅಜರಾಮರ. ಹ್ಯಾಪಿ ಬರ್ತಡೇ ಅಪ್ಪು.


ನಮ್ಮ ನೆಚ್ಚಿನ ಪುನೀತ್‌ ರಾಜ್‌ಕುಮಾರ್‌ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ. ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ.

Koo App
ನಮ್ಮ ನೆಚ್ಚಿನ ಪುನೀತ್‌ ರಾಜ್‌ಕುಮಾರ್‌ ಅವರ ಬದುಕಿನ ಸಾಧನೆಗಳನ್ನು ಪ್ರೇರಣೆಯಾಗಿ ಪಡೆದು ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿಸೋಣ. ಅವರಲ್ಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ, ಆವಿಷ್ಕಾರಿ ಮನೋಭಾವ ಎಲ್ಲರ ಮನೆ-ಮನಗಳಲ್ಲೂ ಬೆಳಗಿಸಿ ಅವರನ್ನು ಅಮರರಾಗಿಸೋಣ. #PuneethRajkumarDr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 17 Mar 2022


ಕನ್ನಡದ ಧ್ರುವ ತಾರೆಯೊಂದು ಮಿಂಚಿ ನಮ್ಮಿಂದ ಮರೆಯಾಗಿದೆ. ಆ ತಾರೆ ಬೆಳ್ಳಿ ಪರದೆ ಮೇಲೆ ’ಜೇಮ್ಸ್’ ಮೂಲಕ ಮತ್ತೆ ಅಬ್ಬರಿಸಲಿದೆ. ಗೋಲ್ಡನ್ ಹಾರ್ಟ್, ಪವರ್ ಸ್ಟಾರ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: Puneeth Birthday : ನವಜಾತ ಶಿಶುಗಳಿಗೆ ಪುನೀತ್ ಹೆಸರು : ವಿಭಿನ್ನವಾಗಿ ನಗರದಲ್ಲಿ ಅಪ್ಪು ಬರ್ತಡೇ ಆಚರಣೆ

ಕನ್ನಡ ಚಿತ್ರರಂಗದ ಶ್ರೇಷ್ಠ ನಾಯಕ ನಟ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಅಭಿಮಾನಿ, ನಟ ಸಾರ್ವಭೌಮ, ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮಜಯಂತಿಯಂದು ನನ್ನ ಗೌರವ ನಮನಗಳು‌. ಅವರ ಸೇವೆಯ ಗುಣದಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.


ಕನ್ನಡಿಗರ ನೆಚ್ಚಿನ ಧ್ರುವತಾರೆ, ಅಪ್ಪು ಬಾಳಿದ ರೀತಿ ಅದ್ಭುತ ಮತ್ತು ಆದರ್ಶಪ್ರಾಯ.
ಅವರು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ಅವರ ಜನ್ಮ ಜಯಂತಿಯಂದು ಅವರಿಗೆ ಶ್ರದ್ಧೆಯಿಂದ ನಮಿಸುತ್ತೇನೆ.


ಕರುನಾಡ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಮನೆ ಮಗನಂತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಅಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ಕೊಡುಗೈ ದಾನಿಯಾಗಿ ಸಹಾಯ ಮಾಡಿದ ಮಾನವತಾವಾದಿ ಪುನೀತ್. ಇಂದು ಅವರ ಜನ್ಮದಿನದಂದು ಅವರನ್ನು ನೆನೆಯುತ್ತ ಗೌರವಪೂರ್ವಕವಾಗಿ ನಮಿಸುವೆ.

Koo App
ಕರುನಾಡ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಮನೆ ಮಗನಂತಿದ್ದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು, ಅನಾಥ ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಆಸರೆಯಾಗಿ, ಗೋವುಗಳ ಸಂರಕ್ಷಣೆ, ಅಶಕ್ತ ಕಲಾವಿದರು ಹಾಗೂ ತನ್ನಲ್ಲಿ ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ಕೊಡುಗೈ ದಾನಿಯಾಗಿ ಸಹಾಯ ಮಾಡಿದ ಮಾನವತಾವಾದಿ ಪುನೀತ್. ಇಂದು ಅವರ ಜನ್ಮದಿನದಂದು ಅವರನ್ನು ನೆನೆಯುತ್ತ ಗೌರವಪೂರ್ವಕವಾಗಿ ನಮಿಸುವೆ. #puneethrajkumar #kannada #sandalwoodGT Devegowda (@gtdevegowda) 17 Mar 2022

ಇದನ್ನೂ ಓದಿ: Puneeth Rajkumar : ಪುನೀತ್‌ ರಾಜ್‌ ಕುಮಾರ್‌ಗೆ ಗೌರವ ಡಾಕ್ಟರೇಟ್ ಘೋಷಿಸಿದ ಮೈಸೂರು ವಿವಿ

(Puneeth Rajkumar Happy Birthday wishes from leaders)

RELATED ARTICLES

Most Popular