ಭಾನುವಾರ, ಏಪ್ರಿಲ್ 27, 2025
HomeCinemaPuneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ :...

Puneeth Rajkumar name : ಅಭಿಮಾನಿ ಮಗುಗೆ ಅಪ್ಪು ಹೆಸರು, ಸ್ಪೆಶಲ್ ಗಿಫ್ಟ್ : ಶಿವಣ್ಣ,ಆಶ್ವಿನಿ ಕಾರ್ಯಕ್ಕೆ ಶ್ಲಾಘನೆ

- Advertisement -

Puneeth Rajkumar name : ಅಪ್ಪು ಕರುನಾಡಿಗರನ್ನು ಅಗಲಿ ತಿಂಗಳುಗಳೇ ಕಳೆದಿದ್ದರೂ ಪವರ್ ಸ್ಟಾರ್ ಮೇಲೆ ಕನ್ನಡಿಗರು ಇಟ್ಟಿದ್ದ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಹೀಗಾಗಿ ಇಂದಿಗೂ ಅಭಿಮಾನಿಗಳು ನಾಮಕರಣ ಸೇರಿದಂತೆ ನಾನಾಕಾರಣಕ್ಕೆ ನೀರಿಕ್ಷೆಯ ಜೊತೆ ಅಪ್ಪು ನಿವಾಸಕ್ಕೆ ಆಗಮಿಸುತ್ತಿದ್ದು, ಅಭಿಮಾನಿಗಳ ಈ ಅಭಿಮಾನಕ್ಕೆ ಶಿವಣ್ಣ ಹಾಗೂ ಅಶ್ವಿನ್ ಪುನೀತ್ ರಾಜ್ ಕುಮಾರ್ ಕೂಡ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಿದ್ದಾರೆ. ಇದೇ ಸಂಗತಿ ಈಗ ಸಖತ್ ಸದ್ದು ಮಾಡಿದೆ.

ಬೀದರ್ ನ ಅಪ್ಪು ಅಭಿಮಾನಿ ಕುಟುಂಬವೊಂದು ಪುನೀತ್ ರಾಜ್ ಕುಮಾರ್ ರಿಂದಲೇ ಮಗುವಿನ ನಾಮಕರಣ ಶಾಸ್ತ್ರ ಮಾಡಿಸಿ, ಪುನೀತ್ ರಿಂದಲೇ ಮಗುವಿಗೆ ಹೆಸರಿಡಿಸಬೇಕೆಂದು ಬಯಸಿದ್ದರು. ಆದರೆ ಅಷ್ಟರಲ್ಲಾಗಲೇ ಪುನೀತ್ ಚಿರನಿದ್ರೆಗೆ ಜಾರಿದ್ದರು. ಆದರೂ ಪುನೀತ್ ಮೇಲಿನ ಅಭಿಮಾನ ಕಡಿಮೆಯಾಗದ ಕಾರಣಕ್ಕೆ ಈ ಕುಟುಂಬ ದೂರದ ಬೀದರ್ ನಿಂದ ಬೆಂಗಳೂರಿಗೆ ಮಗುವಿನ ನಾಮಕರಣಕ್ಕಾಗಿಯೇ ಆಗಮಿಸಿದ್ದರು.

ಅಪ್ಪು ಅನುಪಸ್ಥಿತಿಯಲ್ಲಿ ಶಿವಣ್ಣ ಈ ಅಭಿಮಾನಿ ಕುಟುಂಬಕ್ಕೆ ಸ್ಪಂದಿಸಿದ್ದಾರೆ. ತಮ್ಮ‌ನಿವಾಸಕ್ಕೆ ಕರೆಯಿಸಿ ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೇ ಮಗುವಿನ ಜೊತೆ ಹಾಗೂ ಪೋಷಕರ ಜೊತೆ ಪೋಟೋಗೆ ಪೋಸ್ ನೀಡಿದ್ದಾರೆ. ಮಾನ್ಯತಾ ರೆಸಿಡೆನ್ಸಿಯಲ್ಲಿ ಶಿವಣ್ಣ ಅಭಿಮಾನಿಗಳನ್ನು ಪ್ರೀತಿಯಿಂದ ಆಧರಿಸಿದ ಪೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ರಾಮನಗರ ಮೂಲಕ ಲೋಕೇಶ್ ದಂಪತಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾಗಿದ್ದು, ಈ ಹಿಂದೆ ಲೋಕೇಶ್ ಕುಟುಂಬಕ್ಕೆ ಪುನೀತ್ ರಾಮನಗರದ ಬಿಡದಿಯಲ್ಲಿ ಹೊಟೇಲ್ ತೆರೆಯಲು ಸಹಾಯ ಮಾಡಿದ್ದರಂತೆ.

ಹೀಗಾಗಿ ಅಪ್ಪು ಸಹಾಯದಲ್ಲೇ‌ ಬದುಕ್ತಿರೋ ಈ ಕುಟುಂಬ ಅಪ್ಪು ಆಶೀರ್ವಾದ ಪಡೆಯಲು ಸದಾಶಿವ ನಗರದ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಪುನೀತ್ ಅನುಪಸ್ಥಿತಿ ಅಭಿಮಾನಿ ಕುಟುಂಬಕ್ಕೆ ಕಾಡದಂತೆ ನೋಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಗುವನ್ನು ಮುದ್ದಾಡಿ ಮಗುವಿಗೆ ಸ್ಪೆಶಲ್ ಗಿಫ್ಟ್ ನೀಡಿ ಕಳುಹಿಸಿಕೊಟ್ಟಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಪುನೀತ್ ರಂತೆ ಅಭಿಮಾನಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಿ ಕಳಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅಭಿಮಾನಿಗಳೇ ದೇವರು ಎಂದ ದೊಡ್ಮನೆ ಕಲ್ಚರ್ ನೋಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ : Ravichandran son Manoranjan wedding : ಕ್ರೇಜಿಸ್ಟಾರ್ ಮನೆಯಲ್ಲಿ ಮಂಗಳವಾದ್ಯ : ಮನೋರಂಜನ್ ಬದುಕಿನಲ್ಲಿ “ಸಂಗೀತ” ಸುಧೆ

ಇದನ್ನೂ ಓದಿ : Boycott Liger Vijay Deverakonda : ಲೈಗರ್ ಗೂ ಬಾಯ್ಕಾಟ್ ಬಿಸಿ : ಅಮೀರ್ ಖಾನ್ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ ವಿಜಯ್ ದೇವರಕೊಂಡ

Puneeth Rajkumar name for a fan’s child, special gift praise for Shiva Rajkumar and Ashwini Puneeth Rajkumar work

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular