ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿದ್ದರೂ ಅವರನ್ನು ಸದಾ ಸ್ಮರಿಸುವ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತ ವಾಗಿದ್ದಾರೆ. ಇಷ್ಟು ದಿನಗಳ ಕಾಲ ರಸ್ತೆ, ಉದ್ಯಾನವನಗಳಲ್ಲಿ ಅನುರಣಿಸುತ್ತಿದ್ದ ಅಪ್ಪು ನೆನಪು ಇಂದು ಬೆಂಗಳೂರಿನಲ್ಲಿ ನಡೆಯುತ್ತಿರೋ (Chinnaswamy Stadium) ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲೂ ಧ್ವನಿಸಿದೆ. ಮಾತ್ರವಲ್ಲ ಅಪ್ಪು (Puneeth Rajkumar) ನೆನಪಿನ ಜೊತೆ ಅಭಿನಯ ಚಕ್ರವರ್ತಿ ಸುದೀಪ್ ಕೂಡ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಜಾತ ಶತ್ರುವಿನಂತೆ ಬದುಕಿದವರು. ಹೀಗಾಗಿ ಕನ್ನಡದ ಎಲ್ಲಾ ಸ್ಟಾರ್ ಗಳಿಗೂ ಪುನೀತ್ ಅಚ್ಚುಮೆಚ್ಚು. ಇದು ಮತ್ತೊಮ್ಮೆ ಸಾಬೀತಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ನೋಡೋಕೆ ಸ್ಟೇಡಿಯಂಗೆ ಹೋಗಿರೋ ಅಭಿನಯ ಚಕ್ರವರ್ತಿ ಸುದೀಪ್, ಪುನೀತ್ ಪೋಟೋ ಜೊತೆ ಪೋಸ್ ನೀಡಿದ್ದಾರೆ.ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ಆರಂಭಗೊಂಡಿದೆ. ಸ್ವತಃ ಕ್ರಿಕೆಟ್ ಪ್ಲೇಯರ್ ಆಗಿರೋ ನಟ ಸುದೀಪ್ ಆಸಕ್ತಿಯಿಂದ ಮ್ಯಾಚ್ ನೋಡಲು ತೆರಳಿದ್ದಾರೆ.
ಈ ವೇಳೆ ಪುನೀತ್ ಅಭಿಮಾನಿಯೊಬ್ಬರು ಪುನೀತ್ ಭಾವಚಿತ್ರದೊಂದಿಗೆ ಮ್ಯಾಚ್ ನೋಡಲು ಆಗಮಿಸಿದ್ದಾರೆ. ಆ ಅಭಿಮಾನಿ ಜೊತೆ ಸುದೀಪ್ ಪೋಟೋಕ್ಕೆ ಪೋಸ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಪೋಟೋ ಹಾಗೂ ಅಭಿಮಾನಿ ಜೊತೆ ಸುದೀಪ್ ತೆಗೆಸಿಕೊಂಡಿರೋ ಪೋಟೋ ಇದೀಗ ಸಖತ್ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪುನೀತ್ ಪೋಟೋ ಜೊತೆ ಬಂದಿರೋ ಅಭಿಮಾನಿ, ಪೋಸ್ಟರ್ ನಲ್ಲಿ ನಾವು ಪುನೀತ್ ರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಕೊರೋನಾ ಸೇರಿದಂತೆ ನಾನಾ ಕಾರಣಗಳಿಂದ ರದ್ದಾಗಿದ್ದ ಕ್ರಿಕೆಟ್ ಮ್ಯಾಚ್ ನಿಂದ ಕ್ರಿಕೆಟ್ ಪ್ರಿಯರು ಬೇಸರದಲ್ಲಿದ್ದರು. ಆದರೆ ಈಗ ಬರೋಬ್ಬರಿ ಎರಡು ವರ್ಷದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿದ್ದು, ಸುದೀಪ್ ಆಸಕ್ತಿಯಿಂದ ಮ್ಯಾಚ್ ವೀಕ್ಷಣೆ ಗೆ ತೆರಳಿದ್ದಾರೆ.
ಸೂರ್ಯನೊಬ್ಬ ಚಂದ್ರನೊಬ್ಬ…
— Hombale Films (@hombalefilms) March 12, 2022
ರಾಜನೂ ಒಬ್ಬ…
ಈ ರಾಜನೂ ಒಬ್ಬ…
ನೀನೆ ರಾಜಕುಮಾರ! pic.twitter.com/6m7S3rmYzt
ಬಾಲ್ಯದಿಂದಲೂ ಉತ್ತಮ ಗೆಳೆಯರಾಗಿರೋ ಪುನೀತ್ ಮತ್ತು ಸುದೀಪ್ ಹಲವು ಇವೆಂಟ್ ಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಪುನೀತ್ ನಿಧನದ ವೇಳೆ ಕಣ್ಣೀರಿಟ್ಟಿದ್ದ ಸುದೀಪ್ ಇತ್ತೀಚಿಗಷ್ಟೇ ಪುನೀತ್ ರಾಜ್ ಕುಮಾರ್ ಕೊನೆ ಚಿತ್ರ ಜೇಮ್ಸ್ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದರು.
ಇದನ್ನೂ ಓದಿ : ಜ್ಯೂನಿಯರ್ಸ್ ಡ್ರಾಮಾ ನೋಡೋಕೆ ಬಂದ ರಚ್ಚು: ಸೆಟ್ ನಲ್ಲೇ ರಚಿತಾರಾಮ್ ಕಿಡ್ನಾಪ್
ಇದನ್ನೂ ಓದಿ : X ಬಗ್ಗೆ ಬೇಡ Y ಬಗ್ಗೆ ಮಾತಾಡೋಣ : ನಟಿ ರಶ್ಮಿಕಾ ಮಂದಣ್ಣ ಹೊಸ ವರಸೆ
( Puneeth Rajkumar Photos Show Sudeep in Chinnaswamy Stadium)