ಕೊರೋನಾ ಲಾಕ್ ಡೌನ್ ಎಲ್ಲರ ಲುಕ್ ನ್ನೇ ಬದಲಾಯಿಸಿದ್ದು ಸುಳ್ಳಲ್ಲ. ಇದಕ್ಕೆ ಸೆಲೆಬ್ರೆಟಿಗಳು ಹೊರತಲ್ಲ. ಬಹುತೇಕ ನಾಯಕ ನಟರು ಗಡ್ಡ,ಮೀಸೆಯಲ್ಲಿ ರಗಡ್ ಲುಕ್ ನಲ್ಲಿ ಪೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಕೆಲವರಂತೂ ಗುರುತಿಸೋಕೆ ಆಗದಷ್ಟು ಬದಲಾಗಿದ್ದು ಇತ್ತು, ಹೀಗೆ ಲಾಕ್ ಡೌನ್ ನಲ್ಲಿ ಗಡ್ಡ ಮೀಸೆ ಹೊತ್ತು ಪೋಸ್ ನೀಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಈಗ ಲುಕ್ ಬದಲಾಯಿಸಿದ್ದು, ಪವರ್ ಸ್ಟಾರ್ ನ ನ್ಯೂ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಲಾಕ್ ಡೌನ್ ನಲ್ಲಿ ಯಾರು ಹೆಂಗೆಲ್ಲ ಟೈಂ ಪಾಸ್ ಮಾಡಿದ್ರೋ ಗೊತ್ತಿಲ್ಲ . ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತ್ರ ಸಖತ್ ವರ್ಕೌಟ್, ಸೈಕ್ಲಿಂಗ್ ಅಂತೆಲ್ಲ ಓಡಾಡಿ ಫಿಟ್ ನೆಸ್ ಮೆಂಟೆನ್ ಮಾಡಿದ್ರು. ಅಷ್ಟೇ ಅಲ್ಲ ಗಡ್ಡ ಮೀಸೆ ಜೊತೆ ಪೋಸ್ ನೀಡಿ ಅಭಿಮಾನಿಗಳಿಗೆ ತಮ್ಮ ಹೊಸ ಅವತಾರ ತೋರಿಸಿದ್ರು. ಆದರೆ ಈಗ ಮಾತ್ರ ಹಿಂದೆಂದೂ ಕಾಣದಂತ ಹೊಸ ಲುಕ್ ನಲ್ಲಿ ಪೋಟೋ ಶೇರ್ ಮಾಡಿದ್ದು, ಪವರ್ ಪೋಟೋಸ್ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಹುರಿಮೀಸೆಯ ಹುಡುಗನಾಗಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದು, ಉದ್ದ ಮೀಸೆಯ ಪುನೀತ್ ಈ ಅವತಾರ ಅವರ ಹೊಸ ಚಿತ್ರ ಜೇಮ್ಸ್ ಗಾಗಿ ಇರಬಹುದು ಎನ್ನಲಾಗುತ್ತಿದೆ. ಬಹುತೇಕ ಮೀಸೆ ಇಲ್ಲದ ಪಾತ್ರಗಳಲ್ಲೇ ಮೋಡಿ ಮಾಡಿದ್ದ ಪುನೀತ್ ಈ ಬಾರಿ ಉದ್ದಮೀಸೆಯಲ್ಲಿ ಕಾಣಿಸಿಕೊಂಡಿರೋದರಿಂದ ಯಾವುದಾದರೂ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸ್ಪೆಶಲ್ ಎಂಟ್ರಿ ಕೊಡ್ತಿರಬಹುದಾ ಅನ್ನೋ ಟಾಕ್ ಸ್ಯಾಂಡಲ್ವುಡ್ ನಲ್ಲಿದೆ.
ಇತ್ತೀಚಿಗಷ್ಟೇ ಗೋವಾದ ಬೀಚ್ ನಲ್ಲಿ ಗಡ್ಡ-ಮೀಸೆ ಜೊತೆ ಲಾಕ್ ಡೌನ್ ಎಫೆಕ್ಟ್ ತರ ಓಡಾಡಿಕೊಂಡಿದ್ದ ಪುನೀತ್ ಈ ಹೊಸ ಫೇಸ್ ಕಟ್ ಗೆ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದು, ಯಾವ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡ್ತಾರೆ ಅಂತ ಕಾಯ್ತಿದ್ದಾರೆ.