ಪಿಆರ್ಕೆ ಪ್ರೊಡಕ್ಷನ್ಸ್ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಚಿತ್ರ “ಫ್ರೆಂಚ್ ಬಿರಿಯಾನಿ” ಸಿನಿಮಾದ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಈಗಾಗಲೇ ಫ್ರೆಂಚ್ ಬಿರಿಯಾನಿ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಫ್ರೆಂಚ್ ಬಿರಿಯಾನಿಯ “ಏನ್ ಮಾಡೋದು ಸ್ವಾಮಿ” ಹಾಡು ಸಖತ್ ಸೌಂಡ್ ಮಾಡ್ತಿದೆ. ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಗೂಡಿಸಿದ್ದಾರೆ.

ಬಾರ್ ವೊಂದರ ಸನ್ನಿವೇಶವನ್ನು ನಿರೂಪಿಸುವ ಈ ಹಾಡು ಜೀವನದ ಉತ್ಸಾಹಭರಿತ, ಮಹತ್ವದ ತಿರುವಿನ ಬಗೆಗೆ ಹೇಳುತ್ತದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ. ತಲ್ವಾರ್ ನಿರ್ಮಿಸಿ ಪನ್ನಗಾಭರಣ ನಿರ್ದೇಶಿಸಿರುವ “ಫ್ರೆಂಚ್ ಬಿರಿಯಾನಿ” ಜುಲೈ 24 ರಂದು ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ವಿಶ್ವಾದ್ಯಂತ ಸ್ಟ್ರೀಮಿಂಗ್ ಆಗಲಿದೆ.

ಡ್ಯಾನಿಶ್ ಸೈಟ್ ಮತ್ತು ಸಾಲ್ ಯೂಸುಫ್ ಪ್ರಮುಖ ತಾರಾಂಗಣದಲ್ಲಿರುವ ಚಿತ್ರ “ಲಾ” ನಂತರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗುತ್ತಿರುವ ಎರಡನೇ ಕನ್ನಡ ಚಿತ್ರವಾಗಿದೆ.