ರಶ್ಮಿಕಾಗೂ ಗಾಸಿಪ್ ಮತ್ತು ಟ್ರೋಲ್ ಗೂ ಹಳೆ ನಂಟಿದೆ. ನೊರೆಂಟು ವಿಚಾರಕ್ಕೆ ಇದುವರೆಗೂ ರಶ್ಮಿಕಾ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ಈ ವಿಚಾರವನ್ನು ನೋವಿನಿಂದ ಸಾಕಷ್ಟು ಇಂಟರವ್ಯೂ ಗಳಲ್ಲಿ ರಶ್ಮಿಕಾ ಶೇರ್ ಕೂಡ ಮಾಡಿದ್ದಾರೆ. ಆದರೆ ಈ ಟ್ರೋಲ್ ಗಳಿಂದ ನೊಂದ ರಶ್ಮಿಕಾ ಪಾಠ ಮಾತ್ರ ಕಲಿತಿಲ್ಲ. ಹೌದು ಈ ಮಾತಿಗೆ ಸಾಕ್ಷಿ (Rashmika Viral Video) ರಶ್ಮಿಕಾ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಗೆಟಪ್.
ಸ್ಯಾಂಡಲ್ ವುಡ್ ನಿಂದ ಕೆರಿಯರ್ ಆರಂಭಿಸಿದ ನಟಿ ರಶ್ಮಿಕಾಮಂದಣ್ಣ ಈಗ ಸೌತ್ ನ ಬಹುಬೇಡಿಕೆಯ ನಟಿ. ತಮಿಳು ತೆಲುಗು ಗಡಿ ದಾಟಿ ಬಾಲಿವುಡ್ ಗೂ ಕಾಲಿಟ್ಟಿರುವ ರಶ್ಮಿಕಾ ಸದ್ಯ ಗುಡ್ ಬೈ ಹಾಗೂ ಮಿಶನ್ ಮಜ್ನು ಸಿನಿಮಾದ ರಿಲೀಸ್ ನೀರಿಕ್ಷೆಯಲ್ಲಿದ್ದಾರೆ. ತೆಲುಗಿನ ಪುಷ್ಪ ಸಿನಿಮಾ ರಶ್ಮಿಕಾ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸದ್ಯ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾದ ಸಾಮೇ ಸಾಮೇ ಹಾಡು, ಡಿಗ್ಲ್ಯಾಮರ್ ಲುಕ್ ಹೀಗೆ ನೊರೆಂಟು ಪಾಸಿಟಿವ್ ವಿಚಾರಕ್ಕೆ ಆಗಾಗ ಸುದ್ದಿಯಾಗ್ತಿದ್ದ ರಶ್ಮಿಕಾ ನಿನ್ನೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಅವತಾರ ಮಾತ್ರ ಅಭಿಮಾನಿಗಳನ್ನು ಹುಬ್ಬೇರಿಸುವಂತೆಮಾಡಿದೆ.
ಸಿನಿಮಾಗಳಿಗಾಗಿ ಮುಂಬೈ ಮತ್ತು ಹೈದ್ರಾಬಾದ್ ಗೆ ಓಡಾಡುವ ರಶ್ಮಿಕಾ ನಿನ್ನೆ ಹೈದ್ರಾಬಾದ್ ಗೆ ಆಗಮಿಸಲು ಮುಂಬೈ ಏರ್ಪೋರ್ಟ್ ಗೆ ಬಂದಿದ್ದಾರೆ. ಈ ವೇಳೆ ರಶ್ಮಿಕಾ ಲಾಂಗ್ ವೈಟ್ ಜಾಕೇಟ್ ಧರಿಸಿದ್ದು ಚಿಕ್ಕದಾದ ಜೀನ್ಸ್ ಶಾರ್ಟ್ಸ್ ಧರಿಸಿದ್ದಾರೆ. ಶಾರ್ಟ್ಸ್ ಧರಿಸಿದ್ದನ್ನು ಮರೆಮಾಚುವಂತಿದ್ದ ಲಾಂಗ್ ಟೀ ಶರ್ಟ್ ನೋಡಿದ ನೆಟ್ಟಿಗರು ಪೋಟೋ ಹಾಗೂ ವಿಡಿಯೋ ವನ್ನು ಶಕತ್ ಟ್ರೋಲ್ ಮಾಡಿದ್ದು, ಪಬ್ಲಿಸಿಟಿ ಹೆಚ್ಚುತ್ತಿದ್ದಂತೆ ಬಟ್ಟೆ ಧರಿಸೋ ಸಭ್ಯತೆಯನ್ನು ಮರೆತ್ರಾ ಎಂದು ರಶ್ಮಿಕಾರನ್ನು ಟ್ರೋಲ್ ಮಾಡಿದ್ದಾರೆ.
ಕೆಲವರಂತೂ ಸಿನಿಮಾದಲ್ಲಂತೂ ಎಕ್ಸ್ ಪೋಸ್ ಮಾಡ್ತಿರಾ ಸರಿ, ಅದರೆ ಸಾರ್ವಜನಿಕ ಸ್ಥಳಗಳಲ್ಲಾದ್ರೂ ಸಭ್ಯತೆ ಕಾಪಾಡೋದು ಬೇಡವೇ? ನಿಮ್ಮ ವಾರ್ಡ್ ರೋಬ್ ನಲ್ಲಿ ಇಷ್ಟು ಕಡಿಮೆ ಬಟ್ಟೆ ಮಾತ್ರ ಇರೋದಾ ಎಂದು ಟೀಕಿಸಿದ್ದಾರೆ. ರಶ್ಮಿಕಾ ಶಾರ್ಟ್ಸ್ ಹಾಗೂ ಟೀ ಶರ್ಟ್ ಜೊತೆ ಏರ್ಪೋರ್ಟ್ ಹೊರಕ್ಕೆ ಬಂದು ಗಾಡಿ ಏರ್ತಿರೋ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಪರ ಹಾಗೂ ವಿರೋಧದ ಚರ್ಚೆ ಜೋರಾಗಿದೆ.
ಇದನ್ನೂ ಓದಿ : ಬಣ್ಣ ಹಚ್ಚಿ ತೆರೆಗೆ ಬರ್ತಾರಾ ಗೋಲ್ಡನ್ ಸ್ಟಾರ್ ಪುತ್ರಿ : ಚಾರಿತ್ರ್ಯಾಗಣೇಶ್ ಪೋಟೋಶೂಟ್ ವೈರಲ್
ಇದನ್ನೂ ಓದಿ : ಮತ್ತೊಂದು ಐಟೆಂ ಸಾಂಗ್ನಲ್ಲಿ ಕಾಣಿಸಿಕೊಳ್ಳಲು ಮುಂದಾದ ನಟಿ ಸಮಂತಾ
( Pushpa Movie actress rashmika mandanna missing pant, video viral)