ಸ್ಯಾಂಡಲ್ ವುಡ್ ನಲ್ಲಿ ಸ್ವೀಟಿ ಅಂತಾನೇ ಕರೆಯಿಸಿಕೊಳ್ಳೋ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಸದ್ಯ ಸಿನಿಮಾಗಳಿಂದ ಬಿಡುವು ಪಡೆದಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ಸಖತ್ ಸಖತ್ ವಿಡಿಯೋ ಹಂಚಿಕೊಳ್ಳೋ ರಾಧಿಕಾ, ರೀಸೆಂಟಾಗಿ ಹಂಚಿಕೊಂಡ ವಿಡಿಯೋ ದಿಂದ (Radhika Kumaraswamy video Viral)ಅಭಿಮಾನಿ ಅಭಿಮಾನ ಎಷ್ಟಿದೆ ಅಂತ ಅರ್ಥ ಮಾಡಿಕೊಳ್ಳೋ ಅವಕಾಶ ಸಿಕ್ಕಿದೆ. ಹೌದು ಡ್ಯಾನ್ಸ್ ಮಾಡೋವಾಗ ಜಾರಿ ಬಿದ್ದ ರಾಧಿಕಾಗೆ ಅಭಿಮಾನಿಗಳು ಜೋಕೆ ಜಾಣೆ ಎಂದಿದ್ದಾರೆ.
ನಟಿ,ನಿರ್ಮಾಪಕಿ ಹಾಗೂ ಡ್ಯಾನ್ಸ್ ಮೂಲಕವೇ ಕನ್ನಡಿಗರ ಮನ ಗೆದ್ದ ರಾಧಿಕಾ ಕುಮಾರಸ್ವಾಮಿ ಚೆನ್ನಭೈರಾದೇವಿ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಕಳೆದ ಎರಡು ವರ್ಷಗಳ ಹಿಂದಿನವರೆಗೂ ಆಕ್ಟಿವ್ ಆಗಿದ್ದರು. ಆದರೆ ಸದ್ಯ ರಾಧಿಕಾ ಕುಮಾರಸ್ವಾಮಿ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಸಖತ್ ಆಕ್ಟಿವ್ ಆಗಿದ್ದಾರೆ. ಸಿನಿಮಾದಲ್ಲಿ ನಟಿಸದೇ ಇದ್ದರೂ ವರ್ಕೌಟ್, ಜಿಮ್ ಮಾಡೋದನ್ನು ಮರೆಯದ ರಾಧಿಕಾ ಅಗಾಗ ತಮ್ಮ ಡ್ಯಾನ್ಸ್ ಹಾಗೂ ವರ್ಕೌಟ್ ವಿಡಿಯೋ ಹಂಚಿಕೊಳ್ಳುತ್ತಾರೆ
ಇತ್ತೀಚಿಗಷ್ಟೇ ನಟಿ ರಾಧಿಕಾ ತಮ್ಮ ಕೋರಿಯೋಗ್ರಾಫರ್ ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ. ಆದರೆ ಡ್ಯಾನ್ಸ್ ಮಾಡುತ್ತ ಮಾಡುತ್ತ ರಾಧಿಕಾ ನಿಯಂತ್ರಣ ತಪ್ಪಿ ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಯ್ಯೋ ಹೀಗೆಲ್ಲ ಸಾಹಸ ಮಾಡಿ ನೋವು ಮಾಡ್ಕೋಬೇಡಿ. ನೀವು ಸುಖವಾಗಿ ಇದ್ರೇ ನಾವು ಖುಷಿಯಾಗಿ ಇರ್ತಿವಿ ಎಂದು ಕಮೆಂಟ್ ಮಾಡ್ತಿದ್ದಾರೆ.
2019 ರಲ್ಲಿ ರಾಣಿ ಚೆನ್ನಭೈರಾದೇವಿ ಸಿನಿಮಾ ನಿರ್ಮಿಸಿದ್ದ ರಾಧಿಕಾ ಕುಮಾರಸ್ವಾಮಿ ಸಿನಿಮಾ ಶೂಟಿಂಗ್ ವೇಳೆ ಜಾರಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಒಂದು ತಿಂಗಳ ಕಾಲ ರಾಧಿಕಾ ಕುಮಾರಸ್ವಾಮಿಯವರು ವಿಶ್ರಾಂತಿ ಪಡೆದಿದ್ದರು. ಈಗ ಡ್ಯಾನ್ಸ್ ಮಾಡೋ ವೇಳೆ ರಾಧಿಕಾ ಕುಮಾರಸ್ವಾಮಿ ಜಾರಿ ಬಿದ್ದ ವಿಡಿಯೋ ಸಕತ್ ವೈರಲ್ ಆಗಿದ್ದು, ಜನರು ಸ್ವೀಟಿಗೆ ಟೇಕ್ ಕೇರ್ ಅಂತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಧಿಕಾ ಕುಮಾರಸ್ವಾಮಿ ಯವರಿಗೆ ವಿಜಯ್ ರಾಘವೇಂದ್ರ ಜೊತೆ ನಟಿಸಿದ ನಿನಗಾಗಿ ಸಿನಿಮಾ ಬ್ರೇಕ್ ನೀಡಿತ್ತು. ಬಳಿಕ ಹಲವು ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಮಿಂಚಿ ಯಶಸ್ಸು ಗಳಿಸಿದ್ದಾರೆ.
ಇದನ್ನೂ ಓದಿ : Urfi Javed:ಯಾರು ಈ ಉರ್ಫಿ ಜಾವೇದ್; ಇವರು ಸದಾ ಸುದ್ದಿಯಲ್ಲಿರೋದು ಯಾಕೆ!
ಇದನ್ನೂ ಓದಿ : Rajani Raghavan Google Me : ಗೂಗಲ್ ಮೀ ಎಂದ ಕನ್ನಡತಿ : ರಂಜನಿ ಸ್ಪೆಶಲ್ ಪೋಟೋ ವೈರಲ್
Radhika Kumaraswamy video Viral fans call it a joke for the man who slipped