ಸೋಮವಾರ, ಜೂನ್ 16, 2025
HomeCinemaರಾಧಿಕಾ ರಾಜಕೀಯ ಎಂಟ್ರಿಗೆ ಮುಹೂರ್ತ ಫಿಕ್ಸ್…! ಯಾವಾಗ ಬರ್ತಾರೆ…? ಪಕ್ಷ ಯಾವುದು…?

ರಾಧಿಕಾ ರಾಜಕೀಯ ಎಂಟ್ರಿಗೆ ಮುಹೂರ್ತ ಫಿಕ್ಸ್…! ಯಾವಾಗ ಬರ್ತಾರೆ…? ಪಕ್ಷ ಯಾವುದು…?

- Advertisement -

ಸದಾ ನಗು ಬೀರುತ್ತಲೇ ಮಾತಾಡೋ ಕರಾವಳಿ ಬ್ಯೂಟಿ ರಾಧಿಕಾ ಕುಮಾರಸ್ವಾಮಿ, ಕೊನೆಗೂ ತಮ್ಮ ರಾಜಕೀಯ ಪ್ರವೇಶದ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.

Radhika Kumaraswamy Photos 1

ಸಿಸಿಬಿ ಕಸ್ಟಡಿಯಲ್ಲಿರೋ ಸ್ವಾಮಿಯಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಾಧಿಕಾ ನನಗೆ ರಾಜಕೀಯ ಪ್ರವೇಶಕ್ಕೆ ಕುಟುಂಬದ ಒತ್ತಡ ಇದೆ ಎಂದರು.

S3 1 E1609952601936

ನಮ್ಮ ಮನೆಯಲ್ಲಿ ರಾಜಕೀಯಕ್ಕೆ ಬಾ ಬಾ ಅಂತ ತುಂಬಾ ಒತ್ತಡ ಹಾಕ್ತಿದ್ದಾರೆ. ಆದರೆ ನನಗೆ ಸದ್ಯ ರಾಜಕೀಯಕ್ಕೆ ಬರಲು ಮನಸ್ಸಿಲ್ಲ ಎಂದಿದ್ದಾರೆ.

S4

ಒಂದಷ್ಟು ವರ್ಷ ಸಿನಿಮಾ ರಂಗದಲ್ಲಿ ಕೆಲಸಮಾಡಬೇಕು. ಒಳ್ಳೊಳ್ಳೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಹೀಗಾಗಿ ಸಧ್ಯ ರಾಜಕೀಯ ಕ್ಕೆ ಬರೋದಿಲ್ಲ. ಆದರೆ ಒಂದಿಷ್ಟು ವರ್ಷ ಬಿಟ್ಟು ರಾಜಕೀಯಕ್ಕೆ ಬರ್ತೆನೆ ಎಂದರು.

Radhika 3

ಮುಂದಿನ ವಿಧಾನಸಭೆ ಚುನಾವಣೆ ಗೆ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಬರ್ತಾರಾ ಎಂಬ ಮಾಧ್ಯಮದ ಪ್ರಶ್ನೆಗೆ ನಕ್ಕ ರಾಧಿಕಾ ಅಯ್ಯೋ ನನ್ನ ಮನೆಯಲ್ಲಿ ರಾಜಕೀಯಕ್ಕೆ ಬಾಬಾ ಅಂತ ತುಂಬ ಒತ್ತಾಯ ಮಾಡ್ತಿದ್ದಾರೆ ಎಂದರು.

ಆದರೆ ತಮ್ಮ ಮಾತಿನ ಮಧ್ಯದಲ್ಲಿ ಎಲ್ಲೂ ಯಾವ ಮನೆ? ಯಾರ ಒತ್ತಾಯ? ಯಾವ ಪಕ್ಷಕ್ಕೆ ಸೇರ್ತಾರೆ? ಯಾವ ಕ್ಷೇತ್ರದಿಂದ ಕಣಕ್ಕಿಳಿತಾರೇ ಎಂಬುದರ ಬಗ್ಗೆ ರಾಧಿಕಾ ಮಾತನಾಡಲಿಲ್ಲ.

Radhika 2

ಆದರೆ ಒಂದಿಷ್ಟು ವರ್ಷಗಳ ಕಾಲ ಸಿನಿಮಾದಲ್ಲಿ ನಟಿಸಿದ ಬಳಿಕ ರಾಜಕೀಯ ಪ್ರವೇಶ ಪಕ್ಕಾ ಎಂಬ ಮುನ್ಸೂಚನೆಯನ್ನು ನಟಿಮಣಿ ನೀಡಿದ್ದಾರೆ.

RELATED ARTICLES

Most Popular