ಸೋಮವಾರ, ಏಪ್ರಿಲ್ 28, 2025
HomeCinemaRadhika Kumarswamy : ಅಂತರಾಷ್ಟ್ರೀಯ ಯೋಗ ದಿನ : ಯೋಗ ಭಂಗಿಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ...

Radhika Kumarswamy : ಅಂತರಾಷ್ಟ್ರೀಯ ಯೋಗ ದಿನ : ಯೋಗ ಭಂಗಿಯಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ

- Advertisement -

ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿರಂಗದಿಂದ ದೂರವಿದ್ದರು. ದಮಯಂತಿ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಇತ್ತೀಚೆಗೆಷ್ಟೆ ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆ ಜೊತೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಆಗಿದ್ದಾರೆ. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವಿಧ ಯೋಗ ಭಂಗಿಗಳಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ, ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಆಗಿರೋದನ್ನು ಬಿಟ್ಟು ಮುಂದೆ ಬರುವದನ್ನು ಸ್ವೀಕರಿಸಿ” ಎಂದು ಕಪ್ಪು ಬಣ್ಣದ ಟೀಶರ್ಟ್‌ ಹಾಗೂ ಪ್ಯಾಂಟ್‌ನಲ್ಲಿ ವಿವಿಧ ಯೋಗ ಭಂಗಿಗಳಿಗೆ ಪೋಸ್‌ ನೀಡಿದ್ದಾರೆ. ಪ್ರತಿದಿನ ಹೆಚ್ಚಿನ ನಟಿಯರು ಫಿಟ್‌ನೆಸ್‌ಗಾಗಿ ಯೋಗ ಮಾಡುತ್ತಾರೆ. ಇದ್ದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯೋಗವನ್ನು ತಪ್ಪದೇ ಮಾಡುತ್ತಾರೆ. ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಕೂಡ ತನ್ನ ಸೌಂದರ್ಯವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಯೋಗನೇ ಕಾರಣ ಎಂದಿದ್ದಾರೆ.

ಇದನ್ನೂ ಓದಿ : TV actor Prajwal : ಬಾರ್‌ನಲ್ಲಿ ಕಿರಿಕ್‌ : ಅಮೃತವರ್ಷಿಣಿ ಧಾರಾವಾಹಿ ನಟನ ವಿರುದ್ದ ಎಫ್‌ಐಆರ್‌ ದಾಖಲು

ಇದನ್ನೂ ಓದಿ : Matte Maduve Movie OTT : ‘ಮತ್ತೆ ಮದುವೆ’ ಸಿನಿಮಾ ಜೂನ್ 23ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್

ಸದ್ಯ ರಾಧಿಕಾ ಕುಮಾರಸ್ವಾಮಿ ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡ್‌ ಜೊತೆ ಅಜಾಗ್ರತ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾವನ್ನು ರಾಧಿಕಾ ಸಹೋದರ ರವಿರಾಜ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವು ಏಳು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಲಿದೆ.

Radhika Kumarswamy: International Yoga Day: Radhika Kumarswamy looks glamorous in yoga poses

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular