ಸ್ಯಾಂಡಲ್‌ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ (Raghavendra Stores Collection) ಕಳೆದ ವಾರವಷ್ಟೇ ತೆರೆ ಕಂಡಿದೆ. ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸದ್ಯ ಮೊದಲ ವಾರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ನಿರ್ಮಾಪಕ ಕಾರ್ತಿಕ್ ಗೌಡ ಮಾಹಿತಿ ನೀಡಿದ್ದಾರೆ.
ಹೌದು ಮೊದಲ ವಾರದಲ್ಲಿ ಸಿನಿಮಾ 1.1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನುವ ಟ್ವೀಟ್‌ವೊಂದಕ್ಕೆ ನಿರ್ಮಾಪಕರಾದ ಕಾರ್ತಿಕ್ ಗೌಡ ಉತ್ತರ ನೀಡಿದ್ದಾರೆ. ಆ ಟ್ವೀಟ್‌ನ ರೀಟ್ವೀಟ್ ಮಾಡಿರುವ ಸಿನಿಮಾದ ನಿರ್ಮಾಪಕರು ಆಗಿರುವ ಕಾರ್ತಿಕ್ ಗೌಡ ಅದಕ್ಕಿಂತಲೂ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಖಚಿತ ಮಾಹಿತಿ ನೀಡದೇ ಇದ್ದರೂ 1.1 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಕಾರ್ತಿಕ್ ಗೌಡ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ‘ಗುರುದೇವ್ ಹೊಯ್ಸಳ’ ಹಾಗೂ ‘ಶಿವಾಜಿ ಸುರತ್ಕಲ್’ ಸಿನಿಮಾಗಳ ಕಲೆಕ್ಷನ್ ಬಗ್ಗೆಯೂ ಇದೇ ರೀತಿ ಸ್ಪಷ್ಟನೆ ಕೊಟ್ಟಿದ್ದಾರೆ.
Much More Sir 🙂 https://t.co/BCxV8lv0Gd
— Karthik Gowda (@Karthik1423) May 1, 2023
42 ವರ್ಷ ತುಂಬಿದ್ದರೂ ಸಿಂಗಲ್ ಸುಂದರನಾಗಿಯೇ ಇರುವ ಹಯವದನನ ಮದುವೆ ತಯಾರಿ ನೋಡಿ ಸಿನಿಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ಮಾಡಿದೆ. ಅದರೊಂದಿಗೆ ಕೊನೆಯ ಹದಿನೈದು ನಿಮಿಷ ಒಂದೊಳ್ಳೆ ಸಂದೇಶದ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದೊಳ್ಳೆ ಸದಭಿರುಚಿ ಸಿನಿಮಾ ತೆರೆ ಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಾಜ್ಯದಾದ್ಯಂತ ರಸದೌತಣದ ಊಟದ ಪರಿಮಳ ಹರಡಿದೆ.
ರಾಘವೇಂದ್ರ ಸ್ಟೋರ್ಸ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ರುಚಿ ರುಚಿಯಾದ ಹಾಸ್ಯದ ಊಟವನ್ನು ಉಂಡು ಖುಷಿಪಡುತ್ತಿದ್ದಾರೆ. 35 ವರ್ಷ ಮೇಲ್ಪಟ್ಟ ಹುಡುಗರು ಮದುವೆ ಆಗಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಮುದುವೆ ನಂತರ ಕೆಲವರಿಗೆ ಎದುರಾಗುವಂತಹ ಸಮಸ್ಯೆಗಳ ಬಗ್ಗೆ ಸಿನಿಮಾದಲ್ಲಿ ಕಾಣಬಹುದು. ಹೊಂಬಾಳೆ ಫಿಲ್ಮ್ಸ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ.
ಇದನ್ನೂ ಓದಿ : ಡಿವೋರ್ಸ್ ಖುಷಿಗೆ ಫೋಟೋಶೂಟ್ ಮಾಡಿದ ತಮಿಳು ಕಿರುತೆರೆ ನಟಿ ಶಾಲಿನಿ
ಈ ಸಿನಿಮಾದಲ್ಲಿ ನಟ ಜಗ್ಗೇಶ್ ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದಾರೆ. ಹಯವದನನ ತಂದೆಯಾಗಿ ಹಿರಿಯ ನಟ ದತ್ತಣ್ಣ ನಟಿಸಿದ್ದಾರೆ. ಇನ್ನು ರವಿಶಂಕರೇ ಗೌಡ ಹಾಗೂ ಮಿತ್ರಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ.
Raghavendra Stores Collection: Raghavendra Stores movie saw a collection of one crore in the first week