ಕನ್ನಡ ಸಿನಿರಂಗದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಘವೇಂದ್ರ ಸ್ಟೋರ್ಸ್ (Raghavendra Stores Movie) ಟ್ರೈಲರ್ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಖತ್ ವೀವ್ಸ್ ಕಂಡಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನಟ ಜಗ್ಗೇಶ್ ಅವರ ಸಿನಿಮಾವೆಂದರೆ ಯಾವಗಲೂ ನವರಸದಿಂದಲೇ ಕೂಡಿರುತ್ತದೆ. ಹಾಗಾಗಿ ಈ ಸಿನಿಮಾ ಕೂಡ ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದು ಖಂಡಿತ. ಇನ್ನು ನಟ ರಿಷಬ್ ಶೆಟ್ಟಿ ಈ ಸಿನಿಮಾದ ಟ್ರೈಲರನ್ನು ರಿಲೀಸ್ ಮಾಡಿದ್ದು, ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ.
ನಟ ರಿಷಬ್ ಶೆಟ್ಟಿ ತಮ್ಮ ಟ್ವೀಟ್‌ನಲ್ಲಿ, “ಸಿಂಗಲ್ ಸುಂದರನ ಮದುವೆ ಆಮಂತ್ರಣವನ್ನ ಬಿಡುಗಡೆ ಮಾಡೋದಕ್ಕೆ ಬಹಳ ಖುಷಿ ಇದೆ, ಮದುವೆ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಏಪ್ರಿಲ್ 28ರಂದು ಮದುವೆಗೆ, ಕುಟುಂಬ ಸಮೇತರಾಗಿ ಬಂದು ಆಶೀರ್ವಾದ ಮಾಡಬೇಕು ಎಂದು ವಿನಂತಿ.” ಎಂದು ಪೋಸ್ಟ್ ಮಾಡಿದ್ದಾರೆ. ನಟ ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಈ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ ರಾಮ್,” ಥ್ಯಾಂಕ್ಯೂ ಶೆಟ್ಟರೇ, ಐ ಲವ್ ಯೂ” ಎಂದು ಹೇಳಿದ್ದಾರೆ.
ಸಿಂಗಲ್ ಸುಂದರನ ಮದುವೆ ಆಮಂತ್ರಣವನ್ನ ಬಿಡುಗಡೆ ಮಾಡೋದಕ್ಕೆ ಬಹಳ ಖುಷಿ ಇದೆ, ಮದುವೆ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ.
— Rishab Shetty (@shetty_rishab) April 17, 2023
28th ಏಪ್ರಿಲ್ ರಂದು ಮದುವೆಗೆ, ಕುಟುಂಬ ಸಮೇತರಾಗಿ ಬಂದು ಆಶೀರ್ವಾದ ಮಾಡಬೇಕು ಎಂದು ವಿನಂತಿ.#RaghavendraStoresTrailer :https://t.co/dniARlk66S#RaghavendraStores pic.twitter.com/ylfUzRhwqa
ಇನ್ನು ಟ್ರೈಲರ್ ಉದ್ದಕ್ಕೂ ಅಡುಗೆ ಭಟ್ಟರಾಗಿರುವ ಹಿರಿಯ ನಟ ಜಗ್ಗೇಶ್‌ಗೆ ಹುಡುಗಿ ಹುಡುಕುತ್ತಿದ್ದು, ಕ್ಯಾಟರಿಂಗ್ ಸರ್ವಿಸ್ ನಡೆಸುವ ಹುಡುಗನಿಗೆ ಯಾರು ಹುಡುಗಿ ನೀಡುತ್ತಾರೆ. ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹುಡುಗರಿಗೆ ಮದುವೆ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಹಳ ಹಾಸ್ಯಮಯವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೇ ಅಡುಗೆ ಭಟ್ಟನ್ನು ಮೆಚ್ಚಿ ಮದುವೆ ಆಗುವ ಹುಡುಗಿಯರ ಮನಸ್ಥಿತಿ ಬಗ್ಗೆ ಕೂಡ ಬಹಳ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಇನ್ನು ಟ್ರೈಲರ್ ನೋಡಿದ ಸಿನಿಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾದಿದ್ದಾರೆ.
ಇದನ್ನೂ ಓದಿ : ರಾಘವೇಂದ್ರ ಸ್ಟೋರ್ಸ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಕಾಂತಾರ ರಿಷಬ್ ಶೆಟ್ಟಿ
ಇದನ್ನೂ ಓದಿ : ಹಾಸ್ಯನಟ ರಂಗಾಯಣ ರಘು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಸಿನಿತಂಡಗಳು
ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ. ನಟ ಜಗ್ಗೇಶ್ ಈ ಹಿಂದೆ ಟೀಸರ್ ಬಿಡುಗಡೆ ವೇಳೆ ಸಿನಿಮಾದ ಕುರಿತು ಮಾತನಾಡಿದ್ದರು. ಅದರಂತೆ “ಈ ಸಿನಿಮಾದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಸಿನಿಮಾದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ” ಎಂದು ಹೇಳಿದ್ದರು.
Raghavendra Stores Movie Trailer Released: Kantara Actor Rishabh Shetty Expresses Appreciation