ಭಾನುವಾರ, ಏಪ್ರಿಲ್ 27, 2025
HomeCinemaRagini Dwivedi Malayalam Movie : ಮಲೆಯಾಳಂಗೆ ಹಾರಿದ ತುಪ್ಪದ ಬೆಡಗಿ : ಸಸ್ಪೆನ್ಸ್ ಥ್ರಿಲ್ಲರ್...

Ragini Dwivedi Malayalam Movie : ಮಲೆಯಾಳಂಗೆ ಹಾರಿದ ತುಪ್ಪದ ಬೆಡಗಿ : ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರಾಗಿಣಿ

- Advertisement -

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೈಲಿನಿಂದ ಹೊರಬರುತ್ತಿದ್ದಂತೆ ತಮ್ಮ ಸಾಮಾಜಿಕ ಕಾರ್ಯಗಳನ್ನು ಮತ್ತೆ ಆರಂಭಿಸಿದ್ದರು. ಒಂದಿಷ್ಟು ಪೂಜೆ ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮನಸ್ಸಿಗೆ ನೆಮ್ಮದಿ ಪಡೆಯುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದ ಬೆಡಗಿ ಈಗ ಮತ್ತೆ ಫಾರ್ಮ್ ಗೆ ಮರಳಿದ್ದಾರೆ. ಕನ್ನಡದ ಜೊತೆಗೆ ಮಲೆಯಾಳಂ ಚಿತ್ರದಲ್ಲಿ ಮಿಂಚಲು ಲೇಡಿ ಸಿಂಗಂ ಖ್ಯಾತಿಯ ರಾಗಿಣಿ (Ragini Dwivedi Malayalam Movie) ಸಜ್ಜಾಗಿದ್ದಾರೆ.

ಸೌತ್ ಇಂಡಿಯಾ ಲೇಡಿ ಸ್ಟಾರ್ ಎಂದೇ ಖ್ಯಾತಿಗಳಿಸಿದ ರಾಗಿಣಿ ಈಗ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ತಮ್ಮ ಜರ್ನಿ ಮುಂದುವರೆಸಲು ಸಿದ್ಧವಾಗಿದ್ದಾರೆ. ಕನ್ನಡ ಹಾಗೂ ಮಲೆಯಾಳಂ ಎರಡು ಭಾಷೆಯಲ್ಲಿ ರಿಲೀಸ್ ಆಗಲಿರೋ ಚಿತ್ರವೊಂದಕ್ಕೆ ರಾಗಿಣಿ ಸಹಿ ಹಾಕಿದ್ದು, ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಧವೆಯೊಬ್ಬಳು ಬದುಕಿನಲ್ಲಿ ಎದುರಿಸುವ ಸವಾಲುಗಳನ್ನು ತೆರೆಗೆ ತರೋ ಈ ಕತೆಗೆ ಮಲೆಯಾಳಂನಲ್ಲಿ ಶೈಲಾ ಎಂದು ತಾತ್ಕಾಲಿಕವಾಗಿ ಹೆದರಿಡಲಾಗಿದೆಯಂತೆ.

ಆದರೆ ಕನ್ನಡ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಕೇರಳದ 200 ವರ್ಷ ಹಳೆಯದಾದ ಟೀ ಎಸ್ಟೇಟ್ ವೊಂದರಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸಸ್ಪೆನ್ಸ್, ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಬಾಲು ನಾರಾಯಣ ನಿರ್ದೇಶನವಿರುವ ಈ ಸಿನಿಮಾಗೆ ದೃಶ್ಯ ಖ್ಯಾತಿಯ ಅನಿಲ್ ಜಾನ್ಸನ್ ಸಂಗೀತ ನೀಡಿದ್ದಾರೆ. ವಿಧವೆ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರೋದರಿಂದ ತಮ್ಮ ಪಾತ್ರಕ್ಕಿರುವ ಸ್ಕೋಪ್ ನೋಡಿ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ.

ಇದು ಜೈಲುವಾಸದ ಬಳಿಕ ರಾಗಿಣಿ ನಟಿಸುತ್ತಿರುವ ಮೊದಲ ಚಿತ್ರವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೇಳಿಬಂದಿತ್ತು. ಅಲ್ಲದೇ ಸಿಸಿಬಿ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಡ್ರಗ್ಸ್ ಪತ್ತೆಯಾದ ಆರೋಪದಲ್ಲಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ಜೈಲು ಸೇರಿದ್ದ ರಾಗಿಣಿ ಬೆನ್ನು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ರಾಗಿಣಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ‌. ಜೈಲಿನಿಂದ ಹೊರಬರುತ್ತಿದ್ದಂತೆ ತಮ್ಮ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸಗಳನ್ನು ಆರಂಭಿಸಿದ್ದ ರಾಗಿಣಿ ಲಾಕ್ ಡೌನ್ ಸೇರಿದಂತೆ ವಿವಿಧ ಸಂದರ್ಭದಲ್ಲಿ ಆಶಕ್ತರಿಗೆ ನೆರವಾಗಿದ್ದರು.

ಇದನ್ನೂ ಓದಿ : Rashmika Mandanna Forbes : ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ : ಅಭಿಮಾನಿಗಳ ಪ್ರೀತಿಗೆ ರಶ್ಮಿಕಾ ಧನ್ಯವಾದ

ಇದನ್ನೂ ಓದಿ : Niveditha Gowda : ಅಮ್ಮ ಅಜ್ಜಿ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ : ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್

( Ragini Dwivedi Acting in Malayalam Movie in thriller)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular