ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಸುದ್ದಿ ಯಾಗಿದ್ದರು. ಆದರೇ ಸ್ಸಾರಿ ಕರ್ಮ ರಿಟರ್ನ್ಸ್ ಎನ್ನುತ್ತ ಫ್ಯಾನ್ಸ್ ಮುಂದೇ ಹಾಜರಾಗಿದ್ದಾರೆ. ಸ್ಯಾಂಡಲ್ ವುಡ್ ಲೇಡಿ ಡಾನ್ ಪೋಸ್ ನಲ್ಲಿ, ಸಿನಿಮಾಗಳಲ್ಲಿ ಮಿಂಚುತ್ತಿದ್ದ ರಾಗಿಣಿ ಇದ್ದಕ್ಕಿಂದಂತೆ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಕೊಂಡಿ ಜೈಲು ಪಾಲಾದ್ರು.ಆದರೆ ಎಲ್ಲ ವಿವಾದ ಗಳಿಂದ ಫಿನಿಕ್ಸ್ ನಂತೆ ಎದ್ದು ಬಂದಿರೋ ರಾಗಿಣಿ ಮತ್ತೆ ಬಣ್ಣ ಹಚ್ಚಿದ್ದು ಸ್ಸಾರಿ ಕರ್ಮ ರಿಟರ್ನ್ಸ್ ಎನ್ನುತ್ತ ಮರಳಿದ್ದಾರೆ.

ಇದೊಂದು ವಿಭಿನ್ನ ಪ್ರಯೋಗ ಎಂದಿರುವ ರಾಗಿಣಿ ಈ ಸಿನಿಮಾದ ಪೋಟೋಶೂಟ್ ಕೂಡ ಮುಗಿಸಿದ್ದಾರೆ. ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿರೋ ರಾಗಿಣಿ ಒಂದು ಮಾಡರ್ನ್ ಮತ್ತು ಮತ್ತೊಂದು ಟ್ರೆಡಿಶನಲ್ ಲುಕ್ ನಲ್ಲಿ ಮಿಂಚಿದ್ದಾರೆ.

ಕಿಸ್ ಇಂಟರನ್ಯಾಷನಲ್ ಸಂಸ್ಥೆ ಇದಕ್ಕೆ ಬಂಡವಾಳ ಹೂಡಿದ್ದು ಬ್ರಹ್ಮ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಹಾಲಿವುಡ್ ನ ಟಾಮ್ ಆ್ಯಂಡ್ ಜೆರ್ರಿ ಸಿನಿಮಾಕ್ಕೆ ಕೆಲಸ ಮಾಡಿದ್ದ ಆನ್ಯಿಮೇಶನ್ ತಂಡ ರಾಗಿಣಿ ಜೊತೆ ಕೈಜೋಡಿಸಿದೆಯಂತೆ. ಸಾಮಾಜಿಕ ಸಂದೇಶವನ್ನು ಸಾರುತ್ತಿರುವ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೂ ಹೊಸ ಬಗೆಯ ಪ್ರಯೋಗ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಈ ಸಿನಿಮಾದ ಶೂಟಿಂಗ್ ಆರಂಭಿಸೋದರ ಜೊತೆಗೆ ರಾಗಿಣಿ ಮತ್ತಷ್ಟು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ರಾಣಾ ಅಭಿನಯದ ಸಿನಿಮಾದಲ್ಲಿ ಸ್ಪೆಶಲ್ ಹಾಡೊಂದಕ್ಕೆ ರಾಗಿಣಿ ಸೊಂಟ ಬಳುಕಿಸಲಿದ್ದಾರೆ.

ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮೊದಲ ಬಾರಿಗೆ ಬಾಲಿವುಡ್ ಗೂ ಎಂಟ್ರಿ ಕೊಟ್ಟಿರುವ ರಾಗಿಣಿ, ಅಲ್ಬಂ ಸಾಂಗ್ ವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಕನ್ನಡತಿ ರಾಗಿಣಿಗೆ ಅರ್ಜುನ್ ಶರ್ಮಾ ಸಾಥ್ ನೀಡಿದ್ದಾರೆ. ಮುಂಬೈ ಸುತ್ತಮುತ್ತ ಈ ಅಲ್ಬಂ ಸಾಂಗ್ ಶೂಟಿಂಗ್ ಮಾಡಲಾಗಿದ್ದು, ಈ ಹಾಡಿಗೆ ವಿಷ್ಣುಪ್ರಭು ಸಾಂಗ್ ಕೋರಿಯೋಗ್ರಫಿ ಮಾಡಿದ್ದಾರೆ.

ಒಟ್ಟಿನಲ್ಲಿ ರಾಗಿಣಿ ಡ್ರಗ್ಸ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಹೊರಬಂದರೂ ಅವರ ಜನಪ್ರಿಯತೆ ಕುಗ್ಗಿಲ್ಲ. ಜೈಲಿನಿಂದ ಹೊರಬಂದ ಮೇಲೂ ಸಾಮಾಜಿಕ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದು ಅಶಕ್ತರಿಗೆ ನೆರವಾಗಿದ್ದರು. ಈಗ ಕರ್ಮ ರಿಟರ್ನ್ಸ್ ಜೊತೆ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ರ್ರೀ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ : ಮದಗಜ ಮೂಲಕ ಅಬ್ಬರಿಸಿದ ಶ್ರೀಮುರುಳಿ : ಮೋಡಿ ಮಾಡಿದೆ ಬಸ್ರೂರು ಮ್ಯೂಸಿಕ್
ಇದನ್ನೂ ಓದಿ : ಪುನೀತ್ ನೆನೆದು ಬಾವುಕರಾದ ಆಶಿಕಾ : ಜೊತೆಯಾಗಿ ನಟಿಸೋ ಕನಸು ನನಸಾಗಲಿಲ್ಲ
(Actress Ragini Dwivedi begins shooting for her first film since the pandemic with Sorry)