ಮೊನ್ನೆ ಮೊನ್ನೆಯಷ್ಟೇ ಮಲೆಯಾಳಂ ಸಿನಿಮಾಗೆ ಹಾರೋ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದ ನಟಿ ರಾಗಿಣಿ ಈಗ ಮತ್ತೊಂದು ಸ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಮಲೆಯಾಳಂ ಸಿನಿಮಾದಲ್ಲಿ ಶೂಟಿಂಗ್ ಆರಂಭಿಸೋ ಖುಷಿಯಲ್ಲಿದ್ದ ರಾಗಿಣಿ ಆರಂಭದಲ್ಲೇ ವಿಘ್ನ ಎದುರಾಗಿದ್ದು ರಾಗಿಣಿ ಕಾಲು ಪೆಟ್ಟು (Ragini Dwivedi Injured) ಮಾಡಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಬರೋಬ್ಬರಿ 124 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಕೊನೆಗೂ ಜಾಮೀನಿಗಾಗಿ ಪರದಾಡಿದ ರಾಗಿಣಿ ದ್ವಿವೇದಿ ಕೊನೆಗೂ ಅನಾರೋಗ್ಯದ ಕಾರಣ ಮುಂದಿಟ್ಟುಕೊಂಡು ಜಾಮೀನು ಪಡೆದುಕೊಂಡು ಹೊರಬಂದಿದ್ದರು. ಆ ಬಳಿಕ ತಮ್ಮ ಸಾಮಾಜಿಕ ಕಾರ್ಯಗಳಿಗೆ ಮರಳಿದ್ದ ರಾಗಿಣಿ ದ್ವಿವೇದಿ ಬಡವರಿಗೆ ಅಶಕ್ತರಿಗೆ ಆಹಾರ ಪದಾರ್ಥ ಒದಗಿಸುವ ಮೂಲಕ ನೆರವಾಗಿದ್ದರು. ಅಷ್ಟೇ ಅಲ್ಲ ಸ್ಮಶಾನವಾಸಿಗಳ ನೆರವಿಗೆ ಧಾವಿಸಿದ್ದರು.

ಬಳಿಕ ಸಿನಿಮಾ ಇಂಡಸ್ಟ್ರಿ ಗೆ ಮರಳಿದ್ದ ರಾಗಿಣಿ ರಾಣಾ ಸಿನಿಮಾದಲ್ಲಿ ಸ್ಪೆಶಲ್ ರೋಲ್ ನಲ್ಲಿ ನಟಿಸಿದ್ದರು. ಅಲ್ಲದೇ ಸ್ಸಾರಿ ಕರ್ಮ ರಿಟರ್ನ್ಸ್ ಸಿನಿಮಾದ ಮಹಿಳಾ ಪ್ರಧಾನ ರೋಲ್‌ನಲ್ಲಿ ನಟಿಸಿದ್ದರು. ಕಿಸ್ ಇಂಟರನ್ಯಾಷನಲ್ ಪ್ರೊಡಕ್ಷನ್ ಅಡಿಯಲ್ಲಿ ನವೀನ್ ಕುಮಾರ್ ಕೆನಡಾ ಚಿತ್ರ ನಿರ್ಮಿಸುತ್ತಿದ್ದು ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ಇನ್ನು ಈ ಹಿಂದೆ ಶರಣ್ ಜೊತೆ ಯಕ್ಕಾ ನಿನ್ನ ಮಗಳು ನಂಗೇ ಚಿಕ್ಕವಳಾಗಲ್ಲವಾ ಎಂಬ ಹಾಡಿಗೆ ಕುಣಿದಿದ್ದ ರಾಗಿಣಿ, ರಾಣ ಸಿನಿಮಾದಲ್ಲಿ ಚಂದನ್ ಶೆಟ್ಟಿ ಸಂಗೀತ ನಿರ್ದೇಶಿಸಿರುವ ಹಾಡಿನಲ್ಲಿ ಸಖತ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಮಲೆಯಾಳಂ ಹಾಗೂ ಕನ್ನಡದಲ್ಲಿ ತೆರೆ ಕಾಣಲಿರುವ ಶೈಲಾ ಸಿನಿಮಾಗಾಗಿ ರಾಗಿಣಿ ದ್ವಿವೇದಿ ಸಿದ್ಧತೆ ನಡೆಸಿದ್ದರು. ಸದ್ಯದಲ್ಲೇ ಕೇರಳದ 200 ವರ್ಷದ ಹಳೆಯದಾದ ಟೀ ಎಸ್ಟೇಟ್ ನಲ್ಲಿ ಶೂಟಿಂಗ್ ಆರಂಭಿಸಲಿದ್ದ ಚಿತ್ರತಂಡವನ್ನು ರಾಗಿಣಿ ಸೇರಿಕೊಳ್ಳಬೇಕಿತ್ತು.

ಆದರೆ ಅದಕ್ಕೂ ಮುನ್ನವೇ ರಾಗಿಣಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಮನೆಯಲ್ಲೇ ರಾಗಿಣಿ ಯೋಗ ಪ್ರಾಕ್ಟೀಸ್ ಮಾಡುವ ವೇಳೆ ಏರ್ ಕ್ರ್ಯಾಕ್ ಆಗಿದ್ದು, ರಾಗಿಣಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ಕಾಲಿಗೆ ಏಟಾಗಿರುವ ಪೋಟೋ ಶೇರ್ ಮಾಡಿಕೊಂಡಿರುವ ರಾಗಿಣಿ ದ್ವಿವೇದಿ ಹೀಗಾಗಿದೇ. ಸರಿ ಹೋದ ಮೇಲೆ ಶೂಟಿಂಗ್ ಗೆ ಮರಳುವುದಾಗಿ ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ರಾಗಿಣಿ ಕಾಲಿಗೆ ಪೆಟ್ಟಾಗಿರೋ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ವಿಶ್ರಾಂತಿ ಪಡೆಯುವಂತೆ ಕಮೆಂಟ್ ಮಾಡ್ತಿದ್ದಾರೆ.
ಇದನ್ನೂ ಓದಿ : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
ಇದನ್ನೂ ಓದಿ : ಸಿನಿಮಾ ರಂಗ ಬಿಡ್ತಾರಂತೆ ರಶ್ಮಿಕಾ : ನಿರ್ಧಾರಕ್ಕೆ ಕಾರಣವೇನು ಗೊತ್ತಾ?!
ಇದನ್ನೂ ಓದಿ : ಬಾತ್ ರೂಂನಲ್ಲಿ ಸೆಲ್ಪಿ ವಿಡಿಯೋ : ನಟಿಯ ಹುಚ್ಚಾಟಕ್ಕೆ ಅಭಿಮಾನಿಗಳು ಶಾಕ್
( Ragini Dwivedi Injured before Shaila Malayalm Movie shooting)