ಬುಧವಾರ, ಏಪ್ರಿಲ್ 30, 2025
HomeCinemaRakesh Master passes away : ತೆಲುಗು ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ಇನ್ನಿಲ್ಲ

Rakesh Master passes away : ತೆಲುಗು ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ ಇನ್ನಿಲ್ಲ

- Advertisement -

ಟಾಲಿವುಡ್ ನ ಜನಪ್ರಿಯ ನೃತ್ಯ ನಿರ್ದೇಶಕ ರಾಕೇಶ್ ಮಾಸ್ಟರ್ (Rakesh Master passes away) ಅವರು 53 ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ರಾಕೇಶ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಿನಿತಾರೆಯರು ಸಂತಾಪವನ್ನು ಸೂಚಿಸಿದ್ದಾರೆ.

ಕಳೆದ ವಾರ ವಿಶಾಖಪಟ್ಟಣಂನಲ್ಲಿ ನಡೆದ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಿ ಹೈದರಾಬಾದ್‌ಗೆ ಹಿಂದಿರುಗುತ್ತಿದ್ದಾಗ ನೃತ್ಯ ನಿರ್ದೇಶಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ರಾಕೇಶ್ ಮಾಸ್ಟರ್ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ಮಾಸ್ಟರ್ ಅವರು ಕೊನೆಯುಸಿರೆಳೆದರು. ವೈದ್ಯರ ಪ್ರಕಾರ, ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರು ಮಧುಮೇಹಿ ಮತ್ತು ತೀವ್ರವಾದ ಚಯಾಪಚಯ ಆಮ್ಲವ್ಯಾಧಿಗೆ ರೋಗ ತುತ್ತಾಗಿದ್ದರು. ಸದ್ಯ ರಾಕೇಶ್ ಮಾಸ್ಟರ್ ಸಾವು ಸಿನಿರಂಗದಲ್ಲಿ ಆಘಾತವನ್ನು ಉಂಟು ಮಾಡಿದೆ.

“ಆಟ” ಮತ್ತು “ಧೀ” ನಂತಹ ಡ್ಯಾನ್ಸ್ ರಿಯಾಲಿಟಿ ಶೋಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಕೇಶ್ ಮಾಸ್ಟರ್ ನಂತರ ಸಿನಿರಂಗಕ್ಕೆ ಪ್ರವೇಶಿಸಿದರು. ಅವರು ಸುಮಾರು 1,500 ಸಿನಿಮಾಗಳಿಗೆ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು ಮತ್ತು ಹಲವಾರು ಹಿಟ್ ಹಾಡುಗಳನ್ನು ನೀಡಿದರು. ತಿರುಪತಿಯಲ್ಲಿ ಜನಿಸಿದ ಇವರ ನಿಜವಾದ ಹೆಸರು ಎಸ್.ರಾಮರಾವ್. ಅವರು ಡ್ಯಾನ್ಸ್ ಮಾಸ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಹೈದರಾಬಾದ್‌ನಲ್ಲಿ ಮಾಸ್ಟರ್ ಮುಕ್ಕು ರಾಜು ಅವರ ಅಡಿಯಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದರು.

ಇದನ್ನೂ ಓದಿ : World Father’s Day‌ : ವಿಶ್ವ ಅಪ್ಪಂದಿರ ದಿನದಂದು ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ರಾಕೇಶ್ ಮಾಸ್ಟರ್ ಹೆಸರಾಂತ ನಟರುಗಳಾದ ವೆಂಕಟೇಶ್, ನಾಗಾರ್ಜುನ, ಮಹೇಶ್ ಬಾಬು, ರಾಮ್ ಪೋತಿನೇನಿ ಮತ್ತು ಪ್ರಭಾಸ್ ಅವರಂತಹ ಅನೇಕ ಉನ್ನತ ನಟರೊಂದಿಗೆ ಕೆಲಸ ಮಾಡಿದರು. ಆದರೆ ಕೆಲವು ಸಮಯದಿಂದ ಉದ್ಯಮದಿಂದ ದೂರವಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೆಲವು ಸಂದರ್ಶನಗಳು ವಿವಾದಕ್ಕೀಡಾಗಿದ್ದವು. ಕೆಲವು ಸಂದರ್ಶನಗಳಲ್ಲಿ, ಅವರು ತಮ್ಮ ವೃತ್ತಿಜೀವನವನ್ನು ಹಾಳುಮಾಡಿದ್ದಾರೆಂದು ಕೆಲವು ಚಿತ್ರರಂಗದ ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು. ಟಾಲಿವುಡ್ ನ ಟಾಪ್ ಕೊರಿಯೋಗ್ರಾಫರ್ ಶೇಖರ್ ಮಾಸ್ಟರ್ ಕೂಡ ರಾಕೇಶ್ ಮಾಸ್ಟರ್ ಅವರ ಶಿಷ್ಯರಾಗಿದ್ದರು.

Rakesh Master passes away : Telugu choreographer Rakesh Master is no more

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular