ನಟ ರಕ್ಷಿತ್ ಶೆಟ್ಟಿಯವರು ಯಾವಾಗ ಮದುವೆಯಾಗುತ್ತಾರೆ ಎಂಬುದು ಅವರ ಅಭಿಮಾನಿಗಲ ಪಾಲಿನ ಮಿಲಿಯನ್ ಡಾಲರ್ ಪ್ರಶ್ನೆ. ನಟ ರಕ್ಷಿತ್ ಶೆಟ್ಟಿ ಅವರಿಗೆ ಹೋದಲ್ಲಿ ಬಂದಲ್ಲೆಲ್ಲಾ ಮತ್ತೆ ಮದುವೆ ಯಾವಾಗ ಆಗುತ್ತೀರಿ ಎಂಬ ಪ್ರಶ್ನೆ ಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಈ ಪ್ರಶ್ನೆ ಕೇಳುತ್ತಾರೆ. ರಶ್ಮಿಕಾ ಮಂದಣ್ಣ ಅವರ ಜೊತೆಗಿನ ಎಂಗೇಜ್ ಮೆಂಟ್ ಮುರಿದುಬಿದ್ದ ಮೇಲೆ ರಕ್ಷಿತ್ ಶೆಟ್ಟಿ ಮದುವೆ ವಿಚಾರವಾಗಿ ಬಹಳ ಮೌನವಾಗಿದ್ದರು. ರಮ್ಯಾ ಅವರನ್ನು ಅಭಿಮಾನಿಯೊಬ್ಬರು ನೀವು ಏಕೆ ರಕ್ಷಿತ್ ಶೆಟ್ಟಿಯವರನ್ನು (Rakshit Shetty- Ramya) ಮದುವೆಯಾಗಬಾರದು ಅಂತ ಕೇಳಿದ್ದಕ್ಕೆ ಏನೂ ಉತ್ತರಿಸದ ರಮ್ಯಾ ಅವರು, ಅದನ್ನು ರಕ್ಷಿತ್ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿದ್ದರು. ಏನೇ ಆದರೂ ಇದು ಇಬ್ಬರು ಸ್ಟಾರ್‌ಗಳ ವೈಯಕ್ತಿಕ ವಿಷಯ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಗೌರವ ನೀಡಬೇಕು. ಮತ್ತು ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಅವರಿಬ್ಬರೂ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಹಾರೈಕೆ
ಇತ್ತೀಚೆಗಷ್ಟೇ ರಮ್ಯಾ, ‘ನೋಡ್ತಾ ಇರಿ. ಮಾರ್ಚ್ ತಿಂಗಳಲ್ಲಿ ನಿಮಗೆ ಗುಡ್ ನ್ಯೂಸ್ ಕೊಡ್ತೇನೆ’ ಅಂತ ಹೇಳಿದ್ದಾರೆ. ಇದೂ ಕೂಡ ರಮ್ಯಾ-ರಕ್ಷಿತ್ ಮದುವೆ ವಿಚಾರವಾಗಿ ಇರಬಹುದೇ ಅನ್ನೋ ಗುಲ್ಲು ಆರಂಭವಾಗಿದೆ. ರಕ್ಷಿತ್ ಶೆಟ್ಟಿ-ರಮ್ಯಾ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬರುವುದಕ್ಕೆ ಕಾರಣ ರಕ್ಷಿತ್ ಶೆಟ್ಟಿಗೆ ಏಪ್ರಿಲ್ ನಿಂದ ಗುರುಬಲ ಬರಲಿದೆಯಂತೆ. ಈ ವಿಚಾರವನ್ನು ಖ್ಯಾತ ಜ್ಯೋತಿಷಿ ಭಾಸ್ಕರ್ ಶೆಟ್ಟಿ ಖಚಿತವಾಗಿ ಹೇಳಿದ್ದಾರೆ. ಏಪ್ರಿಲ್ ತಿಂಗಳ 23 ರಿಂದ ರಕ್ಷಿತ್ ಗೆ ಗುರುಬಲ ಆರಂಭವಾಗಲಿದ್ದು, ಮುಂದಿನ ವರ್ಷದಲ್ಲಿ ರಕ್ಷಿತ್ ಮದುವೆಯಾಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಈ ಭಾಸ್ಕರ್ ಶೆಟ್ಟಿ ಸುಮ್ಮನೆ ಅಲ್ಲ. ಇವರ ಮಾತನ್ನು ರಕ್ಷಿತ್ ಮತ್ತು ರಿಷಭ್ ಶೆಟ್ಟಿ ಇಬ್ಬರೂ ಶಿರಸಾವಹಿಸಿ ಪಾಲಿಸುತ್ತಾರೆ. ನಿಮಗೆ ಗೊತ್ತಿಲ್ಲ, ರಿಷಭ್ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ ಅಂಥ. ಇದು ನಿನಗೆ ಸರಿ ಹೋಗುವುದಿಲ್ಲ ಅಂತ ರಿಷಭ್ ಶೆಟ್ಟಿ ಅಂತ ಹೆಸರು ಬದಲಿಸಿ ಲಕ್ ಕೊಡಿಸಿದವರೂ ಇದೇ ಭಾಸ್ಕರ್. ಹೀಗಾಗಿ, ರಿಷಭ್-ರಕ್ಷಿತ್ ಯಾರನ್ನು ನಂಬದೇ ಇದ್ದರು ಈ ಭಾಸ್ಕರ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತಾರೆ.
ಈಗ ರಕ್ಷಿತ್ ಬಗ್ಗೆ ಭಾಸ್ಕರ್ ಭವಿಷ್ಯ ನುಡಿದಿದ್ದಾರೆ. ಮುಂದಿನ ವರ್ಷ ಮದುವೆ ಆಗಿಯೇ ತೀರುತ್ತದೆ ಅಂತ. ಇದರ ಜೊತೆಗೆ ರಮ್ಯಾ ಮಾರ್ಚ್ ತಿಂಗಳಲ್ಲಿ ಗುಡ್ ನ್ಯೂಸ್ ಇದೆ ಅಂತ ಹೇಳಿಕೆ ನೀಡಿದ್ದಾರೆ. ಇಬ್ಬರ ಹೇಳಿಕೆಗಳನ್ನು ಅಕ್ಕಪಕ್ಕದಲ್ಲಿ ಇಟ್ಟು ನೋಡಿದರೆ ಆ ಅಭಿಮಾನಿ ಹೇಳಿದಂತೆ ಇಬ್ಬರು ಮದುವೆಯಾಗಬಹುದು ಅನ್ನೋ ಅನುಮಾನ ಮೂಡಿದೆ. ಹೀಗಾಗಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಇವರಿಬ್ಬರ ಜೀವನದಲ್ಲಿ ಬಹುಮಹತ್ವ ಎನಿಸುತ್ತಿದೆ. ಭಾಸ್ಕರ್ ಶೆಟ್ಟಿ ಅವರು ನಿರ್ದೇಶಕ ರಿಷಭ್ ಶೆಟ್ಟಿ ಅವರ ತಂದೆ ಎಂಬುದು ಇನ್ನಷ್ಟು ಕುತೂಹಲ ಮೂಡಿಸಿದೆ.
ಏನೇ ಆದರೂ ಇದು ಇಬ್ಬರು ಸ್ಟಾರ್‌ಗಳ ವೈಯಕ್ತಿಕ ವಿಷಯ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಗೌರವ ನೀಡಬೇಕು. ಮತ್ತು ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಅವರಿಬ್ಬರೂ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಹಾರೈಕೆ
(Rakshit Shetty and Actress Ramya will marry question)