ನಟಿಯರ ಸೋಷಿಯಲ್ ಮೀಡಿಯಾ ದಲ್ಲಿ ಪೋಟೋಶೂಟ್ ಪೋಟೋಗಳು ಕಾಮನ್. ಅದರಲ್ಲಿ ಪಾರ್ಟಿ, ಟ್ರಿಪ್,ಫೆಸ್ಟಿವಲ್ ಹೀಗೆ ವೈರೈಟಿ ವೈರೈಟಿ ಪೋಟೋಗಳನ್ನು ನೀವು ನೋಡಬಹುದು. ಆದರೆ ಈ ಬಾಲಿವುಡ್ ನಟಿಯ ಅಕೌಂಟ್ ನಲ್ಲಿ ಮಾತ್ರ ಬರಿ ಬಿಕನಿ ಪೋಟೋಗಳದ್ದೇ ಕಾರುಭಾರು. ಈ ಪೋಟೋಸ್ ನೋಡಿದ ಅಭಿಮಾನಿ ಗಳು ಮೈಮರೆತಿದ್ದಾರೆ. ರೂಪದರ್ಶಿಯಾಗಿ ಕೆರಿಯರ್ ಆರಂಭಿಸಿದ ರಕುಲ್ ಪ್ರೀತ್ ಸಿಂಗ್ ( Rakul Preet Singh ) ಪ್ರವಾಸ ಪ್ರಿಯೆ. ಅದರಲ್ಲೂ ಸಮುದ್ರ ತೀರ,ನದಿ ಪಾತ್ರದ ಪ್ರದೇಶಗಳಿಗೆ ಪ್ರವಾಸ ಹೋಗೋದು ಅಂದ್ರೇ ರಕುಲ್ ಅವರಿಗೆ ತುಂಬಾ ಇಷ್ಟವಂತೆ. ಹೀಗೆ ತಣ್ಣನೆಯ ನೀರಿನ ನಡುವೆ ಮೈಮರೆಯೋ ರಕುಲ್ ಸದಾ ಬಿಕನಿಯಲ್ಲೇ ಪೋಟೋಗೆ ( Rakul Preet Singh bikini photo shoot ) ಪೋಸ್ ಕೊಡ್ತಾರೆ.

ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಬರಿ ಬಿಕನಿ ಪೋಟೋಗಳೇ ತುಂಬಿವೆ. ಒಂದಕ್ಕಿಂತ ಒಂದು ಹಾಟ್ ಎನ್ನಿಸೋ ಪೋಟೋಗಳಿಂದಲೇ ತುಂಬಿರೋ ರಕುಲ್ ಪೋಟೋಗಳಿಗೆ ಅಭಿಮಾನಿಗಳು ಸಖತ್ ಕಮೆಂಟ್ ಮಾಡ್ತಿದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ನಟಿಸಿರೋ ರಕುಲ್ ಪ್ರೀತ್ 1990 ರ ಅಕ್ಟೋಬರ್ 10 ರಂದು ಜನಿಸಿದ್ದು ಅವರು ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.

ತನ್ನ 18 ನೇ ವಯಸ್ಸಿನಲ್ಲೇ ಕಾಲೇಜ್ ನಲ್ಲಿದ್ದಾಗಲೇ ಮಾಡೆಲಿಂಗ್ ನಲ್ಲಿ ಕೆರಿಯರ್ ಆರಂಭಿಸಿದ ರಕುಲ್ ಪ್ರೀತ್ , ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟಿದ್ರು, ಕನ್ನಡದಲ್ಲಿ ಗಿಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. 2011 ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದ ರಕುಲ್ ನಟನೆಯಲ್ಲೂ ಒಳ್ಳೆಯ ಹೆಸರುಗಳಿಸಿದ್ದಾರೆ.

2014 ರಲ್ಲಿ ರಕುಖ್ ಯಾರಿಯಾನ್ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದು, ದಿವ್ಯಕುಮಾರ್ ಸಿನಿಮಾ ನಿರ್ದೇಶಿಸಿದ್ದರು. ತಮ್ಮ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹಾಟ್, ಬೋಲ್ಡ್ ಹಾಗೂ ಬಿಕನಿ ಪೋಟೋಗಳನ್ನೇ ತುಂಬಿಕೊಂಡಿರೋ ರಕುಲ್ ಬೀಚ್ ಗಳಲ್ಲಿ ಮೈಮರೆಯೋದಿಕ್ಕೆ ಕಾಯುತ್ತಿರುತ್ತಾರಂತೆ.

ಸಮುದ್ರ ತೀರಗಳನ್ನು ಹಾಗೂ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ತಮ್ಮ ಬಿಡುವಿನ ವೇಳೆ ಕಳೆಯೋ ಈ ನಟಿಗೆ ನೀರೆಂದರೇ ಎನೋ ಮೋಹವಂತೆ. ರಕುಲ್ ಹಾಟ್ ಪೋಟೋಸ್ ಹಾಗೂ ಸಮುದ್ರ ತೀರದ ವೈಯ್ಯಾರ ನೋಡಿದ ಅಭಿಮಾನಿಗಳು ಜಲಕನ್ಯೆ ಎಂದು ರೇಗಿಸಿದ್ದಾರೆ.

ನಟಿ ರಾಕುಲ್ ಪ್ರೀತ್ ಸಿಂಗ್ ಹಿಂದಿ, ತಮಿಳು, ತೆಲುಗು ಸಿನಿಮಾ ರಂಗದಲ್ಲಿ ಭಾರೀ ಬೇಡಿಕೆಯಿದೆ. ಈಗಾಗಲೇ ಈ ಮೂರು ಭಾಷೆಯ 6-7 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಿಷ್ ಅವರ ಹೊಸ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ರಾಕುಲ್. ‘ಸರ್ದಾರ್ & ಗ್ರ್ಯಾಂಡ್‌ಸನ್’ ಸಿನಿಮಾದಲ್ಲಿ ಅರ್ಜುನ್ ಕಪೂರ್‌ಗೆ ಅವರು ನಾಯಕಿಯಾಗಿದ್ದಾರೆ. ಬಹುನಿರೀಕ್ಷಿತ ‘ಇಂಡಿಯನ್ 2’, ‘ಅಯಲಾನ್’, ‘ಅಟ್ಯಾಕ್’, ‘ಚೆಕ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ : Payal Rajput Photoshoot : ನಟಿಮಣಿ ಪಾಯಲ್ ರಜಪೂತ್ ಪೋಟೋಶೂಟ್ ಗೆ ಹೆತ್ತಮ್ಮನೇ ಗರಂ
ಇದನ್ನೂ ಓದಿ : ಮತ್ತೆ ಮತ್ತೇರಿಸಿದ ಮಾದಕ ಚೆಲುವೆ : ಶ್ವೇತವಸ್ತ್ರದಲ್ಲಿ ಸನ್ನಿ ಸ್ಟನ್ನಿಂಗ್ ಲುಕ್
ಇದನ್ನೂ ಓದಿ : Santoor Beauty Akanksha Sharma Photo Shoot : ಸಂತೂರ್ ಮಮ್ಮಿಯ ಮತ್ತೆರಿಸೋ ಅವತಾರ : ಇಲ್ಲಿದೆ ಆಕಾಂಕ್ಷಾ ಅಂದದ ಅನಾವರಣ
( Rakul Preet Singh bikini photo shoot viral)