ಭಾನುವಾರ, ಏಪ್ರಿಲ್ 27, 2025
HomeCinemaRam charan teja Upasana Kamineni : ಮಗುವಿನ ಜೊತೆ ಆಸ್ಪತ್ರೆ ಮುಂದೆ ಪೋಸ್‌ ಕೊಟ್ಟ...

Ram charan teja Upasana Kamineni : ಮಗುವಿನ ಜೊತೆ ಆಸ್ಪತ್ರೆ ಮುಂದೆ ಪೋಸ್‌ ಕೊಟ್ಟ ರಾಮ್ ಚರಣ್, ಉಪಾಸನಾ ಕಾಮಿನೇನಿ

- Advertisement -

ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ (Ram charan teja Upasana Kamineni) ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇದೀಗ ತಮ್ಮ ಮಗುವಿನ ಜೊತೆಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಮಾಧ್ಯಮದವರು ಹಾಗೂ ಅಭಿಮಾನಿಗಳಿಗೆ ಮಗಳನ್ನು ತೋರಿಸಿದ್ದಾರೆ. ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ಗುಲಾಬಿಯ ಹೂಮಳೆ ಸುರಿಸಿದ್ದಾರೆ.

ಹೈದ್ರಾಬಾದ್‌ನ ಅಪೊಲೋ ಆಸ್ಪತ್ರೆಗೆಯಲ್ಲಿ ಉಪಾಸನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ರಾಮ್‌ ಚರಣ್‌ ಬಿಳಿ ಶರ್ಟ್, ನೀಲಿ ಡೆನಿಮ್‌ನಲ್ಲಿ ಮತ್ತು ಶೇಡ್‌ಗಳನ್ನು ಧರಿಸಿದ್ದರು. ಉಪಾಸನಾ ಫ್ಲೋರಲ್ ಮ್ಯಾಕ್ಸಿ ಡ್ರೆಸ್ ನಲ್ಲಿದ್ದರೆ ಮಗುವನ್ನು ಬಿಳಿಯ ಬಟ್ಟೆಯಿಂದ ಕವರ್‌ ಮಾಡಲಾಗಿತ್ತು. ಈ ವೇಳೆಯಲ್ಲಿ ಮಾತನಾಡಿದ ರಾಮ್‌ ಚರಣ್‌, ತಮ್ಮ ಅಭಿಮಾನಿಗಳು ಹಾಗೂ ಹಿತೈಶಿಗಳ ಆಶೀರ್ವಾದಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೇ ನಾವು ತುಂಬಾ ಅದೃಷ್ಟವಂತರು. ಆಸ್ಪತ್ರೆಯ ವೈದ್ಯರು ಸಾಕಷ್ಟು ಕೇರ್‌ ಮಾಡಿದ್ದಾರೆ. ಉಪಾಸನಾ ಮತ್ತು ಮಗುವಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಇನ್ನು ಮೆಗಾಸ್ಟಾರ್‌ ಚಿರಂಜೀವಿ ಮೊನ್ನೆಯಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗಳನ್ನು ನೋಡಿ ಸಂಭ್ರಮಿಸಿದ್ದರು. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ನಮ್ಮ ಕುಟುಂಬ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದರು. ರಾಮ್ ಚರಣ್ ಮತ್ತು ಉಪಾಸನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ವರ್ಷಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ರಾಮ್‌ ಚರಣ್‌ ನಟನೆಯ RRR ಸಿನಿಮಾ ವಿಶ್ವಮಟ್ಟದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿಕೊಂಡಿತ್ತು. ಆಸ್ಕರ್‌ ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು. ಅದ್ರಲ್ಲೂ ನಾಟು ನಾಟು ಸಿನಿಮಾ ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿದೆ. ಸಾಲು ಸಾಲು ಸೂಪರ್‌ ಹಿಟ್‌ ಸಿನಿಮಾಗಳಿಂದಾಗಿ ಸಖತ್‌ ಖುಷಿಯಾಗಿರುವ ರಾಮ್‌ ಚರಣ್‌, ಇದೀಗ ಹೆಣ್ಣು ಮಗುವಿನ ಜನನ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ : Rashmika Mandanna : ಮ್ಯಾನೇಜರ್ ನನಗೆ ಮೋಸ ಮಾಡಿಲ್ಲ ಎಂದ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Hamsalekha’s birthday : ಸ್ಯಾಂಡಲ್‌ವುಡ್‌ ನಾದಬ್ರಹ್ಮ ಹಂಸಲೇಖ ಅವರಿಗೆ ಹುಟ್ಟುಹಬ್ಬ ಸಂಭ್ರಮ

ಮೆಗಾಸ್ಟಾರ್‌ ಚಿರಂಜೀವಿ ಅವರ ಪುತ್ರ ರಾಮ್‌ ಚರಣ್‌ ತೇಜಾ ಅಪೊಲೊ ಚಾರಿಟೀಯ ಉಪಾಧ್ಯಕ್ಷ ಹಾಗೂ ಬಿ ಪಾಸಿಟಿವ್‌ ನಿಯತಕಾಲಿಕದ ಮುಖ್ಯ ಸಂಪಾದಕಿಯಾಗಿದ್ದ ಉಪಾಸನಾ ಕಾಮಿನೇನಿ ಅವರನ್ನು ಮದುವೆಯಾಗಿದ್ದರು. ಉಪಾಸಣಾ ಭಾರತ ಪ್ರಖ್ಯಾತ ಹಾಸ್ಪಿಟಲ್‌ ಅಪೋಲೋ ಹಾಸ್ಪಿಟಲ್ಸ್‌ನ ಸ್ಥಾಪಕ ಪ್ರತಾಪ್‌ ಸಿ.ರೆಡ್ಡಿ ಅವರ ಮೊಮ್ಮಗಳು. ರಾಮಚರಣ್‌ ತೇಜಾ ಪೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಮೂರು ಬಾರಿ ಫಿಲ್ಮ್‌ ಫೇರ್‌ ಪ್ರಶಸ್ತಿ, ನಂದಿ ಪ್ರಶಸ್ತಿ ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುವ ನಟರಲ್ಲಿ ರಾಮ್‌ ಚರಣ್‌ ಕೂಡ ಒಬ್ಬರು. ಚಿರುತ ಸಿನಿಮಾದ ಮೂಲಕ ಸಿನಿರಂಕ್ಕೆ ಎಂಟ್ರಿಕೊಟ್ಟ ರಾಮ್‌ ಚರಣ್‌ ನಟನೆಯ RRR ಸಿನಿಮಾ 1200 ಕೋಟಿ ರೂಪಾಯಿ ಆದಾಯವನ್ನು ಗಳಿಸಿತ್ತು.

Ram charan teja Upasana Kamineni : Ram Charan, Upasana Kamineni posed in front of the hospital with the baby

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular