ಸೋಮವಾರ, ಏಪ್ರಿಲ್ 28, 2025
HomeCinemaRamya ನಟಿ Chethana Raj ಸಾವಿಗೆ ರಮ್ಯ ವಿಷಾದ : ಸ್ಯಾಂಡಲ್ ವುಡ್ ನಲ್ಲಿ ನಣಿಮಣಿಯರಿಗೆ...

Ramya ನಟಿ Chethana Raj ಸಾವಿಗೆ ರಮ್ಯ ವಿಷಾದ : ಸ್ಯಾಂಡಲ್ ವುಡ್ ನಲ್ಲಿ ನಣಿಮಣಿಯರಿಗೆ ಮಾತ್ರ ಬ್ಯೂಟಿಪ್ರೆಶರ್

- Advertisement -

ನಟಿ ಚೇತನಾ ರಾಜ್ (Chethana Raj ) ಕಾಸ್ಮೆಟಿಕ್ ಸರ್ಜರಿಗೆ ಬಲಿಯಾಗುತ್ತಿದ್ದಂತೆ ಮತ್ತೊಮ್ಮೆ ಸ್ಯಾಂಡಲ್ ವುಡ್ ಹಾಗೂ ಕನ್ನಡ ಕಿರುತೆರೆಯಲ್ಲೂ ನಟಿಮಣಿಯರು ಎದುರಿಸುವ ಬಾಡಿ ಶೇಮಿಂಗ್ ಹಾಗೂ ಟೀಕೆ, ಸವಾಲುಗಳ ಬಗ್ಗೆಯೂ ಚರ್ಚೆ ಆರಂಭಗೊಂಡಿದೆ. ಈ‌ ಮಧ್ಯೆ ಸ್ಯಾಂಡಲ್ ವುಡ್ ನಟಿಯರು ಅನುಭವಿಸುತ್ತಿರುವ ಒತ್ತಡದ ಬಗ್ಗೆ ಕನ್ನಡದ ನಂಬರ್ ಒನ್ ಖ್ಯಾತಿಯ ನಟಿ ರಮ್ಯ (Ramya) ದ್ವನಿ‌ಎತ್ತಿದ್ದಾರೆ. ವಿವರವಾದ ಟ್ವೀಟ್ ಮೂಲಕ ರಮ್ಯ ‌ನಟಿಮಣಿಯರ ಸಂಕಷ್ಟ ಬಿಚ್ಚಿಟ್ಟಿದ್ದಾರೆ.

ಯುವ ನಟಿ ಚೇತನಾರಾಜ್ ನಿಧನಕ್ಕೆ ಸಂತಾಪ ಸೂಚಿಸಿರೋ ನಟಿ ರಮ್ಯ, ನಾನು ಕಾಲಿನ ಟ್ಯೂಮರ್ ತೆಗೆಸಿಕೊಂಡ ಬಳಿಕ ಆ ಸರ್ಜರಿ ಎಫೆಕ್ಟ್ ನಿಂದ ತೂಕ ಹೆಚ್ಚಿಸಿಕೊಂಡಿದ್ದೆ. ಈಗ ಸಣ್ಣಗಾಗುವ ಜರ್ನಿಯಲ್ಲಿದ್ದೇನೆ. ಆದರೆ ಇದೇ ಒತ್ತಡದ ಕಾಸ್ಮೆಟಿಕ್ ಸರ್ಜರಿಯಿಂದ ಯುವನಟಿ ನಿಧನರಾಗಿದ್ದು ತಿಳಿದು ಖೇದವಾಯಿತು ಎಂದು ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಡಸ್ಟ್ರಿಯಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಸೌಂದರ್ಯದ ಮಾನದಂಡವಿದೆ. ಆದರೆ ಪುರುಷರಿಗೆ ಇದ್ಯಾವುದು ಅಪ್ಲೈಯಾಗೋದಿಲ್ಲ. ಹೀರೋಗಳು 65 ವರ್ಷವಾಗಿ ತಲೆ ಕೂದಲು ಉದುರಿ ಹೋಗಿದ್ದರೂ ವಿಗ್ ಧರಿಸಿ ಹಿರೋಗಳಾಗಿ‌ ಮಿಂಚಬಹುದು. ಆದರೆ ಮಹಿಳೆಯರು ಮಾತ್ರ ತುಂಬ ಸೌಂದರ್ಯವಂತೆ ಆಗಿರಬೇಕೆಂದು ನೀರಿಕ್ಷಿಸಲಾಗುತ್ತದೆ. ಇದು ಸರಿಯಲ್ಲ. ‌ನಣಿಮಣಿಯರೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ನೀವು ಹೇಗಿರಬೇಕು ಎಂಬುದನ್ನು ಬೇರೆಯವರು ನಿಯಂತ್ರಿಸಲು ಬಿಡಬೇಡಿ. ಇನ್ನಾದರೂ ಈ ನಿಯಮವನ್ನು ಬದಲಾಯಿಸೋಣ ಎಂದು ರಮ್ಯ ಟ್ವೀಟ್ ಮಾಡಿದ್ದಾರೆ.

ಈ ಹಿಂದೆಯೂ ನಟಿಮಣಿಯರಾದ ಅದಿತಿ, ಅಮೃತಾ ಅಯ್ಯಂಗಾರ್ ಕೂಡಾ ಸ್ಯಾಂಡಲ್ ವುಡ್ ನಲ್ಲಿ ನಟಿಮಣಿಯರಿಗೆ ಮಾತ್ರ ವಿಶೇಷವಾದ ನಿಯಮವಿದೆ. ಮಹಿಳೆಯರು ಮಾತ್ರ ಸುಂದರವಾಗಿರಬೇಕು, ಮದುವೆ ಆಗಿರಬಾರದು, ಕಮಿಟ್ ಆಗಿರಬಾರದೆಂಬ ನಿಯಮವಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ರಮ್ಯ ಕೂಡ ಈ ಅಸಮಾನತೆ ವಿರುದ್ಧ ಧ್ವನಿ‌ಎತ್ತಿದ್ದಾರೆ. ನಟಿ ಚೇತನಾ ರಾಜ್ ಹೊಸ ಸಿನಿಮಾ ಹಾಗೂ ಧಾರಾವಾಹಿಗೆ ಅವಕಾಶ ಪಡೆದಿದ್ದರಂತೆ. ಆದರೆ ಅವರಿಗೆ ನೀವು ದಪ್ಪ ಇದ್ದೀರಿ, ನಿಮ್ಮ ಸೊಂಟದ ಸುತ್ತಲೂ ಹೆಚ್ಚಿನ ಕೊಬ್ಬಿದೆ ಎಂದು ಹೇಳಿದ್ದರಂತೆ. ಇದೇ ಕಾರಣಕ್ಕೆ ಚೇತನಾ ರಾಜ್ ಕಾಸ್ಮೆಟಿಕ್ ಸರ್ಜರಿಗೆ ಹೋಗಿ ಸಾವು ತಂದುಕೊಂಡಿದ್ದಾರೆ. ರಮ್ಯ ಕೇವಲ ಕಾಸ್ಮೆಟಿಕ್ ಸರ್ಜರಿ ಮಾತ್ರವಲ್ಲ ಮಹಿಳೆಯರು ಪುರುಷರ ಪಾತ್ರದ ಅಸಮಾನತೆ, ಗೌರವಧನ ಅಸಮಾನತೆ ಸೇರಿದಂತೆ ಹಲವು ವಿಚಾರಗಳನ್ನು ತಮ್ಮ ಈ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : Cosmetic Surgery : ಸೌಂದರ್ಯ ವರ್ಧಕ ಸರ್ಜರಿ : ಇದುವರೆಗೂ ಬಲಿಯಾದ ನಟ, ನಟಿಯರೆಷ್ಟು ? ಇಲ್ಲಿದೆ ಡಿಟೇಲ್ಸ್

ಇದನ್ನೂ ಓದಿ : Chetna Raj Dies : ಫ್ಯಾಟ್‌ ಸರ್ಜರಿ ವೇಳೆ ಎಡವಟ್ಟು : ದೊರೆಸಾನಿ ಧಾರವಾಹಿ ನಟಿ ಚೇತನಾ ರಾಜ್‌ ಸಾವು

Ramya mourns the death of Chethana Raj, Talk about Challenge faced actress in industry

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular