ಮಂಗಳವಾರ, ಏಪ್ರಿಲ್ 29, 2025
HomeCinemaHondisi Bareyiri:"ಹೊಂದಿಸಿ ಬರೆಯಿರಿ" ಚಿತ್ರದ "ಓ ಕವನ" ಹಾಡು ಬಿಡುಗಡೆ ಮಾಡಿದ ಮೋಹಕತಾರೆ ರಮ್ಯಾ

Hondisi Bareyiri:”ಹೊಂದಿಸಿ ಬರೆಯಿರಿ” ಚಿತ್ರದ “ಓ ಕವನ” ಹಾಡು ಬಿಡುಗಡೆ ಮಾಡಿದ ಮೋಹಕತಾರೆ ರಮ್ಯಾ

- Advertisement -

(Hondisi Bareyiri)ಇತ್ತಿಚೀನ ದಿನಗಳಲ್ಲಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಅಭಿಮಾನಿಗಳಿಗೂ ಸಹ ಪ್ರತಿಕ್ರಿಯಿಸುವ ಮೂಲಕ ಸಂತೋಷ ಪಡಿಸಿದ್ದಾರೆ. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ತೆರೆಗೆ ಬರಲು ಸಜ್ಜಾಗಿರುವ ಹೊಸಬರ ಸಿನಿಮಾ ಹೊಂದಿಸಿ ಬರೆ ಸಿನಿಮಾದ ಓ ಕವನ ಹಾಡವನ್ನು ಬಿಡುಗಡೆಗೊಳಿಸುವ ಜೊತೆಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟ ನವೀನ್‌ ಶಂಕರ್‌ ತಮ್ಮ ಇನ್ಟಾಗ್ರಾಂ ಪೇಜ್‌ ನಲ್ಲಿ ಹೊಂದಿಸಿ ಬರೆ ಸಿನಿಮಾದ ಹಾಡಿನ ತುಣುಕನ್ನು ಶೇರ್‌ ಮಾಡುವ ಮೂಲಕ ರಮ್ಯಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸಿನಿಮಾದ ಈ ಹಿಂದಿನ ಹಾಡು ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಓ ಕವನ ಹಾಡು ಕೂಡ ಸಕ್ಸಸ್‌ ಆಗಲಿದೆ ಅನ್ನೋ ಆಶಯ ಹೊಂದಿದೆ ಚಿತ್ರತಂಡ. ನವೆಂಬರ್‌ 18ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಸಿನಿಮಾದಲ್ಲಿ ಕಲರ್ ಫುಲ್ ತಾರಾಬಗಳವಿದೆ. ಪ್ರವೀಣ್‌ ತೇಜ್‌, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್‌, ಭಾವನಾ ರಾವ್‌, ನವೀನ್‌ ಶಂಕರ್‌, ಅರ್ಚನಾ ಜೋಯಿಸ್‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್‌ ಪುರಾಣಿಕ್‌, ಪ್ರವೀಣ್‌ ಡಿ ರಾವ್‌, ಧರ್ಮೇಂದ್ರ ಅರಸ್‌, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:Puneeth Rajkumar :ಅಣ್ಣಾವ್ರ ಜೊತೆ ಅಪ್ಪು : ಅಪರೂಪದ ಪೋಟೋ ವೈರಲ್

ಇದನ್ನೂ ಓದಿ:World Cadets Chess : ವಿಶ್ವ ಚೆಸ್‌ ಚಾಂಪಿಯನ್‌ ಶಿಪ್‌ ಗೆಲುವನ್ನು ಪುನೀತ್‌ ರಾಜ್‌ಕುಮಾರ್‌ಗೆ ಸಮರ್ಪಿಸಿದ ಪುಟ್ಟ ಪೋರಿ ಎ ಚಾರ್ವಿ

ಇದನ್ನೂ ಓದಿ:Galipata 2 : ದಸರಾ ಧಮಾಕ..ಜೀ5 ಒಟಿಟಿಗೆ ಬರ್ತಿದೆ ಭಟ್ರು-ಗಣೇಶ್ ಕಾಂಬಿನೇಶನ್‌ ಚಿತ್ರ “ಗಾಳಿಪಟ 2

ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದ್ದು, ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, “ಸಂಡೇ ಸಿನಿಮಾಸ್ “ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

Ramya released the song “oh kavana” from the movie “hondisi bareyiri”.

RELATED ARTICLES

Most Popular